ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರ ಸೋದರಿಯಾದ ಸುನೈನಾ ಅವರು ಪ್ರೀತಿಸುತ್ತಿರುವ ಮುಸ್ಲಿಂ ಪತ್ರಕರ್ತನ ಜೊತೆಗಿನ ವಿವಾಹಕ್ಕೆ ಕುಟುಂಬಸ್ಥರೇ ಅಡ್ಡಿಪಡಿಸಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಲ್ಲದೆ, ತಾನು ಮುಸ್ಲಿಂ ವ್ಯಕ್ತಿಯನ್ನು ಇಷ್ಟಪಟ್ಟಿದ್ದೇನೆ ಎಂಬ ಕಾರಣಕ್ಕಾಗಿ ತಂದೆಯಾದ ನಿರ್ಮಾಪಕ ರಾಕೇಶ್‌ ರೋಷನ್‌ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೃತಿಕ್‌ ಸೋದರಿ ಸುನೈನಾ ಅವರೇ ಆರೋಪಿಸಿದ್ದಾರೆ.

ಮುಂಬೈ: ಪಿಂಕ್‌ವಿಲ್ಲಾ ಎಂಬ ವೆಬ್‌ಸೈಟ್‌ ಜೊತೆ ಮನಬಿಚ್ಚಿ ಮಾತನಾಡಿದ ಸುನೈನಾ ಅವರು, ‘ದೆಹಲಿ ಮೂಲದ ಪತ್ರಕರ್ತನಾದ ಇಸ್ಲಾಂ ಧರ್ಮದ ರುಹೇಲ್‌ ಅಮಿನ್‌ ಅವರನ್ನು ನಾನು ಪ್ರೀತಿಸುತ್ತಿದ್ದ ವಿಚಾರವನ್ನು ತಂದೆಗೆ ತಿಳಿಸಿದೆ. ಈ ಸಂದರ್ಭದಲ್ಲಿ ಕೋಪಗೊಂಡ ತಂದೆ ರಾಕೇಶ್‌ ನನ್ನ ಕಪಾಳಕ್ಕೆ ಬಾರಿಸಿದರು. ಜೊತೆಗೆ, ನಾನು ಪ್ರೀತಿಸುತ್ತಿರುವ ವ್ಯಕ್ತಿ ಭಯೋತ್ಪಾದಕ ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರುಹೇಲ್‌ ಮುಸ್ಲಿಂ ಎಂಬ ಏಕ ಮಾತ್ರ ಕಾರಣಕ್ಕಾಗಿ ಆತನನ್ನು ವಿವಾಹವಾಗಬೇಕೆಂಬ ನನ್ನ ಆಕಾಂಕ್ಷೆಗೆ ಹೃತಿಕ್‌ ಸೇರಿ ಕುಟುಂಬದ ಯಾವೊಬ್ಬ ಸದಸ್ಯರು ಒಪ್ಪಿಕೊಳ್ಳಲಿಲ್ಲ’ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಬ್ಬಾ..! ಹೃತಿಕ್ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ?

ಈ ಎಲ್ಲ ವಿಚಾರಗಳ ಬಹಿರಂಗಕ್ಕೆ ನನಗೆ ಇಷ್ಟವಿಲ್ಲ. ಆದರೆ, ರುಹೇಲ್‌ನನ್ನು ಒಪ್ಪಿಕೊಳ್ಳದೆ ಇರುವ ಮೂಲಕ ನನ್ನ ತಂದೆ ಮತ್ತು ಕುಟಂಬಸ್ಥರು ನನ್ನ ಜೀವನವನ್ನು ನರಕವಾಗಿಸಿದ್ದಾರೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ನಾನು ಯಾರನ್ನು ವಿವಾಹವಾಗುತ್ತೇನೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಇದೀಗ ರುಹೇಲ್‌ ಜೊತೆಗೆ ಇರಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ ಎಂದರು.

'ಮೆಂಟಲ್ ಹೈ ಕ್ಯಾ' 'ಸೂಪರ್-30' ಮತ್ತೆ ಶುರುವಾಯ್ತು ಕಂಗನಾ- ಹೃತಿಕ್ ವಾರ್!