ಆರ್ಟ್ ಗ್ಯಾಲರಿಯಲ್ಲ ಈ ಬಂಗಲೆ, ಬದಲಾಗಿ ಬಾಲಿವುಡ್ ಕಪಲ್ ಮನೆ!
ಬಾಲಿವುಡ್‌ನ ಫೇಮಸ್ ಸ್ಟಾರ್ ಜೋಡಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಕೂಡ ಸೇರುತ್ತಾರೆ. ಅಕ್ಷಯ್ ಕುಮಾರ್ ಇನ್ನೂ ಹಿಟ್ ಚಿತ್ರಗಳನ್ನು ನೀಡುತ್ತಾ ಫಿಲ್ಮಂಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಟ್ವಿಂಕಲ್ ಕೂಡ ಬಾಲಿವುಡ್‌ನ ಸ್ಟಾರ್ ನಟಿಗಳಲ್ಲಿ ಒಬ್ಬರು. ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಇವರು ಈಗ ನಟನೆಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿರುವ ಇವರ ಮನೆ ಯಾವ ಆರ್ಟ್ ಗ್ಯಾಲರಿಗೂ ಕಡಿಮೆ ಇಲ್ಲ. ಮುಂಬೈನ ಜುಹುನಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿರುವ ಕಲಾತ್ಮಕ ಡ್ಯುಪ್ಲೆಕ್ಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ಸ್ಟಾರ್ ದಂಪತಿ. ಸ್ವತಃ ಇಂಟಿರೀಯರ್ ಡೆಕೊರೇಟರ್ ಆಗಿರುವ ಟ್ವಿಂಕಲ್‌ರ ಕೈಚಳಕ ಮನೆಯಲ್ಲಿ ಎದ್ದು ಕಾಣುತ್ತದೆ.
ಈ ಐಷಾರಾಮಿ ಬಂಗ್ಲೆಯಲ್ಲಿರುವ ಸ್ಪೇನ್‌ನ ಬೇಬಿ ಜೀಸಸ್ ಮೂರ್ತಿಯಿಂದ ಹಿಡಿದು ಇನ್‌ಡೋರ್ ಪೂಲ್‌ಗೆ ಹಾಕಿರುವ ಕ್ಲೋವ್ ಸ್ಟುಡಿಯೊದ 13 ಭಾಗಗಳ ಪೆಂಡೆಂಟ್ ಲೈಟ್‌ವರೆಗೆ ಹಾಗೂ ಸಮಕಾಲೀನ ಕಲೆ, ಫ್ಯಾಮಿಲಿ ಫೋಟೋಗ್ರಾಫ್‌ಗಳು ಮತ್ತು ಕಲಾಕೃತಿಗಳು ಅತ್ಯುತ್ತಮವಾಗಿದೆ.
ಸ್ಟಾರ್ ದಂಪತಿ ಜುಹುನಲ್ಲಿ ಡ್ಯುಪ್ಲೆಕ್ಸ್ ಫ್ರೆಂಟ್ ಗಾರ್ಡನ್‌ನಿಂದ ಅರೇಬಿಯನ್ ಸೀಯ ಅದ್ಭುತ ನೋಟ ಕಾಣಬಹುದು.
ದಿ ವೈಟ್ ವಿಂಡೋ ಎಂಬ ಮನೆ ಹೋಮ್ ಡೆಕೋರ್ ಶಾಪ್ ನೆಡೆಸುತ್ತಿರುವ ಟ್ವಿಂಕಲ್ ಖನ್ನಾ ಸ್ವತಃ ಮನೆ ಅಲಂಕಾರವನ್ನು ನಿರ್ವಹಿಸಿದ್ದಾರೆ,
ಲೀವಿಂಗ್ ರೂಮ್‌ನ ಗೋಡೆಯನ್ನು ಅಲಂಕರಿಸಿದೆ ರಾಜೇಶ್ವರ ರಾವ್ ಅವರ "ಇಂಡಿಯನ್ ಜೇಮ್ಸ್ ಬಾಂಡ್ " ಕಲಾಕೃತಿ.
ಅಕ್ಷಯ್ ಸ್ಪೇನ್‌ನಿಂದ ಆರಿಸಿ ತಂದ ಬೇಬಿ ಜೀಸಸ್ ಮತ್ತು ಮದರ್ ಮೇರಿ ವಿಗ್ರಹಗಳು.
ಮನೆಯ ಡೈನಿಂಗ್ ಏರಿಯಾ - ಡೈನಿಂಗ್ ಸೆಟ್ ಗುಡ್ ಅರ್ಥ್ ಬ್ರಾಂಡ್‌ನದು.
ಫಸ್ಟ್ ಫ್ಲೋರ್‌ನಲ್ಲಿ ಬೆಡ್ ರೂಮ್‌ಗಳು, ಟ್ವಿಂಕಲ್‌ಳ ಹೋಮ್ ಅಫೀಸ್, ಒಂದು ಪ್ಯಾಂಟ್ರಿ ಮತ್ತು ಬಾಲ್ಕನಿ ಇದೆ.
ಡ್ಯುಪ್ಲೆಕ್ಸ್‌ನ ಗ್ರೌಂಡ್ ಪ್ಲೋರ್‌ನಲ್ಲಿರುವುದು ಅಕ್ಷಯ್ ಕುಮಾರ್‌ರ ವಾಕ್ ಇನ್ ಕ್ಲೋಸೆಟ್, ಅಡುಗೆ ಮನೆ ಮತ್ತು ಹೋಮ್ ಥೇಟರ್.