ಒಮ್ಮೆ ಒಬ್ಬ ಬಾಯ್‌ಫ್ರೆಂಡ್‌ನನ್ನು ಇರುವುದಲ್ಲ, ನಾಳ್ವರು ಬಾಯ್‌ಫ್ರೆಂಡ್ಸ್ ಆದ್ರೂ ಇರಲಿ ಎಂದು ಅಪ್ಪ ಹೇಳಿದ್ದನ್ನು ನಟಿ ಟ್ವಿಂಕಲ್ ಖನ್ನಾ ನೆನಪಿಸಿಕೊಂಡಿದ್ದಾರೆ. ತಂದೆಯ ಪುಣ್ಯತಿಥಿಯಂದು ಟ್ವಿಂಕಲ್ ತಂದೆ ರಾಜೇಶ್ ಖನ್ನಾ ಹಾಗೂ ಡಿಂಪಲ್ ಕಾಪಾಡಿಯಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಡಿಂಪಲ್ ಕಪಾಡಿಯಾ ಅವರು ರಾಜೇಶ್ ಖನ್ನ ಅವರ ಗಲ್ಲ ಹಿಡಿದಿರುವ ಹಳೇ ಫೋಟೋವನ್ನು ಶೇರ್ ಮಾಡಿದ್ದಾರೆ ಟ್ವಿಂಕಲ್ ಖನ್ನಾ. ಶನಿವಾರ ರಾಜೇಶ್ ಖನ್ನಾ ಅವರ ಪುಣ್ಯ ತಿಥಿಯಾಗಿದ್ದು, ಫೋಟೋ ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ ನಿರ್ಮಾಪಕಿ.

ಕೊರೋನಾ ಸಮರಕ್ಕೆ 25 ಕೋಟಿ ರು. ದೇಣಿಗೆ ನೀಡಿದ ಅಕ್ಷಯ್, ಪತ್ನಿಯ ರಿಯಾಕ್ಷನ್ ಹೀಗಿತ್ತು!

ಅಭಿಮಾನಿಯೊಬ್ಬರು ಶೇರ್ ಮಾಡಿದ್ದ ಫೋಟೋವನ್ನು ಟ್ವಿಂಕಲ್ ಖನ್ನಾ ಅದರ ಜೊತೆಗೆ ಏನನ್ನೂ ಬರೆದಿಲ್ಲ. ಫೋಟೋ ಶೇರ್ ಮಾಡಿದ್ದ ಅಭಿಮಾನಿ, ಏ ಹೀ ಜಾತಾ ಹೇ, ಜಿಸ್‌ ಪೆ ದಿಲ್ ಆನಾ ಹೋತಾ ಹೈ ಎಂದು ಬರೆದಿದ್ದಾರೆ.

ಅಪ್ಪಂದಿರ ದಿನದಂದು ಟ್ವಿಂಕಲ್ ತಮ್ಮ ವೆಬ್‌ಸೈಟ್‌ನಲ್ಲಿ ತಂದೆಯ ಬಗ್ಗೆ ಬರೆದಿದ್ದರು. ಅಪ್ಪನಿಗೆ ಅಮ್ಮ ಕೊಟ್ಟ ಬೆಸ್ಟ್ ಗಿಫ್ಟ್ ನಾನು ಎಂದು ಅಪ್ಪ ಅಮ್ಮನಲ್ಲಿ ಹೇಳಿದ್ದರು. ಅವರು ನನ್ನನ್ನು ಬೇಬಿ ಎಂದು ಕರೆಯುತ್ತಿರಲಿಲ್ಲ, ಬದಲಾಗಿ ಟಿನಾ ಬಾಬ ಎಂದೇ ಕರೆಯುತ್ತಿದ್ದರು. ಆ ಸಂದರ್ಭ ತಿಳಿದಿರಲಿಲ್ಲ. ಆದರೆ ನನ್ನ ವಯಸ್ಸಿನ ಎಲ್ಲ ಮಕ್ಕಳಿಗಿಂತ ಭಿನ್ನವಾಗಿ ಬೆಳೆಸಿದ್ದರು ಅಪ್ಪ.

ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

ರಿಲೇಷನ್‌ಶಿಪ್ ಬಗ್ಗೆ ಸಲಹೆ ಕೊಡುತ್ತಿದ್ದ ಅಪ್ಪ, ಯಾವಾಗಲೂ ಒಂದೇ ಸಮಯಕ್ಕೆ ನಾಲ್ವರು ಬಾಯ್‌ಫ್ರೆಂಡ್ಸ್ ಆದರೂ ಇರಲಿ ಎನ್ನುತ್ತಿದ್ದರು. ಈ ಮೂಲಕ ಪ್ರೀತಿ ಕಳೆದುಕೊಂಡು ಬೇಕ್‌ಅಪ್‌ ನೋವು ಅನುಭವಿಸುವಂತಾಗುವುದಿಲ್ಲ ಎನ್ನುವುದಾಗಿತ್ತು ಅವರ ನಿಲುವು ಎಂದಿದ್ದಾರೆ.

ಆರ್ಟ್‌ ಗ್ಯಾಲರಿಯಲ್ಲ ಈ ಬಂಗಲೆ, ಬದಲಾಗಿ ಬಾಲಿವುಡ್‌ ಕಪಲ್ ಮನೆ!

ಅಪ್ಪ ನನಗೆ ಮೊದಲ ಬಾರಿ ಮದ್ಯ ಟೇಸ್ಟ್ ಮಾಡಿಸಿದ್ದರು. ನನ್ನ ಪುಟ್ಟ ಕೈಗಳಲ್ಲಿ ಹಿಡಿಯಕಾಗದ ಭಾರದ ಗ್ಲಾಸ್‌ನಲ್ಲಿ ಸ್ಕಾಚ್ ಕೊಟ್ಟಿದ್ದರು ಎಂದು ಬರೆದುಕೊಂಡಿದ್ದರು. ಟ್ವಿಂಕಲ್ ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿದ್ದು, ನಿತಾರಾ ಹಾಗೂ ಆರವ್ ಎಂಬ ಇಬ್ಬರು ಮಕ್ಕಳಿದ್ದಾರೆ.