‘ಅಮರ್’ ಚಿತ್ರದ ಆರಂಭದಿಂದಲೂ ಎಲ್ಲಿಯೂ ಯಾವ ರೀತಿಯ ಚಿತ್ರ ಎಂಬ ಸುಳಿವು ನೀಡದ ಚಿತ್ರತಂಡ ತಮ್ಮ ಮೊದಲ ಪ್ರೆಸ್ ಮೀಟ್‌ನಲ್ಲಿ ಕೆಲವೊಂದು ಸುಳಿವುಗಳನ್ನು ಬಿಚ್ಚಿಟ್ಟಿದೆ. ಮಾಧ್ಯಮದವರು ಅಭಿಷೇಕ್‌ಗೆ ದರ್ಶನ್‌ ಜೊತೆ ಅಭಿನಯಿಸಿದ ಅನುಭವ ಹೇಗಿತ್ತು ಎಂದು ಕೇಳಿದಕ್ಕೆ ಯಂಗ್ ರೆಬೆಲ್ ಮ್ಯಾನ್ ಕೊಟ್ಟ ಉತ್ತರವಿದು.

ಅಂಬಿ ಮಗನ ಮೊದಲ ಚಿತ್ರ ರಿಲೀಸ್‌ಗೆ ರೆಡಿ, ಏನಿದೆ ವಿಶೇಷ?

 

'ಭಯ ಅನ್ನೋದು ನನಗೆ ಸೆಟ್‌ನಲ್ಲಿ ಅಪ್ಪ ಇದ್ದಾಗ ಆಗಿತ್ತು. ಆನಂತರ ದರ್ಶನ್ ಸರ್ ಬಂದಾಗ ಆಗಿತ್ತು. ಸರ್ ಬರುವ ಮೊದಲೇ ನಿರ್ದೇಶರ ಬಳಿ ಹೇಳಿದೆ. ನಮಗೆ ಅವರೆದುರು ಜಾಸ್ತಿ ಡೈಲಾಗ್ ಕೊಡ್ಬೇಡಿ. ಲಾಂಗ್ ಲಾಂಗ್ ಶಾಟ್ ಮಾಡಿ ಎಂದು ಕೇಳಿಕೊಂಡೆ. ಅವರು ನನ್ನನ್ನು ಕಾಪಾಡಿದ್ರು' ಎಂದು ಹೇಳಿದರು.

ಒಮ್ಮೆ ಅಣ್ಣಾವ್ರು ಚಿತ್ರದ ಶೂಟಿಂಗ್ ಸಮಯದಲ್ಲಿ ಅಪ್ಪಾಜಿಗೆ ಎದುರಾಗಿ ಬೈಯ್ಯಾ ಶೂಟಿಂಗ್ ಮಾಡುತ್ತಿದ್ದರು. ಆಗ ಅಪ್ಪನ ಎದುರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಆ್ಯಕ್ಟ್ ಮಾಡುವರು ಯಾರೂ ಇರಲಿಲ್ಲ. ಆದರೆ ಅದನ್ನು ದರ್ಶನ್ ಬೈಯ್ಯಾ ಮಾಡಿದ್ರು. ಆಗ ಅಪ್ಪಾಜಿಗೆ ಇದು ಹೇಗೆ ಸಾಧ್ಯ ಎಂದಿದಕ್ಕೆ ಅಪ್ಪಾಜಿ, ನಿರ್ದೇಶಕರು ಆ್ಯಕ್ಷನ್ ಎಂದಾಕ್ಷಣ ನೀವು ಆರ್ಟಿಸ್ಟ್ ನಾವು ಆರ್ಟಿಸ್ಟ್ ಅಂದರಂತೆ. ಈ ಪ್ರಸಂಗವನ್ನು ದರ್ಶನ್ ಅಭಿಷೇಕ್‌ಗೆ ಹೇಳಿ ಧೈರ್ಯ ನೀಡಿದರಂತೆ.

ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್