Asianet Suvarna News Asianet Suvarna News

'ಅಪರೂಪ'ದಲ್ಲಿ ಪುನೀತ್ ರಾಜ್‌ಕುಮಾರ್ ಗಾನ: ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ

ಪುನೀತ್ ರಾಜ್‌ಕುಮಾರ್‌ ನಟನೆಯ ‘ಅರಸು’, ‘ಆಕಾಶ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಮಹೇಶ್‌ ಬಾಬು ನಿರ್ದೇಶನದ ಹೊಸ ಸಿನಿಮಾ ‘ಅಪರೂಪ’ ಇಂದು ಬಿಡುಗಡೆಯಾಗುತ್ತಿದೆ. 

Sughosh Starrer Aparoopa Movie Released On July 14th gvd
Author
First Published Jul 14, 2023, 8:45 AM IST

ಪುನೀತ್ ರಾಜ್‌ಕುಮಾರ್‌ ನಟನೆಯ ‘ಅರಸು’, ‘ಆಕಾಶ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಮಹೇಶ್‌ ಬಾಬು ನಿರ್ದೇಶನದ ಹೊಸ ಸಿನಿಮಾ ‘ಅಪರೂಪ’ ಇಂದು ಬಿಡುಗಡೆಯಾಗುತ್ತಿದೆ. ವಿಶಿಷ್ಟ ಪ್ರೇಮಕತೆಗಳ ಮೂಲಕವೇ ಖ್ಯಾತಿಗಳಿಸಿರುವ ಮಹೇಶ್‌ ಬಾಬ್‌ ಅ‍ವರ ಮತ್ತೊಂದು ಪ್ರೇಮಕತೆ ಇದು. ಈ ಹಿಂದೆ ಮಹೇಶ್ ಬಾಬು ಅ‍ವರ ‘ಅತಿರಥ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಸುಘೋಷ್ ಈ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದಾರೆ. ಹೃತಿಕಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಒಂದು ಹಾಡನ್ನು ಪುನೀತ್‌ ರಾಜ್‌ಕುಮಾರ್‌ ಹಾಡಿರುವುದು.

ಸಿನಿಮಾದ ಕುರಿತು ಮಹೇಶ್‌ಬಾಬು, ‘ನಾನು ಹೆಚ್ಚಾಗಿ ಲವ್‌ಸ್ಟೋರಿ ಸಿನಿಮಾಗಳನ್ನೇ ಮಾಡಿದ್ದೇನೆ. ಈ ಸಿನಿಮಾ ಕೂಡ ಪ್ರೇಮಕತೆ. ನಾಯಕ ನಾಯಕಿ ಮಧ್ಯೆ ಬರುವ ಅಹಂ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎಂಬ ಅಂಶ ಚಿತ್ರದಲ್ಲಿದೆ’ ಎನ್ನುತ್ತಾರೆ. ಅಶೋಕ್ , ಅರುಣಾ ಬಾಲರಾಜ್, ಅವಿನಾಶ್, ಕುರಿ ಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ತಾರಾಗಣವಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಾಣ ಆಗಿದೆ.

ಸ್ಯಾಂಡಲ್‌ವುಡ್‌ಗೆ ಬಂತು ಮತ್ತೊಂದು ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆ

ಇಂದು ರಾಜ್ಯಾದ್ಯಂತ ತೆರೆಗೆ: ಹೊಸಬರ ತಂಡದಿಂದ ಮೂಡಿ ಬಂದಿರುವ ಅಪರೂಪ ಚಿತ್ರ ಜು.14ರಂದು ರಾ​ಜ್ಯಾ​ದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಮಹೇಶ್‌ಬಾಬು ತಿಳಿಸಿದರು. ಸು​ದ್ಧಿ​ಗಾರರೊಂದಿಗೆ ಮಾತನಾಡಿದ ಅವರು, ವಿಭಿನ್ನ ಪ್ರೇಮಕತೆಯ ಅಪರೂಪ ಸಿನಿಮಾ ಮೂಲಕ ನಾಯಕರಾಗಿ ಸುಘೋಷ್‌ ಹಾಗೂ ನಾಯಕಿಯಾಗಿ ಋುತಿಕಾ ಶ್ರೀನಿವಾಸ್‌ ಎಂಬ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಇಬ್ಬರಿಗೂ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ. ಕತೆಗೆ ಪೂರಕವಾಗಿ ನಾಯಕ, ನಾಯಕಿಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಈ ಹಿಂದೆ ಪುನೀತ್‌ರಾಜ್‌ಕುಮಾರ್‌, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ದೊಡ್ಡ ನಟರನ್ನು ನಾಯಕರನ್ನಾಗಿಕೊಂಡು ಸಿನಿಮಾ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಟಿಯರು ಇಂದು ದೊಡ್ಡ ನಾಯಕಿ ನಟಿಯರಾಗಿ ಬೆಳೆದಿದ್ದಾರೆ. ಇದು ತಮಗೆ ತೃಪ್ತಿ ತಂದಿದೆ. ಹೊಸ ಪ್ರತಿಭೆಗಳು ಬಂದಷ್ಟೂಇಂಡಸ್ಟ್ರಿಗೆ ಅನುಕೂಲ ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು. ಅಪರೂಪದ ನಟಿ ಋುತಿಕಾ ಮೂಲತಃ ಕನ್ನಡತಿ. ಬಾಲನಟಿಯಾಗಿ ಗುರುತಿಸಿಕೊಂಡವರು. ಈಗಾಗಲೇ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಈಗ ಕನ್ನಡಕ್ಕೆ ಕರೆತರಲಾಗಿದೆ. 3.5 ಕೋಟಿ ರು. ಬಜೆಟ್‌ನಲ್ಲಿ ಮದ್ದೂರಿನ ಕೆ.ಆರ್‌.ಮಹೇಶ್‌ ನಿರ್ಮಾಣದ ಈ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. 4 ಫೈಟ್‌ಗಳು, 5 ಹಾಡುಗಳಿವೆ ಎಂದು ತಿಳಿಸಿದರು. ಪುನೀತ್‌ರಾಜ್‌ಕುಮಾರ್‌ ಅವರು ಒಂದು ಹಾಡನ್ನು ಹಾಡಿದ್ದು, ಇದೇ ಅ​ವ​ರ ಕೊನೆಯ ಹಾಡು. ಪ್ರಸಿದ್ಧ ಗಾಯಕ ಆರ್ಮಾನ್‌ ಮಲ್ಲಿಕ್‌ ಅವರೂ ಒಂದು ಹಾಡನ್ನು ಹಾಡಿದ್ದಾರೆ. ಮನು ಕಲ್ಯಾಡಿ ಅವರು ಸಂಭಾಷಣೆಯೊಂದಿಗೆ ಕತೆಯನ್ನೂ ಬರೆದಿದ್ದಾರೆ. ಪ್ರಜ್ವಲ್‌ ಪೈ ಸಂಗೀತ ನೀಡಿದ್ದಾರೆ ಎಂದು ವಿವರಿಸಿದರು. 

ನನಗೆ ಹೈಟ್‌ ಫೋಬಿಯಾ ಇದೆ, ಸಿನಿಮಾ ಬಿಟ್ಟು ದೂರ ಇರಲ್ಲ: ಶುಭಾ ಪೂಂಜಾ

ನಾ​ಯಕ ನಟ ಸು​ಘೋಷ್‌ ಮಾ​ತ​ನಾಡಿ, ಶ್ರೀರಂಗಪಟ್ಟಣ ತಾಲೂಕು ಎಂ.ಶೆಟ್ಟಹಳ್ಳಿ ನನ್ನ ಹುಟ್ಟೂರು. ಚಿಕ್ಕಂದಿನಿಂದಲೂ ಸಿನಿಮಾ, ಸಂಗೀತ, ನೃತ್ಯದಲ್ಲಿ ಆಸಕ್ತಿಯಿತ್ತು. ಸಿನಿಮಾದಲ್ಲಿ ನಟಿಸುವ ತುಡಿತವಿತ್ತು. ಅದಕ್ಕೀಗ ಅಪರೂಪ ಸಿನಿಮಾ ಮೂಲಕ ಅವಕಾಶ ಸಿಕ್ಕಿದೆ. ಈಗಾಗಲೇ ಟ್ರೈಲರ್‌, ಟೀಸರ್‌ ಬಿಡುಗಡೆಯಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮನ್ನು ಪ್ರೋತ್ಸಾಹಿಸಿ ಎಂದು ಮ​ನವಿ ಮಾ​ಡಿ​ದರು. ಚಿತ್ರನಟಿ ಋುತಿಕಾ ಶ್ರೀನಿವಾಸ್‌ ಮಾತನಾಡಿ, ಕನ್ನಡದಲ್ಲಿ ನನಗಿದು ಮೊದಲ ಸಿನಿಮಾ. ವಿಭಿನ್ನ ಪ್ರೇಮ ಕಥಾ ಹಂದರವನ್ನು ಚಿತ್ರವು ಹೊಂದಿದೆ. ಅಪ್ಪು ಸರ್‌ ಹಾಡು ಹಾಡಿರುವುದು ನಮಗೆಲ್ಲಾ ಆಶೀರ್ವಾದವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios