ಧುರಂಧರ್-2 ಚಿತ್ರದ ಅಬ್ಬರದ ಯಶಸ್ಸಿನಿಂದಾಗಿ, ಅದೇ ದಿನ ಬಿಡುಗಡೆಯಾಗಬೇಕಿದ್ದ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವನ್ನು ಮುಂದೂಡಿದ್ದು ಉತ್ತಮ ನಿರ್ಧಾರವಾಯಿತು. ಈಗ 'ಟಾಕ್ಸಿಕ್' ಚಿತ್ರಕ್ಕೆ ಎದುರಾಗಿ 'ಧುರಂಧರ್-3' ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದರ ಹಿಂದಿನ ಸತ್ಯಾಸತ್ಯತೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಅಸಲಿಗೆ ಧುರಂಧರ್-2 ರಿಲೀಸ್ ದಿನವೇ ಟಾಕ್ಸಿಕ್ ಮೂವಿ ಕೂಡ ರಿಲೀಸ್ ಆಗಬೇಕಿತ್ತು. ಆದ್ರೆ ಯುದ್ಧದ ಕಾರಣಕ್ಕೆ ಸಿನಿಮಾನ ಪೋಸ್ಟ್ ಪೋನ್ ಮಾಡಲಾಯ್ತು. ಈಗ ಧುರಂಧರ್ ಅಬ್ಬರ ನೋಡಿದ್ರೆ ಪೋಸ್ಟ್ ಪೋನ್ ಮಾಡಿದ್ದೇ ಒಳ್ಳೇದಾಯ್ತು ಅಂದುಕೊಳ್ತಾ ಇದ್ದಾರೆ ಟಾಕ್ಸಿಕ್ ಮೇಕರ್ಸ್. ಆದ್ರೆ ಮತ್ತೆ ಟಾಕ್ಸಿಕ್ ಎದುರು ಧುರಂಧರ್-3 ಬರೋದಕ್ಕೆ ಸಜ್ಜಾಗ್ತಾ ಇದೆಯಾ? ಈ ಕುರಿತ ಅಸಲೀಯತ್ತು ಏನು? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಧುರಂಧರ್-2 ಅಬ್ಬರ ನೋಡಿ ನಿಟ್ಟುಸಿರು ಬಿಟ್ಟ ಯಶ್..!

ಯೆಸ್ ಸದ್ಯ ಧುರಂಧರ್ -2 ಸಿನಿಮಾ ಮಾಡ್ತಾ ಇರೋ ಮೋಡಿ ಕಂಡು ಇಡೀ ಸಿನಿರಂಗವೇ ಬೆಚ್ಚಿಬಿದ್ದಿದೆ. ಬಾಲಿವುಡ್​ ಅಂತೂ ತನ್ನ ಶತಮಾನಗಳ ಇತಿಹಾಸದಲ್ಲೇ ಇಂಥಾ ಓಪನಿಂಗ್ ನೋಡಿರಲಿಲ್ಲ ಅಂತಿದೆ. ಅಸಲಿಗೆ ಧುರಂಧರ್-2 ಬಿಡುಗಡೆಯ ದಿನವೇ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಬೇಕಿತ್ತು. ಒಂದು ವೇಳೆ ರಿಲೀಸ್ ಆಗಿದ್ರೆ, ಎರಡರ ನಡುವೆ ಶತಮಾನದ ಬಾಕ್ಸಾಫೀಸ್ ಕದನ ನಡೆಯೋದು ಖಚಿತವಾಗಿತ್ತು.

