Chappell Roan viral photos: ಛಾಯಾಗ್ರಾಹಕರು ಸಹ ಅವರ ಬೋಲ್ಡ್ ಲುಕ್ ಅನ್ನು ಕ್ಯಾಮೆರದಲ್ಲಿ ಸೆರೆಹಿಡಿದರು. ಆದರೆ ಸಂದರ್ಶನ ನೀಡುವ ಸಮಯ ಬಂದಾಗ, ಪ್ರಸಾರ ನಿಯಮಗಳನ್ನು ಪಾಲಿಸಲು ಅವರು ಸೂಕ್ತವಾದ ಮೆರೂನ್ ಕೇಪ್ ಧರಿಸಬೇಕಾಯಿತು.
Grammys 2026: ಚಾಪೆಲ್ ರೋನ್ 2026 ರ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡರು. ಅವರು ಬಹುತೇಕ ಎದೆ ಕಾಣುವ ಉಡುಪನ್ನು ಧರಿಸಿದ್ದರು. ಅಂದರೆ ಉಡುಗೆ ಮುಂಭಾಗದಲ್ಲಿ ಸಂಪೂರ್ಣವಾಗಿ ಓಪನ್ ಇತ್ತು ಮತ್ತು ಹಿಂಭಾಗದಲ್ಲಿಯೂ ಬ್ಯಾಕ್‌ಲೆಸ್ ಆಗಿತ್ತು. ಹಿಂಬದಿಯಲ್ಲಿ ಅವರ ಉದ್ದನೆಯ, ಕೆಂಪು ಕೂದಲು ಸ್ವಲ್ಪ ಮಟ್ಟಿಗೆ ಆವರಿಸಿತ್ತು. ಆದರೆ ಅವರ ಲುಕ್ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು.
ಛಾಯಾಗ್ರಾಹಕರು ಸಹ ಅವರ ಬೋಲ್ಡ್ ಲುಕ್ ಅನ್ನು ಕ್ಯಾಮೆರದಲ್ಲಿ ಸೆರೆಹಿಡಿದರು. ಆದರೆ ಸಂದರ್ಶನ ನೀಡುವ ಸಮಯ ಬಂದಾಗ, ಪ್ರಸಾರ ನಿಯಮಗಳನ್ನು ಪಾಲಿಸಲು ಅವರು ಸೂಕ್ತವಾದ ಮೆರೂನ್ ಕೇಪ್ ಧರಿಸಬೇಕಾಯಿತು. ಚಾಪೆಲ್ ರೋನ್ "ಪಿಂಕ್ ಪೋನಿ ಕ್ಲಬ್" ನಂತಹ ಹಿಟ್ ಹಾಡುಗಳನ್ನು ನೀಡಿರುವ ಗಾಯಕಿ. ಕಳೆದ ವರ್ಷ ಅಂದರೆ 2025 ರಲ್ಲಿ ಗ್ರ್ಯಾಮಿಯಲ್ಲಿ ಅತ್ಯುತ್ತಮ ಹೊಸ ಕಲಾವಿದೆ ಪ್ರಶಸ್ತಿ ಗೆದ್ದರು. ಈ ವರ್ಷ 2026 ರಲ್ಲಿ ತಮ್ಮ "ದಿ ಸಬ್‌ವೇ" ಹಾಡಿಗೆ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದಾರೆ.
ಅಭಿಮಾನಿಗಳು ಹೇಳಿದ್ದೇನು?
ಈಗ ಚಾಪೆಲ್ ರೋನ್ ಬೋಲ್ಡ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಕೆಲವರು, "ಮಿಸ್ ರೋನ್, ನೀವು ಮಾದರಿ ವ್ಯಕ್ತಿ. ನಿಮ್ಮಂತೆ ಯಾರೂ ಮಾಡುತ್ತಿಲ್ಲ" ಎಂದು ಹೇಳಿದರು. ಹಾಗೆಯೇ ಅವರ ಧೈರ್ಯವನ್ನು ಹೊಗಳಿದರು. ಇನ್ನು ಅಭಿಮಾನಿಗಳು, "ಚಾಪೆಲ್‌ಗೆ ರೆಡ್ ಕಾರ್ಪೆಟ್‌ನಲ್ಲಿ ಮಿಂಚುವುದು ಹೇಗೆಂದು ತಿಳಿದಿದೆ. ಅವರ ಸ್ಟೈಲ್ ಸಂಪೂರ್ಣವಾಗಿ ಅದ್ಭುತವಾಗಿದೆ" ಎಂದು ಹೇಳಿದ್ದಾರೆ.
