ಟಾಲಿವುಡ್‌ ಮಾಸ್‌ ಹೀರೋ 'ತಲ ಅಜಿತ್' ಅಭಿಮಾನಿಗಳಿಂದ 'self-made star'ಎಂದು ಬಿರುದು ಪಡೆದುಕೊಂಡಿರುವ ಹಂಬಲ್‌ ಆ್ಯಂಡ್ ಚಾರ್ಮಿಂಗ್‌ ಮ್ಯಾನ್.

ಸಾಲ್ಟ್ ಆ್ಯಂಡ್ ಪೆಪ್ಪರ್ ಅವತಾರದಲ್ಲೇ ಸೂಪರ್ ಹಿಟ್‌ ಸಿನಿಮಾ ಮಾಡಿದ ಅಜಿತ್‌ ದಿಢೀರನೇ ಜೆಟ್ ಬ್ಲಾಕ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅರೇ, ಅಜಿತ್‌ನದ್ದು ಇದೇನು ಹೊಸ ಅವತಾರ ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ತಮ್ಮ ಪ್ರೀತಿಯ ನಟನನ್ನು ನೋಡಿದ ಅಭಿಮಾನಿಗಳು ಶಾಕ್ ಕೂಡ ಆಗಿದ್ದಾರೆ.

'ಅಟ್ಟಹಾಸ'ದಲ್ಲಿ ಡಾ. ರಾಜ್‌‌ರಂತೆ ಮಿಂಚಿದ ನಟನಿಗೆ ಬೇಕು ಸಹಾಯ ಹಸ್ತ!

 

ಕೆಲವು ದಿನಗಳ ಹಿಂದೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಸುವಾಗ ಅಭಿಮಾನಿಯೊಬ್ಬ ಅಜಿತ್‌ನನ್ನು ಗುರುತು ಹಿಡಿದು, ತೆಗೆದುಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶೂಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ತಮಿಳು ನಟ ಅಜಿತ್‌!

ಅಮಿತಾ ಬಚ್ಚನ್ ಅಭಿನಯದ 'ಪಿಂಕ್‌' ಚಿತ್ರ ತಮಿಳಿನಲ್ಲಿ ರಿಮೇಕ್‌ ಆಗಿದ್ದು, ಅದರಲ್ಲಿ ಅಜಿತ್‌ ನಟನೆಗೆ ಅಭಿಮಾನಿಗಳು ಫುಲ್‌ ಫಿದಾ ಆಗುತ್ತಾರೆ. ಇನ್ನು ಅಜಿತ್‌ ಮುಂದಿನ ಪ್ರಾಜೆಕ್ಟ್‌ 'ತಲ 60' ಟಾಲಿವುಡ್‌ ಮೋಸ್ಟ್‌ ಅವೈಟೆಡ್‌ ಮೂವಿಯಾಗಿದ್ದು, ಈ ಲುಕ್‌ ಆ ಮೂವಿಯಲ್ಲಿದೆ ಎಂದೇ ಹೇಳಲಾತ್ತಿದೆ.