ಮುಂಬೈ:  ಇತ್ತೀಚೆಗೆ ಬಿಡುಗಡೆಯಾದ ವೀರ್‌ ಡಿ ವೆಡ್ಡಿಂಗ್‌ ಮತ್ತು ಲಸ್ಟ್‌ ಸ್ಟೋರೀಸ್‌ ಚಿತ್ರಗಳಲ್ಲಿ ನಟಿಯರಾದ ಸ್ವರಾ ಭಾಸ್ಕರ್‌ ಮತ್ತು ನೇಹಾ ಧೂಪಿಯಾ ಅವರು ಕೃತಕ ಲೈಂಗಿಕ ಸಾಧನಗಳನ್ನು ಬಳಸಿ ಹಸ್ತಮೈಥುನ ಮಾಡಿಕೊಂಡ ದೃಶ್ಯಗಳು ಭಾರೀ ಸದ್ದು ಮಾಡಿದ್ದವು.

ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಇಬ್ಬರೂ ನಟಿಯರು ಆನ್‌ಲೈನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

ವಿಶೇಷವೆಂದರೆ ಈ ಚಿತ್ರಗಳ ಬಿಡುಗಡೆ ಬಳಿಕ ಇಂಥ ಸಾಧನಗಳ ಖರೀದಿಯಲ್ಲಿ ಭರ್ಜರಿ ಏರಿಕೆಯಾಗಿದೆ. ಕಳೆದ ಜೂನ್‌ ತಿಂಗಳಲ್ಲಿ ಮಹಿಳೆಯರು ಬಳಸುವ ಕೃತಕ ಲೈಂಗಿಕ ಸಾಧನಗಳ ಮಾರಾಟ ಶೇ.44ರಷ್ಟುಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.