ಇಂಥ ಬಟ್ಟೆಗಳನ್ನೇ ಹಾಕ್ತಿದ್ರು ಚಾಪೆಲ್ ರೋನ್
2025 ರಲ್ಲಿ "ಕಾಲ್ ಹರ್ ಡ್ಯಾಡಿ" ಪಾಡ್‌ಕ್ಯಾಸ್ಟ್‌ನ ಸಂದರ್ಶನದಲ್ಲಿ, ಚಾಪೆಲ್ ತನ್ನ ಸ್ಟೈಲ್ ಬಗ್ಗೆ ಮಾತನಾಡಿದ್ದರು. ದೈನಂದಿನ ಜೀವನದಲ್ಲಿ ತಾನು ತುಂಬಾ ಸಾಧಾರಣವಾಗಿ ಉಡುಗೆ ತೊಡುವುದಾಗಿ ಹೇಳಿದರು. ಒಂದುಕಾಲದಲ್ಲಿ ಅವರು ತುಂಬಾ ಕ್ರೇಜಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರು. ಉದಾಹರಣೆಗೆ ಥಾಂಗ್ಸ್, ಸೊಂಟವನ್ನು ತೋರಿಸುವ ಶಾರ್ಟ್ ಸ್ಕರ್ಟ್‌ಗಳು, ಪಾರದರ್ಶಕ ಟಾಪ್‌ಗಳು ಇತ್ಯಾದಿ. ಆಗ ಅವರು ತುಂಬಾ ಚಿಕ್ಕವರಾಗಿ ಕಾಣುತ್ತಿದ್ದರು. ಆದರೆ ಈಗ ಆ ಹೊಳಪು ಮತ್ತು ಉತ್ಸಾಹ ಕ್ರಮೇಣ ಮಸುಕಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ದಣಿದಿದ್ದು, ಹೆಚ್ಚು ಸರಳ ಮತ್ತು ಆರಾಮದಾಯಕವಾಗಿರಲು ಬಯಸುತ್ತಾರಂತೆ.
ಎಲ್ಲರ ಹೃದಯ ಗೆದ್ದಿತ್ತು ಆ ಭಾಷಣ
ಕಳೆದ ವರ್ಷ, 2025 ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹೊಸ ಕಲಾವಿದೆ ಪ್ರಶಸ್ತಿ ಪಡೆದಾಗ ಅವರ ಭಾಷಣವು ಎಲ್ಲರನ್ನು ಬೆರಗುಗೊಳಿಸಿತು. ವೇದಿಕೆಯಲ್ಲಿ ಅವರು ಸಂಗೀತ ಉದ್ಯಮಕ್ಕೆ ಪ್ರಬಲ ಸಂದೇಶವನ್ನು ನೀಡಿದರು. ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗವನ್ನು ಹುಡುಕುವುದು ಕಷ್ಟಕರವಾಗಿತ್ತು. ವಿಮೆಯನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಹೊರತಾಗಿಯೂ ಉದ್ಯಮವು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿತು. ಕಲಾವಿದರನ್ನು ಗೌರವಿಸಿದ್ದರೆ ಅವರು ಆರೋಗ್ಯ ರಕ್ಷಣೆಯನ್ನು ಪಡೆಯಬಹುದಿತ್ತು. ರೆಕಾರ್ಡ್ ಕಂಪನಿಗಳು ಕಲಾವಿದರನ್ನು ಕೇವಲ ಆದಾಯದ ಮೂಲವಾಗಿ ಪರಿಗಣಿಸದೆ, ಅಮೂಲ್ಯ ಉದ್ಯೋಗಿಗಳಾಗಿ ಪರಿಗಣಿಸಬೇಕು, ಅವರಿಗೆ ವಾಸಯೋಗ್ಯ ವೇತನ, ಆರೋಗ್ಯ ವಿಮೆ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಹೇಳಿದರು. ಅವರ ಭಾಷಣವು ಸಂಗೀತ ಉದ್ಯಮದಲ್ಲಿ ಕಲಾವಿದರ ಹಕ್ಕುಗಳಿಗಾಗಿ ಪ್ರಬಲ ಧ್ವನಿಯಾಯಿತು.
