‘ಅಮರ್’ ಚಿತ್ರ ಅಂಬರೀಶ್ ಕುಟುಂಬಕ್ಕೆ ಒಂದು ದೊಡ್ಡ ಕನಸು. ಮಗನ ಮೊದಲ ಸಿನಿಮಾ ನೋಡಬೇಕು, ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಎಲ್ಲಾ ಸಿನಿ ತಾರೆಯರನ್ನು ಕರೆಸಿ ಅದ್ಧೂರಿಯಾಗಿ ಮಾಡಬೇಕು ಎಂಬುವುದು ಅಂಬಿಯ ಆಸೆಯಾಗಿತ್ತು. ಆದರೆ ಅಂಬಿಯ ಅಗಲಿಕೆಯಿಂದ ಎಲ್ಲವೂ ಸಿಂಪಲ್ ರೀತಿಯಲ್ಲೇ ನಡೆದಿತ್ತು.

'ಅಬ್ಬಾ..! ದರ್ಶನ್ ಜೊತೆ ನಟಿಸೋಕೆ ಭಯ ಆಗುತ್ತೆ'

 

ಚುನಾವಣಾ ಫಲಿತಾಂಶದ ಆತಂಕದ ನಡುವೆ ತೆರೆ ಕಾಣಲಿರುವ ಮಗನ ಸಿನಿಮಾ ಸುಮಲತಾಗೆ ಫುಲ್ ಟೆನ್ಷನ್ ನೀಡಿದೆ. 'ಚಿತ್ರದ ಡಬ್ಬಿಂಗ್ ಹಾಗೂ ಸಾಂಗ್ ಮೇಕಿಂಗ್ ಎಲ್ಲವೂ ನೋಡಿದ್ದೇನೆ. ಇದೊಂದು ಪರೀಕ್ಷೆ ಇದ್ದ ಹಾಗೆ. ಫಲಿತಾಂಶಕ್ಕೆ ಭಯದಿಂದ ಕಾಯುತ್ತಿರುವೆ. ನನಗೆ 23 ಕ್ಕೆ ಕ್ಯೂರಿಯಾಸಿಟಿ ಇದೆ ಅಷ್ಟೇ. ಆದರೆ 31 ಕ್ಕೆ ಜಾಸ್ತಿ ಟೆನ್ಷನ್ ಇರುವುದು' ಎಂದು ಮಾಧ್ಯಮದವರಿಗೆ ಸುಮಲತಾ ಮಾತನಾಡಿದ್ದಾರೆ.

'ಸುಮ್ಮನೆ' ಯೂಟ್ಯೂಬ್‌ನಲ್ಲಿ ಟ್ರೆಂಡಾದ ಜೂನಿಯರ್ ಅಮರ್!

ಇನ್ನೂ ಸಿನಿಮಾದ ಮೊದಲ ಭಾಗ ನೋಡಿರುವ ಅಂಬರೀಶ್ ಕೆಲವೊಂದು ಸನ್ನಿವೇಶಗಳನ್ನು ನೋಡಿ ನನ್ನ ಮಗ ನನ್ನ ಥರಾನೇ ಕಾಣುತ್ತಾನೆ ಎಂದು ಹೇಳಿಕೊಂಡು ನಗುತ್ತಿದ್ದರು ಎಂದು ಅಂಬಿಯನ್ನು ನೆನೆಸಿಕೊಂಡರು.