ಮಧ್ಯಪ್ರಾಚ್ಯ ಯುದ್ಧದ ನೆಪದಲ್ಲಿ ಟಾಕ್ಸಿಕ್ ಟೀಂ ರಿಲೀಸ್​ನ ಮುಂದಕ್ಕೆ ಹಾಕಿತು. ಆ ಯುದ್ಧದ ನೆಪದಲ್ಲಿ ಈ ಯುದ್ಧ ನಿಲ್ತು. ಸದ್ಯ ಧುರಂಧರ್ ಅಬ್ಬರ ನೋಡಿದ ಮೇಲೆ ಯುದ್ಧ ಮಾಡದೇ ಇದ್ದಿದ್ದೇ ಒಳ್ಳೆದಾಯ್ತು ಅಂದುಕೊಳ್ತೀದೆ ಟಾಕ್ಸಿಕ್ ತಂಡ. ಟಾಕ್ಸಿಕ್‌ಗೂ ದೊಡ್ಡ ಓಪನಿಂಗ್ ಸಿಕ್ತಾ ಇತ್ತು ಅನ್ನೋದು ನಿಜವೇ ಆದ್ರೂ ಉತ್ತರ ಭಾರತದಲ್ಲಿ ಧುರಂಧರ್-2 ಮುಂದೆ ಟಾಕ್ಸಿಕ್ ಆಟ ನಡೀತಿರಲಿಲ್ಲ. ದಕ್ಷಿಣದಲ್ಲಿ ದೊಡ್ಡ ಕಮಾಯಿ ಮಾಡಿದ್ರೂ ಧುರಂಧರ್​ ನಷ್ಟು ಹಣ ಗಳಿಸೋದು ಟಾಕ್ಸಿಕ್‌ಗೆ ಸಾಧ್ಯವಿರಲಿಲ್ಲ.

ಜೂನ್​ ತಿಂಗಳಲ್ಲಿ ಟಾಕ್ಸಿಕ್ Vs ಧುರಂಧರ್ -3?

ಯೆಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿದೆ. ಜೂನ್ 12ಕ್ಕೆ ಧುರಂಧರ್-3 ಬರಲಿದೆ ಅಂತ. ಟಾಕ್ಸಿಕ್ ಜೂನ್ 4 ಬಂದ್ರೆ ಮುಂದಿನ ವಾರವೇ ಮತ್ತೆ ಧುರಂದರ್ ಬಂದು ಟಾಕ್ಸಿಕ್‌ಗೆ ಕಾಟ ಕೊಡ್ತಾನೆ ಅಂತ ಪೋಸ್ಟ್ ವೈರಲ್ ಆಗಿದೆ. ಆದ್ರೆ ಧುರಂಧರ್ ತಂಡ ಪಾರ್ಟ್​-3 ಬಗ್ಗೆ ಎಲ್ಲೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಅಸಲಿಗೆ ಇದೊಂದು ಫೇಕ್ ನ್ಯೂಸ್. ಸುಮ್ಮನೆ ಗೊಂದಲ ಹುಟ್ಟಿಸೋದಕ್ಕೆ ಈ ರೀತಿ ಫೇಕ್ ಫೋಟೋ ಹರಿಬಿಡಲಾಗಿದೆ.

ಅಸಲಿಗೆ ಧುರಂಧರ್​-2 ಬಗ್ಗೆ ದೊಡ್ಡ ಕ್ರೇಜ್ ಇತ್ತು. ಯಶ್ ಟಾಕ್ಸಿಕ್ ಬಗ್ಗೆಯೂ ಸಿನಿಪ್ರಿಯರಿಗೆ ದೊಡ್ಡ ನಿರೀಕ್ಷೆ ಇದೆ. ಯಾಕಂದ್ರೆ ಕೆಜಿಎಫ್ -2 ನಂತರ ಬರೊಬ್ಬರಿ 4 ವರ್ಷಗಳ ಗ್ಯಾಪ್ ಬಳಿ ಯಶ್ ತೆರೆಮೇಲೆ ಬರ್ತಾ ಇರೋ ಸಿನಿಮಾ ಇದು. ಸದ್ಯ ಈ ಎರಡು ಸಿನಿಮಾಗಳ ಕ್ಲ್ಯಾಶ್ ತಪ್ಪಿದ್ದೇ ಒಳ್ಳೇದಾಯ್ತು. ಒಂದು ವೇಳೆ ಕ್ಲ್ಯಾಶ್ ನಡೆದಿದ್ರೆ ಖಂಡಿತ ಎರಡೂ ನಿರ್ಮಾಣ ಸಂಸ್ಥೆಗಳಿಗೆ ನಷ್ಟ ಆಗಿರೋದು. ಸೋ ಯುದ್ಧ ನಡೆಯದಿದ್ದೇ ಒಳ್ಳೇದಾಯ್ತು ಅನ್ನೋ ಮಾತು ಸಿನಿರಂಗದಲ್ಲಿ ಕೇಳಿಬರ್ತಾ ಇದೆ.

ಫಿಲ್ಮ್ ಬ್ಯೂರೋ , ಏಷ್ಯಾನೆಟ್ ಸುವರ್ಣ ನ್ಯೂಸ್.