ಕೆಲವು ವರ್ಷಗಳಿಂದ ಕಂಗನಾ ಹಾಗೂ ಹೃತಿಕ್ ವಿವಾದಾತ್ಮಕ ಸಂಬಂಧ ದೊಡ್ಡ ಮಟ್ಟದಲ್ಲಿ ಬಿ-ಟೌನ್‌ನಲ್ಲಿ ಸದ್ದು ಮಾಡುತ್ತಿದೆ. ಎಲ್ಲವೂ ತಣ್ಣಗಾಯಿತು ಎನ್ನುವಷ್ಟರಲ್ಲಿ ಆಲಿಯಾ ಭಟ್ ಕುಟುಂಬಕ್ಕೂ ಕಂಗನಾಳ ಸಹೋದರಿ ರಂಗೋಲಿಗೂ ವಾರ್ ಶುರುವಾಗಿತ್ತು. ಆದರೆ ಈಗ ವಾರ್ ಶುರುವಾಗಿರುವುದು ರಂಗೋಲಿ ಹಾಗೂ ಹೃತಿಕ್‌ ನಡುವೆ.

ಕಂಗನಾ ಅಭಿನಯದ ಸಿನಿಮಾ 'ಸೂಪರ್-30' ಸಿನಿಮಾ ಹಾಗೂ ಹೃತಿಕ್ ಅಭಿನಯದ 'ಮೆಂಟಲ್‌ ಹೈ ಕ್ಯಾ ' ಸಿನಿಮಾ ಜುಲೈ 26 ಕ್ಕೆ ಬಿಡುಗಡೆಯಾಗುತ್ತಿದ್ದು ಇದಕ್ಕೆ ಹೃತಿಕ್‌ ತಂಡದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಂಗೋಲಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಸೂಪರ್-30 'ಗೆ ಹೃತಿಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ಗರಂ ಆಗಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ರಂಗೋಲಿ 'ಸೂಪರ್-30’ ನನ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇದರ ರಿಲೀಸ್ ಡೇಟ್ ನಾನೇ ಅನೌನ್ಸ್ ಮಾಡಿದ್ದು. ಇದರಲ್ಲಿ ಯಾರ ಹಸ್ತಕ್ಷೇಪವು ಇಲ್ಲ. ಇದು ನನ್ನ ನಿರ್ಧಾರ. ತಂಡದ್ದು ಅಥವಾ ನಟಿಯದ್ದಲ್ಲ' ಎಂದು ಟ್ಟೀಟ್ ಮಾಡಿದ್ದಾರೆ.

ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?