ಈ ಚಾಪೆಲ್ ರೋನ್ ಯಾರು?
ಚಾಪೆಲ್ ರೋನ್ ಒಬ್ಬ ಅಮೇರಿಕನ್ ಗಾಯಕಿ ಮತ್ತು ಗೀತರಚನೆಕಾರರಾಗಿದ್ದು, ನಿಜವಾದ ಹೆಸರು ಕೇಲೀ ರೋಸ್ ಆಮ್ಸ್ಟಟ್ಜ್. ಫೆಬ್ರವರಿ 19, 1998 ರಂದು ಮಿಸೌರಿಯ ವಿಲ್ಲಾರ್ಡ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಸಂಪ್ರದಾಯವಾದಿ, ಕ್ರಿಶ್ಚಿಯನ್ ಕುಟುಂಬದಲ್ಲಿ ಬೆಳೆದರು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಿತರಾದರು. ಹದಿಹರೆಯದವಳಾಗಿದ್ದಾಗ ಯೂಟ್ಯೂಬ್‌ಗೆ ಕವರ್ ಹಾಡುಗಳನ್ನು ಅಪ್‌ಲೋಡ್ ಮಾಡಿದರು ಮತ್ತು 17 ನೇ ವಯಸ್ಸಿನಲ್ಲಿ ಅಟ್ಲಾಂಟಿಕ್ ರೆಕಾರ್ಡ್ಸ್‌ಗೆ ಸಹಿ ಹಾಕಿದರು. ಅವರ ಚೊಚ್ಚಲ EP, "ಸ್ಕೂಲ್ ನೈಟ್ಸ್" 2017 ರಲ್ಲಿ ಬಿಡುಗಡೆಯಾಯಿತು. ಆದರೆ ನಂತರ ಅವರು ಲೇಬಲ್‌ನಿಂದ ಬೇರ್ಪಟ್ಟು ಸ್ವತಂತ್ರ ಕೆಲಸವನ್ನು ಅನುಸರಿಸಿದರು.
2023 ರಲ್ಲಿ ಅವರ ಚೊಚ್ಚಲ ಆಲ್ಬಂ ದಿ ರೈಸ್ ಅಂಡ್ ಫಾಲ್ ಆಫ್ ಎ ಮಿಡ್‌ವೆಸ್ಟ್ ಪ್ರಿನ್ಸೆಸ್‌ನೊಂದಿಗೆ ಬಂದಿತು. ಈ ಆಲ್ಬಂ ವಿಶಿಷ್ಟ ಥೀಮ್‌ಗಳು, ಕ್ಯಾಂಪ್ ಸ್ಟೈಲಿಂಗ್‌ಗಳು ಮತ್ತು ಮೋಜಿನ ಪಾಪ್ ಹಾಡುಗಳನ್ನು ಒಳಗೊಂಡಿದೆ. ಅವರ ಅತಿದೊಡ್ಡ ಹಿಟ್‌ಗಳಲ್ಲಿ "ಗುಡ್ ಲಕ್, ಬೇಬ್!" (2024) ಸೇರಿದೆ. ಇದು ವೈರಲ್ ಆಗಿ ಬಿಲ್‌ಬೋರ್ಡ್ ಹಾಟ್ 100 ರಲ್ಲಿ ಮೊದಲ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಿತು. 'ಪಿಂಕ್ ಪೋನಿ ಕ್ಲಬ್', 'ಹಾಟ್ ಟು ಗೋ!', 'ರೆಡ್ ವೈನ್ ಸೂಪರ್‌ನೋವಾ', 'ಕ್ಯಾಶುಯಲ್' ಮತ್ತು ಇತ್ತೀಚೆಗೆ 'ದಿ ಸಬ್‌ವೇ' (2025 ರಲ್ಲಿ ಬಿಡುಗಡೆಯಾಗುತ್ತಿದೆ) ಸಹ ಸಾಕಷ್ಟು ಜನಪ್ರಿಯವಾಗಿವೆ.