'ಮಿಷನ್ ಮಂಗಲ್' ಹೀರೋ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ಹೊರಗಡೆಯೂ ಅವರ ಸೆನ್ಸ್ ಆಫ್ ಹ್ಯೂಮರ್ ಸೂಪರ್.  ಸದ್ಯ ಎಲ್ಲಾ ಕಡೆ ಈರುಳ್ಳಿ ಬೆಲೆ ಏರಿಕೆಯದ್ಧೇ ಸುದ್ದಿ.  ಇದರ ಬಗ್ಗೆ ಸಾಕಷ್ಟು ಜೋಕ್‌ಗಳು ಹರಿದಾಡುತ್ತಲೇ ಇವೆ.  ನಮ್ಮ ಆfಯಕ್ಷನ್ ಹೀರೋ ಕೂಡಾ ಈರುಳ್ಳಿ ಬಗ್ಗೆ ಜೋಕ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. 

ರಿಲೀಸ್ ದಿನವೇ ಕಣ್ಣೀರಿಟ್ಟ 'ಒಡೆಯ' ಚಿತ್ರದ ನಟಿ!

ಅಕ್ಷಯ್ ಕುಮಾರ್, ಕರೀನಾ ಕಪೂರ್, ಕಿಯಾರಾ ಅಡ್ವಾನಿ ಜೊತೆ 'ಗುಡ್ ನ್ಯೂಸ್' ಎನ್ನುವ ಸಿನಿಮಾ ಮಾಡ್ತಾ ಇದ್ದಾರೆ.  ಚಿತ್ರದ ಪ್ರಮೋಶನ್‌ಗಾಗಿ ಚಿತ್ರತಂಡ ಕಪಿಲ್ ಶರ್ಮಾ ಶೋಗೆ ಹೋಗಿತ್ತು. ಆಗ ಕರೀನಾಗೆ ಇಂಪ್ರೆಸ್ ಮಾಡಲು ಅಕ್ಷಯ್ ಆನಿಯನ್ ಇಯರ್ ರಿಂಗನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅದನ್ನು ನೋಡಿ ಕರೀನಾ ಇಂಪ್ರೆಸ್ ಆಗಲೇ ಇಲ್ಲ! ಕೊನೆಗೆ ವಿಧಿಯಿಲ್ಲದೇ ಅದನ್ನು ತಂದು ಪತ್ನಿಗೆ ಕೊಟ್ಟಿದ್ದಾರೆ. 

ಅನುಗೆ ಟ್ರಾನ್ಸಫರ್ ಕೊಟ್ಟಿದ್ದೇ TRP ಕುಸಿಯೋದಕ್ಕೆ ಕಾರಣವಾಯ್ತಾ?

ಆನಿಯನ್ ರಿಂಗ್ ಫೋಟೋ ಶೇರ್ ಮಾಡಿದ ಅಕ್ಷಯ್,  ಕಪಿಲ್ ಶರ್ಮಾ ಶೋನಲ್ಲಿ ಕರೀನಾಳನ್ನು ಇಂಪ್ರೆಸ್ ಮಾಡಲು ಅಕ್ಷಯ್ ಇದನ್ನು ಕೊಟ್ಟಿದ್ದಾರೆ.  ಅವರು ಇಂಪ್ರೆಸ್ ಆದಂತೆ ಕಾಣಿಸಲಿಲ್ಲ. ಅಕ್ಷಯ್ ಈ ಸೆನ್ಸ್ ಆಫ್ ಹ್ಯೂಮರ್ ನಿಮಗೆಲ್ಲಾ ಇಷ್ಟವಾಯಿತು ಅಂದುಕೊಳ್ಳುತ್ತೇನೆ. ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು, ಸಿಲ್ಲಿ ಸಿಲ್ಲಿ ಸಂಗತಿಗಳು ಮನಸ್ಸಿಗೆ ಖುಷಿ ಕೊಡುತ್ತವೆ' ಎಂದು ಬರೆದುಕೊಂಡಿದ್ದಾರೆ. 

 

ಸದ್ಯ ಅಕ್ಷಯ್ ಕುಮಾರ್ ಗುಡ್ ನ್ಯೂಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಕಿಯಾರಾ ಅಡ್ವಾಣಿ, ಕರೀನಾ ಕಪೂರ್ ಹಾಗೂ ದಿಲ್ಜಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.