ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ 'ಅಮರ್' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡುತ್ತಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್‌ ಖಾತೆಯಲ್ಲಿ 'ಸುಮ್ಮನೆ ಹೇಗೆ ನಿನ್ನನ್ನೆ' ಲಿರಿಕಲ್ ಹಾಡೊಂಡು ರಿಲೀಸ್ ಆಗಿತ್ತು. ಲಕ್ಷಗಟ್ಟಲೇ ವೀಕ್ಷಣೆ ಪಡೆದಿರುವ ಈ ಹಾಡು ಯೂಟ್ಯೂಬ್ ಟ್ರೆಂಡ್‌ನಲ್ಲಿ 3 ನೇ ಸ್ಥಾನ ಪಡೆದುಕೊಂಡಿದೆ.

ಕವಿರಾಜ್‌ ಸಾಹಿತ್ಯ, ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಧ್ವನಿ ನೀಡಿರುವ ಈ ಹಾಡನ್ನು ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂದು ಅನಿಸುವುದಂತೂ ಗ್ಯಾರಂಟಿ. ಲಿರಿಕಲ್ ವಿಡಿಯೋ ಆದ ಕಾರಣ ಹಾಡಿನ ಚಿತ್ರೀಕರಣದ ಫೂಟೇಜ್ ತೋರಿಸಲಾಗಿದೆ. ಇದಕ್ಕೂ ಮೊದಲು ರಿಲೀಸ್ ಆದ 'ಮರೆತು ಹೋಯಿತೆ ನನ್ನೆಯ ಹಾಜರಿ' ಸಾಂಗ್ ಮಿಲಿಯನ್ ವೀಕ್ಷಣೆ ಮುಟ್ಟಿತ್ತು.

 

'ಅಮರ್' ಸಿನಿಮಾಗೆ ಸೆನ್ಸಾರ್ ಮಂಡಳಿ U/A ನೀಡುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದೆ. ಏಪ್ರಿಲ್ 31 ರಂದು ಅಮರ್ ಚಿತ್ರ ರಿಲೀಸಾಗಲಿದೆ.