ಮುಂಬೈ[ಸೆ.9]   ಮಾಜಿ ಕೊಮೊಡೊರ್ ಹಾಗೂ ಭಾರತದ ಭದ್ರತೆ ಮತ್ತು ಕಾರ್ಯತಂತ್ರ ವ್ಯವಹಾರಗಳ ಬಗೆಗಿನ ಪ್ರಮುಖ ತಜ್ಞ, ನಟಿ ಸ್ವರಾ ಭಾಷ್ಕರ್​ ಅವರ ತಂದೆ ಚಿತ್ರಾಪು ಉದಯ್ ಭಾಸ್ಕರ್ ಸುಪ್ರೀಂ ತೀರ್ಪನ್ನು ಸ್ವಾಗತ ಮಾಡಿ ಶ್ಲಾಘಿಸಿದ್ದರು. ಎಲ್​​ಜಿಬಿಟಿ ತೀರ್ಮಾನಕ್ಕೆ ಸಂಬಂಧಿಸಿ ವಕೀಲೆ ಮೇನಕ ಗುರುಸ್ವಾಮಿ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದರು.

ಇದನ್ನು ಕಂಡ ನೆಟ್ಟಿಗರು ಸ್ವರಾ ಅವರ ಹಸ್ತಮೈಥುನ ದೃಶ್ಯ ಫೋಟೋವನ್ನು ಮತ್ತೆ ಹರಿಯಬಿಟ್ಟು ಯಾರವಳು? ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ. ನಿಜವಾಗಿಯೂ ನಾನು ಸ್ವರಾ ಅವರ ದೊಡ್ಡ ಅಭಿಮಾನಿ ಎಂದೆಲ್ಲಾ ವ್ಯಂಗ್ಯವಾಡಿದ್ದಾರೆ.

ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

ಇದನ್ನು ಕಂಡು ಕೆಂಡಾಮಂಡಲವಾದ ನಟಿ,  ನಾನೊಬ್ಬ ಕಲಾವಿದೆ. ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ. ಮುಂದಿನ ಬಾರಿ ಏನೇ ಕೇಳುವುದಾದರೆ ನೇರವಾಗಿ ನನ್ನನ್ನೆ ಕೇಳಿ. ನನ್ನ ತಂದೆಯನ್ನು ಕೇಳಬೇಕಿಲ್ಲ, ಹಿರಿಯರನ್ನು ಅವಮಾನಿಸುವುದು ಯಾವ ರೀತಿಯಿಂದ ಸರಿ ಕಾಣುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ವಿಶೇಷವೆಂದರೆ ಈ ಚಿತ್ರದ ಈ ದೃಶ್ಯದ ಬಿಡುಗಡೆ ಬಳಿಕ ಇಂಥ ಸಾಧನಗಳ ಖರೀದಿಯಲ್ಲಿ ಭರ್ಜರಿ ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿತ್ತು. ಮಹಿಳೆಯರು ಬಳಸುವ ಕೃತಕ ಲೈಂಗಿಕ ಸಾಧನಗಳ ಮಾರಾಟ ಶೇ.44ರಷ್ಟುಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು.