ಅದೊಂದೇ ಸಿನಿಮಾ ಸೋಲಿನಿಂದ ಗೋವಿಂದ ನಟನೆ ಬಿಟ್ಟು ರಾಜಕೀಯ ಸೇರಿಕೊಂಡ್ರು!

ರಾಜಾ ಭೈಯಾ ಸಿನಿಮಾ ಬಿಡುಗಡೆಗೂ ಮೊದಲು ಶೂಟಿಂಗ್ ಮುಗಿಸಿದ್ದ ಗೋವಿಂದ ನಟನೆಯ ಚಿತ್ರಗಳಾದ ಖುಲ್ಲಂ ಖುಲ್ಲ ಪ್ಯಾರ್ ಕರೇ, ಸುಖ್ ಮತ್ತು ಸ್ಯಾಂಡ್‌ವಿಚ್ ಚಿತ್ರಗಳು ಬಳಿಕ ರಿಲೀಸ್..

Bollywood actor Govinda fails to recover Movies success and enters politics srb

ಬಾಲಿವುಡ್‌ನಲ್ಲಿ 1980-1990ರ ದಶಕದಲ್ಲಿ ನಟ ಗೋವಿಂದ ಸೂಪರ್‌ ಸ್ಟಾರ್ ಪಟ್ಟದಲ್ಲಿ ನೆಲೆಯೂರಿದ್ದರು. ಕಾಮಿಡಿ ಬೇಸ್ಡ್ ಸಿನಿಮಾಗಳ ಮೂಲಕ 90ರ ದಶಕವನ್ನು ಅಕ್ಷರಶಃ ಆಳಿದ್ದ ನಟ ಗೋವಿಂದ, 2000ನೇ ಇಸವಿಯಲ್ಲಿ ನಿಧಾನಕ್ಕೆ ಸ್ಟಾರ್ ಪಟ್ಟದಿಂದ ಕೆಳಕ್ಕೆ ಇಳಿಯುತ್ತಾ ಬಂದರು. ಒಂದು ಹಂತದಲ್ಲಿ ನಟ ಗೋವಿಂದ ಅವರು ಸತತ ಸೋಲಿನಿಂದ ಕಂಗೆಟ್ಟು, ಬಾಲಿವುಡ್ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಸಿನಿಮಾದಿಂದ ತಾತ್ಕಾಲಿಕ ಬ್ರೇಕ್ ಎಂಬಂತೆ ನಟ ಗೋವಿಂದ ಅಂದುಕೊಂಡಿದ್ದರೂ ಕೂಡ, ಅವರು ಮತ್ತೆ ಮೊದಲಿನಂತೆ ಯಶಸ್ವೀ ನಟರಾಗಲು ಸಾಧ್ಯವಾಗಲೇ ಇಲ್ಲ. 

ರಮಣ್ ಕುಮಾರ್ ನಿರ್ದೇಶನ, ಗೋವಿಂದ ಹಾಗು ಆರತಿ ಛಾಬ್ರಿಯಾ ಜೋಡಿಯ 'ರಾಜಾ ಭೈಯಾ' ಚಿತ್ರವು 24 ನವೆಂಬರ್ 2003ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಮೂಡಿತ್ತು. ಆದರೆ, ರಾಜಾ ಭೈಯಾ (Raja Bhaiya) ಚಿತ್ರವು ಅದೆಷ್ಟು ದಯನೀಯ ಸೋಲು ಅನುಭವಿಸತು ಎಂದರೆ, ಯಾರೂ ಅಂತಹ ಫ್ಲಾಪ್ ನಿರೀಕ್ಷಿಸಿರಲೇ ಇಲ್ಲ. ನಟ ಗೋವಿಂದ ಈ ಚಿತ್ರವನ್ನು ಅದೆಷ್ಟು ಪ್ರಮೋಟ್ ಮಾಡಿದ್ದರು ಎಂದರೆ, ಖಂಡಿತ ಆ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿದೆ ಎಂದೇ ಎಲ್ಲರೂ ಭಾವಿಸುವಂತಾಗಿತ್ತು. 

ಅಮೆರಿಕಾ ನೆಲದಲ್ಲೇ ಪತಿ ಕಾಲೆಳೆದ ಪ್ರಿಯಾಂಕಾ ಚೋಪ್ರಾ; ಪತ್ನಿಗೆ ನಿಕ್ ಜೊನಾಸ್ ಮಾಡಿದ್ದೇನು?

