ಸಿನಿಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ 'ತುಂಬಾಡ್ 2' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಕೊನೆಗೂ ಘೋಷಿಸಿದೆ. ಪಾಪದ ಗತಕಾಲ, ಭಯಾನಕ ಭವಿಷ್ಯ. ಹಸಿವು ಹೆಚ್ಚುತ್ತಿದೆ, ದುರಾಸೆಯ ಪರಂಪರೆ ಮುಂದುವರಿಯುತ್ತಿದೆ.

ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ 'ತುಂಬಾಡ್ 2' ಚಿತ್ರದ ರಿಲೀಸ್ ಡೇಟ್ ಕೊನೆಗೂ ಘೋಷಣೆಯಾಗಿದೆ. ಸಿನಿಮಾವು ಡಿಸೆಂಬರ್ 3, 2027 ರಂದು ತೆರೆಗೆ ಬರಲಿದೆ. ನಟ-ನಿರ್ಮಾಪಕ ಸೋಹಮ್ ಶಾ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಈ ಸೀಕ್ವೆಲ್ ಮೊದಲ ಭಾಗಕ್ಕಿಂತ ಹೆಚ್ಚು ಆಳವಾದ ಮತ್ತು ವಿಸ್ತಾರವಾದ ಕಥೆಯನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಸಿನಿಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ 'ತುಂಬಾಡ್ 2' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಕೊನೆಗೂ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಿನಿಮಾ 2027ರ ಡಿಸೆಂಬರ್ 3 ರಂದು ತೆರೆಗೆ ಬರಲಿದೆ. ಕಳೆದ ಕೆಲವು ವಾರಗಳಿಂದ ಚಿತ್ರತಂಡವು ಮೋಷನ್ ಪೋಸ್ಟರ್ ಮತ್ತು ಸಣ್ಣಪುಟ್ಟ ಅಪ್‌ಡೇಟ್‌ಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ನಟ ಸೋಹಮ್ ಶಾ ಇನ್‌ಸ್ಟಾಗ್ರಾಂನಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಪಾಪದ ಗತಕಾಲ, ಭಯಾನಕ ಭವಿಷ್ಯ. ಹಸಿವು ಹೆಚ್ಚುತ್ತಿದೆ, ದುರಾಸೆಯ ಪರಂಪರೆ ಮುಂದುವರಿಯುತ್ತಿದೆ" ಎಂದು ಬರೆದುಕೊಂಡಿದ್ದಾರೆ.

View post on Instagram

ಇನ್ನೂ ಆಳವಾದ, ವಿಸ್ತಾರವಾದ ಜಗತ್ತು: ಚಿತ್ರತಂಡದ ಭರವಸೆ

ಈ ಸೀಕ್ವೆಲ್ ಬಗ್ಗೆ ಮಾತನಾಡಿದ ಸೋಹಮ್ ಶಾ, 'ತುಂಬಾಡ್' ನನಗೆ ಯಾವಾಗಲೂ ಬಹಳ ವಿಶೇಷವಾದ ಸಿನಿಮಾ. 'ತುಂಬಾಡ್ 2' ಮೂಲಕ ಆ ಜಗತ್ತನ್ನು ಇನ್ನಷ್ಟು ಆಳವಾಗಿ ಮತ್ತು ವಿಸ್ತಾರವಾಗಿ ಕಟ್ಟಿಕೊಡುವ ಆಲೋಚನೆ ನಮ್ಮದು. ಪ್ರೇಕ್ಷಕರು ಇಷ್ಟಪಟ್ಟಿದ್ದ ಕಥೆಯ ಮೂಲಾಂಶ ಮತ್ತು ವಾತಾವರಣವನ್ನು ಉಳಿಸಿಕೊಂಡೇ, ಕಥೆಯಲ್ಲಿ ಹೊಸ ಪದರಗಳನ್ನು ಪರಿಚಯಿಸುತ್ತಿದ್ದೇವೆ. ಇದು ನಿಮಗೆ ಪರಿಚಿತ ಎನಿಸಿದರೂ, ತೆರೆದುಕೊಳ್ಳುವ ರೀತಿ ಹೊಸದಾಗಿರುತ್ತದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೆನ್ ಸ್ಟುಡಿಯೋಸ್‌ನ ಜಯಂತಿಲಾಲ್ ಗಡಾ ಮಾತನಾಡಿ, 'ತುಂಬಾಡ್ 2' ಒಂದು ಅದ್ಭುತ ಸಿನಿಮಾ ಅನುಭವ ನೀಡಲಿದೆ. ಪ್ರೇಕ್ಷಕರನ್ನು ಹಿಡಿದಿಡುವಂತಹ ಕಥೆಯ ಮೂಲಕ ಈ ಸಿನಿಮಾದ ಜಗತ್ತನ್ನು ಇನ್ನಷ್ಟು ಆಳವಾಗಿಸಿದ್ದೇವೆ. ಪೆನ್ ಸ್ಟುಡಿಯೋಸ್ ವೀಕ್ಷಕರಿಗೆ ಯಾವತ್ತಿದ್ದರೂ ಉತ್ತಮ ಗುಣಮಟ್ಟದ ಮತ್ತು ಮನಮುಟ್ಟುವ ಕಥೆಗಳನ್ನು ನೀಡಲು ಬದ್ಧವಾಗಿದೆ" ಎಂದರು.

ನಿರ್ದೇಶಕ ಆದೇಶ್ ಪ್ರಸಾದ್, ಈ ಸೀಕ್ವೆಲ್ ಕಥೆ ಮತ್ತು ದೃಶ್ಯ ವೈಭವವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಲಿದೆ ಎಂದು ವಿವರಿಸಿದರು. "ಮೊದಲ ಭಾಗಕ್ಕೆ ತನ್ನದೇ ಆದ ಒಂದು ಬಲ ಇರುವುದರಿಂದ ಈ ಕಥೆಯನ್ನು ಮುಂದುವರಿಸುವುದು ಸವಾಲಿನ ಜೊತೆಗೆ ಖುಷಿಯ ವಿಚಾರವೂ ಹೌದು. ಸಿನಿಮಾದ ಮೂಲ ಆತ್ಮವನ್ನು ಉಳಿಸಿಕೊಂಡು, ಕಥೆ ಮತ್ತು ದೃಶ್ಯ ಜಗತ್ತನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿ. ಇದು ಮೂಲಕ್ಕೆ ನಿಷ್ಠವಾಗಿದ್ದು, ಪ್ರೇಕ್ಷಕರಿಗೆ ಹೊಸ ಮತ್ತು ವಿಶಿಷ್ಟ ಅನುಭವ ನೀಡಲಿದೆ" ಎಂದು ಅವರು ಹಂಚಿಕೊಂಡರು.

ಆದೇಶ್ ಪ್ರಸಾದ್ ನಿರ್ದೇಶನದ ಈ ಚಿತ್ರವನ್ನು ನಟ-ನಿರ್ಮಾಪಕ ಸೋಹಮ್ ಶಾ ತಮ್ಮ ಸೋಹಮ್ ಶಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪೆನ್ ಸ್ಟುಡಿಯೋಸ್ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. 'ತುಂಬಾಡ್ 2' ಚಿತ್ರವನ್ನು ಪೆನ್ ಮರುಧಾರ್ ವಿತರಣೆ ಮಾಡಲಿದೆ.