ಮುಂದಿನ ವಾರ ತೆರೆಗೆ ಅಪ್ಪಳಿಸಲಿರುವ ಕೊತ್ತಲವಾಡಿ ಚಿತ್ರದ ಬಗ್ಗೆ ಸದ್ಯಕ್ಕೆ ಬಹಳಷ್ಟು ಕುತೂಹಲ ಸೃಷ್ಟಿಯಾಗಿದೆ. ಕನ್ನಡ ಸಿನಿಮಾ ಪ್ರೇಕ್ಷಕರು ಕೊತ್ತಲವಾಡಿ ಸಿನಿಮಾವನ್ನು ವೀಕ್ಷಿಸಲು ಕಾಯುತ್ತಿದ್ದರೆ, ಚಿತ್ರತಂಡ ಪ್ರೇಕ್ಷಕರ ಒಳ್ಳೆಯ ರೆಸ್ಪಾನ್ಸ್‌ಗಾಗಿ ಕಾಯುತ್ತಿದೆ. ಚಿತ್ರತಂಡದ ಭರವಸೆ ನಿಜವಾಗಬಹುದೇ? 

ಪುಷ್ಪಾ ಅರುಣ್‌ಕುಮಾರ್ (Pushpa Arunkumar) ನಿರ್ಮಾಣ, ಶ್ರೀರಾಜ್ (Sriraj) ನಿರ್ದೇಶನದ 'ಕೊತ್ತಲವಾಡಿ' (Kothalavadi) ಸಿನಿಮಾ ಮುಂದಿನ ತಿಂಗಳು, 01 ಆಗಷ್ಟ್ 2025ರಂದು (01 August 2025) ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮನೆಮಾಡಿದೆ. 'ಕೊತ್ತಲವಾಡಿ' ಪ್ರಾಜೆಕ್ಟ್ ಶ್ರೀರಾಜ್ ನಿರ್ದೇಶನದ ಮೊಟ್ಟಮೊದಲ ಚಿತ್ರವಾಗಿದೆ. ಇದಕ್ಕೂ ಮೊದಲು ಶ್ರೀರಾಜ್ ಅವರು ಕನ್ನಡದ ಖ್ಯಾತ ನಿರ್ದೇಶಕರಾದ ರವಿ ಶ್ರೀವತ್ಸ ಹಾಗೂ ಕೆವಿ ರಾಜು ಬಳಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಇದೀಗ ತಮ್ಮ ಮೊಟ್ಟಮೊದಲ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ ಶ್ರೀರಾಜ್. 

ಕೊತ್ತಲವಾಡಿ ನಿರ್ಮಾಪರಾದ ಪುಷ್ಪಾ ಅರುಣ್‌ಕುಮಾರ್ ಅವರು ಬಹುತೇಕರಿಗೆ ಗೊತ್ತಿರುವಂತೆ, ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ತಾಯಿ. ಪುಷ್ಪಾ ಅರುಣ್‌ಕುಮಾರ್ ಹೆಸರಿನ ಶಾರ್ಟ್ ಫಾರಂ 'ಪಿಎ' (PA) ಪ್ರೊಡಕ್ಷನ್ ಹೌಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೊತ್ತಲವಾಡಿ ಚಿತ್ರದ ಹೆಚ್ಚಿನ ಭಾಗವನ್ನು ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಹಾಗೂ ಗುಂಡ್ಲುಪೇಟೆ ಏರಿಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಕೆಲವು ಕಡೆಗಳಲ್ಲಿ ಕೂಡ ಶೂಟಿಂಗ್ ಮಾಡಲಾಗಿದ್ದು, ಚಿತ್ರಕತೆಗೆ ಪೂರಕವಾಗಿ ಲೊಕೇಶನ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರದ ಲೀಡ್ ರೋಲ್‌ನಲ್ಲಿ ನಟ ಪೃಥ್ವಿ ಅಂಬಾರ್ (Pruthvi Ambaar) ಹಾಗೂ ನಟಿ ಕಾವ್ಯಾ ಶೈವ (Kavya Shaiva) ನಟಿಸಿದ್ದಾರೆ.

ಕೊತ್ತಲವಾಡಿ ಚಿತ್ರದ ಹವಾ ಸದ್ಯ ಜೋರಾಗಿದ್ದು, ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್, ನಿರ್ದೇಶಕ ಶ್ರೀರಾಜ್, ನಟ ಪೃಥ್ವಿ ಅಂಬಾರ್, ಕಾವ್ಯಾ ಶೈವ ಸೇರಿದಂತೆ ಇಡೀ ಟೀಮ್ ಪ್ರಚಾರಕಾರ್ಯದಲ್ಲಿ ನಿರತವಾಗಿದೆ. ಹೋದಕಡೆಯಲ್ಲೆಲ್ಲಾ ಚಿತ್ರತಂಡಕ್ಕೆ ಅಭೂತಪೂರ್ವ ಸ್ವಾಗತ ದೊರಕಿದ್ದು, ಹೊಸಬರ ಹೊಸ ಪ್ರಯತ್ನವನ್ನು ಕನ್ನಡ ಸಿನಿಪ್ರೇಕ್ಷಕರು ಒಪ್ಪಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿವೆ ಎಂಬ ಮಾತಿದೆ. ಬಿಡುಗಡೆ ಆಗಿರುವ ಟ್ರೈಲರ್ ಭರವಸೆ ಹುಟ್ಟಿಸಿದೆ. ಇನ್ನೇನು ಮುಂದಿನ ಶುಕ್ರವಾರ (ಆಗಷ್ಟ್ 01) ತೆರೆಯ ಮೇಲೆ ಬಂದು ವಿಜೃಂಭಿಸಲಿದೆ 'ಕೊತ್ತಲವಾಡಿ'. ಈ ಮೂಲಕ 'ಕೊತ್ತಲವಾಡಿ' ಊರು ಗೊತ್ತಿಲ್ಲದ ಎಷ್ಟೋ ಜನಕ್ಕೆ ಪರಿಚಯ ಆಗಲಿದೆ.

ಹೊಸಬರ ತಂಡ ಅಗಿದ್ರೂದರೂ ಕೂಡ, ಇಲ್ಲಿ ಎಲ್ಲರೂ ಕೆಲಸದ ಬಗ್ಗೆ ಅನುಭವ ಹಾಗೂ ಶ್ರದ್ಧೆ ಹೊಂದಿದ್ದಾರೆ ಎಂಬುದು ತುಂಬಾ ಸ್ಪಷ್ವವಾಗಿಯೇ ಗೋಚರಿಸುತ್ತಿದೆ. ಸಿನಿಮಾ ನಿರ್ಮಾಣ, ಕಥೆಯ ಆಯ್ಕೆ ಸೇರಿದಂತೆ ಎಲ್ಲಾ ವಿಭಾಗಳ ಬಗ್ಗೆ ಆಳವಾಡಿ ಅಭ್ಯಾಸ ಮಾಡಿದ್ದಾರೆ ನಿರ್ಮಾಪಕರಾದ ಪುಷ್ಪಾ ಅರುಣ್‌ಕುಮಾರ್. ಅವರು ಕ್ಯಾಮೆರಾ ಮುಂದೆ ಮಾತನ್ನಾಡುವ ರೀತಿ, ಮಾಡುತ್ತಿರುವ ಕೆಲಸವೇ ಈ ಮಾತಿಗೆ ಸಾಕ್ಷಿ ನುಡಿಯುತ್ತಿವೆ. ಇನ್ನು ನಿರ್ದೇಶಕ ಶ್ರೀರಾಜ್ ಅವರ ಕಥೆ ಆಯ್ಕೆ ಹಾಗೂ ನಿರ್ದೇಶನದ ಬಗ್ಗೆಯೂ ಒಳ್ಳೆಯ ಮಾತಿದೆ. ನಟ ಪೃಥ್ವಿ ಅಂಬಾರ್ ಈಗಾಗಲೇ ಹೆಸರು ಮಾಡಿರುವ ನಟ. ಕಾವ್ಯಾ ಶೈವ ಕೂಡ ಸೀರಿಯಲ್‌ನ ಫೇಮಸ್ ಫೇಸ್.

ಒಟ್ಟಿನಲ್ಲಿ, ಮುಂದಿನ ವಾರ ತೆರೆಗೆ ಅಪ್ಪಳಿಸಲಿರುವ ಕೊತ್ತಲವಾಡಿ ಚಿತ್ರದ ಬಗ್ಗೆ ಸದ್ಯಕ್ಕೆ ಬಹಳಷ್ಟು ಕುತೂಹಲ ಸೃಷ್ಟಿಯಾಗಿದೆ. ಕನ್ನಡ ಸಿನಿಮಾ ಪ್ರೇಕ್ಷಕರು ಕೊತ್ತಲವಾಡಿ ಸಿನಿಮಾವನ್ನು ವೀಕ್ಷಿಸಲು ಕಾಯುತ್ತಿದ್ದರೆ, ಚಿತ್ರತಂಡ ಪ್ರೇಕ್ಷಕರ ಒಳ್ಳೆಯ ರೆಸ್ಪಾನ್ಸ್‌ಗಾಗಿ ಕಾಯುತ್ತಿದೆ. ಚಿತ್ರತಂಡಕ್ಕಿರುವ ಭರವಸೆ ನಿಜವಾಗಬಹುದೇ? ಫಲಿತಾಂಶ ತಿಳಿಯಲು ಇನ್ನೊಂದೇ ವಾರ ಕಾಯಲಿಕ್ಕಿದೆ. ಹೊಸಬರ ಸಿನಿಮಾ ಗೆಲ್ಲಲಿ, ಅವರಿಂದ ಇನ್ನಷ್ಟು ಹೆಚ್ಚಿನ ಸಿನಿಮಾಗಳು ಮೂಡಿಬರಲಿ ಎಂಬುದು ಸಿನಿಮಾಪ್ರಿಯರ ಹಾರೈಕೆ..!