ಆದರೆ, ಅಚ್ಚರಿಯ ಶಾಕ್ ಎಂಬಂತೆ, 4.75 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ 'ರಾಜಾ ಭೈಯಾ' ಚಿತ್ರವು ಗಳಿಸಿದ್ದು ಕೇವಲ 2085 ಕೋಟಿ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಸೋಲು ಅದೆಷ್ಟು ಕೆಟ್ಟದ್ದಾಗಿತ್ತು ಎಂದರೆ, ಗೋವಿಂದ ನಟನೆಯ ರಾಜಾ ಭೈಯಾ ಚಿತ್ರವೇ 2003ರಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತ್ಯಂತ ಕಳಪೆ ಕಲೆಕ್ಷನ್ ದಾಖಲೆ ಮಾಡಿದ ಚಿತ್ರವೆಂಬ ಹಣೆಪಟ್ಟಿ ಅಂಟಿಸಿಕೊಂಡಿತು. ಆ ಬಳಿಕ ನಟ ಗೋವಿಂದ ಸಿನಿಮಾ ನಟನೆಯಿಂದ ದೂರ ಸರಿಯುವ ನಿರ್ಧಾರ ಮಾಡಿದರು.

ಐಶ್ವರ್ಯಾ ರೈ-ಅಭಿಷೇಕ್ ಮದುವೆಯಲ್ಲಿ ಕಪಿಲ್ ಕೊಟ್ಟ ಗಿಫ್ಟ್ ಏನು; ಐಶೂ ನಕ್ಕಿದ್ದೇಕೆ? 

ರಾಜಾ ಭೈಯಾ ಸಿನಿಮಾ ಬಿಡುಗಡೆಗೂ ಮೊದಲು ಶೂಟಿಂಗ್ ಮುಗಿಸಿದ್ದ ಗೋವಿಂದ ನಟನೆಯ ಚಿತ್ರಗಳಾದ ಖುಲ್ಲಂ ಖುಲ್ಲ ಪ್ಯಾರ್ ಕರೇ, ಸುಖ್ ಮತ್ತು ಸ್ಯಾಂಡ್‌ವಿಚ್ ಚಿತ್ರಗಳು ಬಳಿಕ ರಿಲೀಸ್ ಆಗಿ, ಆರಕ್ಕೇರದ ಮೂರಕ್ಕಿಳಿಯದ ಚಿತ್ರಗಳಾಗಿ ನಿರಾಸೆ ಮೂಡಿಸಿದವು. ಮೂರು ವರ್ಷಗಳ ಗ್ಯಾಪ್ ಬಳಿಕ ಗೋವಿಂದ ಮತ್ತೆ ಬೆಳ್ಳಿ ತೆರೆಗೆ ಮರಳಿ ಬಂದರು. ಬಾಲಿವುಡ್‌ನಲ್ಲಿ ಸ್ಟಾರ್ ಪಟ್ಟದಲ್ಲಿದ್ದ ನಟ ಗೋವಿಂದರ ಸ್ಟಾರ್ ಪಟ್ಟ ಅದಾಗಲೇ ಕುಸಿದು ನೆಲ ಕಚ್ಚಿತ್ತು. ಕೊನೆಯ ಸಿನಿಮಾ ಆಗಿ ಗೋವಿಂದ ಪಹಲಾಜ್ ನಿಹಾಲನಿಸ್ ರಂಗೀಲಾ ರಾಜಾ 2019ರಲ್ಲಿ ಬಿಡುಗಡೆಯಾಗಿತ್ತು. 

ಉಪೇಂದ್ರರ 'ಎ' ಚಿತ್ರ ಪ್ರದರ್ಶನದ ವೇಳೆ ಕಾವೇರಿ ಥಿಯೇಟರ್‌ಗೆ ಪೊಲೀಸರು ಬಂದಿದ್ದೇಕೆ?

ರಾಜಾ ಬಾಬು ಸಿನಿಮಾ ಖ್ಯಾತಿಯ ಸ್ಟಾರ್ ನಟ ಗೋವಿಂದ ಈಗ ಹಿಂದಿಯ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ ಸ್ಟಾರ್ ನಟರ ಸಾಲಿನಲ್ಲಿದ್ದ ನಟ ಗೋವಿಂದ, ಈಗ ಖ್ಯಾತ ಪೋಷಕ ನಟರ ಸಾಲಿನಲ್ಲಿ ಕೂಡ ಇಲ್ಲ ಎನ್ನಬಹುದು. ಎಲ್ಲವೂ ವಿಧಿಯಾಟ ಎನ್ನಬಹುದೇ? ಆದರೆ, ಗೋವಿಂದರ ಕಾಮಿಡಿ ಟೈಮಿಂಗ್ಸ್‌ ಹಾಗೂ ಡಾನ್ಸ್‌  ಪ್ರತಿಭೆಯನ್ನು ಯಾರೂ ಮರೆಯಲಾಗದು. 

Latest Videos
Follow Us:
Download App:
  • android
  • ios