ನವ​ದೆ​ಹ​ಲಿ[ಅ. 07]: ಬಹುಮುಖ ಪ್ರತಿಭೆ ತಮಿಳು ನಟ ಅಜಿತ್‌ ಕುಮಾರ್‌ ಸಿನೆಮಾ ಮಾತ್ರವಲ್ಲದೇ ಕಾರು ರೇಸಿಂಗ್, ಹೆಲಿಕ್ಯಾಪ್ಟರ್ ಪೈಲೆಟ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ.  

ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!

ರಾಷ್ಟ್ರಮ​ಟ್ಟದ ಶೂಟಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಸ್ಪರ್ಧಿ​ಸುವ ಮೂಲಕ ಅಚ್ಚರಿ ಮೂಡಿ​ಸಿ​ದ್ದಾರೆ. ಇತ್ತೀ​ಚೆಗೆ ಕೊಯಮ​ತ್ತೂ​ರಿ​ನಲ್ಲಿ ನಡೆ​ದಿದ್ದ ರಾಜ್ಯಮಟ್ಟ​ದ ಶೂಟಿಂಗ್‌ನಲ್ಲಿ 10 ಮೀಟರ್‌ ಏರ್‌ ಪಿಸ್ತೂಲ್‌, 50 ಮೀಟರ್‌ ಫ್ರೀ ಪಿಸ್ತೂಲ್‌ ವಿಭಾ​ಗ​ಗ​ಳಲ್ಲಿ ಅಜಿತ್‌ ಸ್ಪರ್ಧಿ​ಸಿ​ದ್ದರು. 

ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!

ಶಾಲಾ ದಿನ​ಗ​ಳಲ್ಲಿ ಎನ್‌​ಸಿಸಿ ಕೆಡೆಟ್‌ ಆಗಿ​ದ್ದ​ರಿಂದ ಅಜಿ​ತ್‌ ರೈಫಲ್‌ ಶೂಟಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿ​ದ್ದರಂತೆ. ಅಜಿತ್‌ ಭಾರ​ತದ ವೃತ್ತಿ​ಪರ ಕಾರು ರೇಸ್‌ ಚಾಲ​ಕರೂ ಆಗಿ​ದ್ದಾರೆ. ಸಾಮಾ​ಜಿಕ ಜಾಲ​ತಾ​ಣ​ಗಳಲ್ಲಿ ಅಜಿತ್‌ ಚಿತ್ರ​ಗಳು ವೈರಲ್‌ ಆಗು​ತ್ತಿವೆ. ಮೊದಲೆಲ್ಲಾ ಶೂಟಿಂಗ್ ಅನ್ನು ಹವ್ಯಾಸವಾಗಿ ನೋಡುತ್ತಿದ್ದ ಅಜಿತ್, ಇದೀಗ ಈ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಂಡು ಬರುತ್ತಿದೆ.