Influencer dance video: ಈ ವಿಡಿಯೋದಲ್ಲಿ ಮೇಘಾ ರಾಣಿ ಅವರು ಮನಾಲಿಯ ಪ್ರವಾಸಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅವರ ವರ್ತನೆ ಅಥವಾ ಸಂದೇಶವು ಸ್ಥಳದ ಸಂಸ್ಕೃತಿ ಹಾಗೂ ಸಾರ್ವಜನಿಕ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.

ಇಂದು ಕೆಲವು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಸಾಮಾಜಿಕ ಮಾಧ್ಯಮವನ್ನು ಅಶ್ಲೀಲತೆಯ ತಾಣವನ್ನಾಗಿ ಪರಿವರ್ತಿಸಿದ್ದಾರೆ. ಕೇವಲ ವೀವ್ಸ್‌ ಮತ್ತು ಲೈಕ್ಸ್‌ಗಾಗಿ ಕೆಲವು ಹುಡುಗಿಯರು ಎಲ್ಲಾ ಮಿತಿಗಳನ್ನ ಮೀರಿದ್ದಾರೆ. ಕ್ಯಾಮೆರಾ ಮುಂದೆ ಬೆ*ತ್ತಲೆಯಾಗಿ ಪೋಸ್ ನೀಡುವುದು ಮತ್ತು ರೀಲ್ಸ್ ಮಾಡುವುದು ಅವರಿಗೆ ಸುಲಭವಾಗಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿದಿನ ಇಂತಹ ಸಾವಿರಾರು ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಈಗ ಮೇಘಾ ರಾಣಿ ಎಂಬ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬ್ರೇಸಿಯರ್ ಮತ್ತು ಪ್ಯಾಂಟಿ ಮಾತ್ರ ಧರಿಸಿ ಮನಾಲಿಯ ಹಿಮಭರಿತ ಬೆಟ್ಟಗಳಲ್ಲಿ ರೀಲ್ಸ್ ಶೂಟ್ ಮಾಡುತ್ತಿರುವುದನ್ನು ಕಾಣಬಹುದು. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು. ಮೇಘಾ ರಾಣಿ ಅವರ ಮನಾಲಿಯಲ್ಲಿ ಚಿತ್ರೀಕರಿಸಿದ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲ ಬಳಕೆದಾರರು ವಿಡಿಯೋದಲ್ಲಿನ ಕಂಟೆಂಟ್ ಆಕ್ಷೇಪಾರ್ಹ ಎಂದು ಹೇಳುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮೇಘಾ ರಾಣಿ ಅವರು ಮನಾಲಿಯ ಪ್ರವಾಸಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅವರ ವರ್ತನೆ ಅಥವಾ ಸಂದೇಶವು ಸ್ಥಳದ ಸಂಸ್ಕೃತಿ ಹಾಗೂ ಸಾರ್ವಜನಿಕ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಚರ್ಚೆ ಆರಂಭವಾಗಿದೆ.

ಅಷ್ಟಕ್ಕೂ ವಿಡಿಯೋ ವೈರಲ್ ಆಗಿದ್ದೇಕೆ?

ಮೇಘಾ ರಾಣಿ ತಮ್ಮ ಮನಾಲಿ ಪ್ರವಾಸದ ಕೆಲವು ರೀಲ್ಸ್ ಶೇರ್ ಮಾಡಿದ್ದಾರೆ. ಜನಪ್ರಿಯ ಪ್ರವಾಸಿ ತಾಣವಾದ ಮನಾಲಿಯ ಹಿಮಭರಿತ ಬೆಟ್ಟಗಳಲ್ಲಿ ಬ್ರೇಸಿಯರ್ ಮತ್ತು ಪ್ಯಾಂಟಿ ಮಾತ್ರ ಧರಿಸಿ ರೀಲ್ಸ್ ಮಾಡಿದ್ದಾರೆ. ಈಗ ಈ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.

