ನೋಡಲು ಥೇಟ್‌ ಡಾ. ರಾಜ್‌ ಅವರಂತೆ ಕಾಣುವ ಅಭಿಜಾತ ಕಲಾವಿದ ಜಯಕುಮಾರ್ ಕೊಡಗನೂರು, ಕೆಲವು ದಿನಗಳ ಹಿಂದೆ ಕಲಬುರ್ಗಿಯಲ್ಲಿ'ಖಾಯಂ ಮೊಕ್ಕಾಂ' ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುವಾಗ ಲಘು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಇದೇ ವೇಳೆ ಸಕ್ಕರೆ ಕಾಯಿಲೆಯೂ ಉಲ್ಬಣಿಸಿತು. ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಹೃದಯ ನಾಳಗಳಿಗೆ ಎರಡು ಸ್ಟಂಟ್‌ ಅಳವಡಿಸಲಾಗಿದೆ.

ಮಗುವನ್ನು ಎತ್ತಾಡಿಸಿದ 'ಒಡೆಯ'; ಪೋಸ್ಟರ್‌ ಲುಕ್‌ ವೈರಲ್!

 

ಇನ್ನೇನು ಆರೋಗ್ಯ ಸುಧಾರಿಸಿತು. ಸಹಜ, ಸಾಮಾನ್ಯ ಜೀವನ ಶೈಲಿ ನಡೆಸಬಹುದು ಎನ್ನುವಷ್ಟರಲ್ಲಿ ಇದೀಗ ಕಿಡ್ನಿ ಕೈ ಕೊಟ್ಟಿದೆ. ವೈದ್ಯರ ಸಲಹೆ ಮೇರೆಗೆ 15 ದಿನಗಳಿಂದ ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯ ಸುಧಾರಿಸುವ ಭರವಸೆ ನೀಡಿದ್ದಾರೆ ಡಾ. ಅಂಬೋಣ. ಹೆಲ್ತ್ ಕಾರ್ಡ್‌ನಲ್ಲಿರುವ ಸೌಲಭ್ಯಗಳು ಹೃದಯ ರಕ್ತನಾಳಗಳ ಸ್ಟಂಟ್ ಅಳವಡಿಕೆಗೆ ಮುಕ್ತಾಯವಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಯುವ ಈ ನಟನ ಕಿಡ್ನಿ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ವಿಶಾಲ ಹೃದಯಿಗಳು ಸಹಾಯ ಮಾಡಬೇಕೆಂದು ಜಯಕುಮಾರ್ ಪತ್ನಿ ಪದ್ಮಾವತಿ ಹಾಗೂ ಮಗ ಮಾರುತಿ ಕೇಳಿ ಕೊಂಡಿದ್ದಾರೆ.

'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

 

ಜಯಕುಮಾರ್ ತಮ್ಮ ನಟನೆಯ ಮೂಲಕ ನಮ್ಮೆದುರು ರಾಜ್‌ಕುಮಾರ್‌ ಅವರನ್ನು ಪ್ರತ್ಯಕ್ಷವಾಗಿಸುವ ಚತುರತೆ ತೋರಿದವರು. ಮೂಲತಃ ದಾವಣಗೆರೆ ಜಿಲ್ಲೆಯ ಕೊಡಗಾನೂರಿನವರಾದ ಜಯಕುಮಾರ್ ಗುಬ್ಬಿ ಕಂಪನಿಯ ಕಲಾವಿದ. 25ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 5 ವರ್ಷಗಳ ಕಾಲ ನಟಿಸಿ, ಕನ್ನಡ ರಂಗಭೂಮಿಗೆ ಇವರು ನೀಡಿರುವ ಕೊಡುಗೆ ಅಪಾರ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 'ಜನುಮದ ಜೋಡಿ' ಸೇರಿದಂತೆ ಅಂಬರೀಶ್, ವಿಷ್ಣುವರ್ಧನ್, ದೇವರಾಜ್‌, ದರ್ಶನ್‌ ಹೀಗೆ ಹೆಸರಾಂತ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದಾರೆ. ಸಕ್ರಿಯಾವಾಗಿ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿ ಮನೆ ಮಾತಾದವರು.

 

ಜಯಕುಮಾರ್ ಅವರ ಬ್ಯಾಂಕ್ ಖಾತೆ ವಿವರ ಹೀಗಿದೆ :

ಸಿಂಡಿಕೇಟ್ ಬ್ಯಾಂಕ್, ಮಲ್ಲೇಶ್ವರಮ್ ಕೆ.ಸಿ. ಜನರಲ್ ಆಸ್ಪತ್ರೆ ಶಾಖೆ :ಬೆಂ. A/C: 04492010022368 IFSC code: SYNB 0000449

ಕಲಾವಿದನ ನೆರವಿನ ನಿರೀಕ್ಷೆ ಯಲ್ಲಿ ಪದ್ಮಾವತಿ w/o ಜಯಕುಮಾರ ಮಣಿಪಾಲ್ ಆಸ್ಪತ್ರೆ, ಮಣಿಪಾಲ್ ಮೊ: 99023 89044