ಹೃತಿಕ್ ರೋಷನ್ ಬಾಲಿವುಡ್ ನ ಮೋಸ್ಟ್ ಅಟ್ರಾಕ್ಟೀವ್ ಪರ್ಸನಾಲಿಟಿ. ಬಹುಬೇಡಿಕೆ ಇರುವ ನಟ. ಸದ್ಯ 'ಸೂಪರ್ 30' ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇವರ ಬಗ್ಗೆ ಇನ್ನೊಂದು ವಿಚಾರ ಹೊರ ಬಿದ್ದಿದೆ. 

ದರ್ಶನ ಚಿತ್ರದ ನಿರ್ದೇಶಕನ ಮೇಲೆ ತಿರುಗಿ ಬಿದ್ದ ಸುದೀಪ್ ಫ್ಯಾನ್ಸ್!

ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೃತಿಕ್ ಹೊರ ಹೊಮ್ಮಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಇವರು ಪಡೆದಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ! ಬರೋಬ್ಬರಿ 48 ಕೋಟಿ ಸಂಭಾವನೆ ಪಡೆದಿದ್ದಾರಂತೆ! 

ಹಾಟ್ ಆ್ಯಂಡ್ ಬೋಲ್ಡ್ ಅಮಿಶಾ ಪೋಟೋ ಶೂಟ್

ಟೈಗರ್ ಶ್ರಾಫ್ ಜೊತೆ ಫೈಟರ್ಸ್ ಎನ್ನುವ ಸಿನಿಮಾ ಮಾಡುತ್ತಿದ್ದು ಈ ಸಿನಿಮಾಗೆ 48 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಆದಿತ್ಯ ಚೋಪ್ರಾ ಬಂಡವಾಳ ಹೂಡುತ್ತಿದ್ದಾರೆ.