ಮೇಘಾ ರಾಣಿಯ ಈ ಅಶ್ಲೀಲ ರೀಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿದೆ. @iNikhilsaini ಎಂಬ ಖಾತೆಯು ಈ ರೀಲ್ಸ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, "ಇನ್ನು ಮುಂದೆ ನೋಡಲು ಕೆಟ್ಟದ್ದೇನೂ ಇಲ್ಲ ಎಂದು ನಾವು ಭಾವಿಸಿದಾಗ ಸಾಮಾಜಿಕ ಮಾಧ್ಯಮವು ನಮ್ಮನ್ನು ಮತ್ತೆ ನೀವಂದುಕೊಂಡಿದ್ದು ತಪ್ಪು ಎಂದು ಸಾಬೀತುಪಡಿಸಿತ್ತದೆ. ಈಗ ಆ ಸ್ಥಳಕ್ಕೆ ಗೌರವವಿಲ್ಲ, ಅಲ್ಲಿನ ಜನರಿಗೆ ಗೌರವವಿಲ್ಲ. ಆದರೆ ಇವು ಕುಟುಂಬ ತಾಣಗಳು ಮತ್ತು ಪ್ರವಾಸಿ ತಾಣಗಳಾಗಿವೆ. ನೆನಪಿಡಿ. ಇವು ಅಗ್ಗದ ವಿಷಯವನ್ನು ತಯಾರಿಸುವ ಸ್ಥಳಗಳಲ್ಲ. ಇಂತಹ ಜನರಿಂದಾಗಿಯೇ ಈ ಸ್ಥಳಗಳು ನಿಧಾನವಾಗಿ ಕ್ಷೀಣಿಸುತ್ತಿವೆ" ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

Scroll to load tweet…

ಬಳಕೆದಾರರು ಹೇಳಿದ್ದೇನು? 

ಈ ವಿಡಿಯೋ ನೋಡಿದ ಬಳಕೆದಾರರು ವಿವಿಧ ಕಾಮೆಂಟ್ಸ್ ಮಾಡುತ್ತಿದ್ದು, ಕೆಲವು ಬಳಕೆದಾರರು, "ಕೇವಲ ಲೈಕ್ಸ್, ವೀಕ್ಷಣೆಗಳು ಮತ್ತು ಹಣಕ್ಕಾಗಿ ಇಂದು ಜನರು ತಮ್ಮ ಗೌಪ್ಯತೆಯನ್ನು ಮಾತ್ರವಲ್ಲದೆ, ತಮ್ಮ ಘನತೆಯನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ. ಸ್ವಾಭಿಮಾನವನ್ನೂ ಸಹ." "ಸಾಮಾಜಿಕ ಮಾಧ್ಯಮ ಅಲ್ಗಾರಿದಮ್‌ಗಳು ಇಂತಹ ನಡವಳಿಕೆಯನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು; ಆಗ ಮಾತ್ರ ಈ ಜನರು ಅಂತಹ ಕೆಲಸಗಳನ್ನು ಮಾಡದಿರುವ ಬಗ್ಗೆ ಯೋಚಿಸುತ್ತಾರೆ" ಎಂದೆಲ್ಲಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇಘಾ ರಾಣಿ ಅವರಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ವಿಡಿಯೋ ವೈರಲ್ ಆದ ನಂತರ ಈ ವಿಷಯ ಇನ್ನಷ್ಟು ಗಮನ ಸೆಳೆಯುತ್ತಿದ್ದು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸಾರ್ವಜನಿಕ ವೇದಿಕೆಯಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕೆಂಬ ಚರ್ಚೆಯೂ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯಕ್ಕೆ ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಗಾಗಿ ಬಳಕೆದಾರರು ಅಧಿಕೃತ ಹೇಳಿಕೆ ಅಥವಾ ಸಂಪೂರ್ಣ ಸತ್ಯಾಂಶಗಳಿಗಾಗಿ ಕಾಯುತ್ತಿದ್ದಾರೆ.