ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು, ಮಹಿಳಾ ಸಬಲೀಕರಣ ಹೋರಾಟ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಾಲಿವುಡ್ ‘ಸೂಪರ್ ಸ್ಟಾರ್’ ಶಾರುಖ್ ಖಾನ್ ಅವರಿಗೆ ಆಸ್ಪ್ರೇಲಿಯಾದ ಟ್ರೋವ್ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ಪ್ರದಾನ ಮಾಡಿದೆ.
ಮೆಲ್ಬರ್ನ್ (ಆ. 10): ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು, ಮಹಿಳಾ ಸಬಲೀಕರಣ ಹೋರಾಟ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಾಲಿವುಡ್ ‘ಸೂಪರ್ ಸ್ಟಾರ್’ ಶಾರುಖ್ ಖಾನ್ ಅವರಿಗೆ ಆಸ್ಪ್ರೇಲಿಯಾದ ಟ್ರೋವ್ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ಪ್ರದಾನ ಮಾಡಿದೆ.
66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ
ಇದೇ ವೇಳೆ, ಆರೋಗ್ಯ, ಕ್ರೀಡೆ ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಹಾಗೂ ಎಂಜಿನಿಯರ್ ವಿಭಾಗದಲ್ಲಿ ಸಂಶೋಧನೆ ನಡೆಸುವ ಭಾರತೀಯ ಮಹಿಳಾ ಅಭ್ಯರ್ಥಿಗಳಿಗೆ 4 ವರ್ಷಗಳ ‘ಶಾರುಖ್ ಖಾನ್ ಲಾ ಟ್ರೋಬ್ ಯೂನಿವರ್ಸಿಟಿ ರಿಸಚ್‌ರ್ ಸ್ಕಾಲರ್ಶಿಪ್’ ನೀಡಲಾಗುವುದು ಎಂದು ವಿಶ್ವವಿದ್ಯಾಲಯ ಘೋಷಣೆ ಮಾಡಿದೆ.
ಈ ಯೋಜನೆಯಲ್ಲಿ ದಾಖಲಾದ ಅಭ್ಯರ್ಥಿಗಳು 2 ಲಕ್ಷ ಆಸ್ಪ್ರೇಲಿಯನ್ ಡಾಲರ್ (96 ಲಕ್ಷ ರು.) ಸ್ಕಾಲರ್ಶಿಪ್ ಪಡೆಯಲಿದ್ದಾರೆ ಎಂದು ವಿವಿ ತಿಳಿಸಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡಕ್ಕೆ ಸುಗ್ಗಿ!
53 ರ ಹರೆಯದ ಖಾನ್ ಗೆ ಶುಕ್ರವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ಇದು ಮೀರ್ ಫೌಂಡೇಶನ್ಗೆ ನೀಡಿದ ಗೌರವವಲ್ಲ. ಅನ್ಯಾಯ, ಅಸಮಾನತೆ ಮತ್ತು ಅಮಾನವೀಯತೆಯನ್ನು ಕ್ರೂರವಾಗಿ ಎದುರಿಸುತ್ತಿರುವ ಪ್ರತಿಯೊಬ್ಬ ಮಹಿಳೆಯರ ಧೈರ್ಯಕ್ಕಾಗಿ ಸಂದ ಗೌರವ.
ಸಮಾಜ ಸಹಾನುಭೂತಿ ಮತ್ತು ಪ್ರೀತಿಯನ್ನು ಬೆಳೆಸುವ ಬದಲು ಕೋಪ ಮತ್ತು ದ್ವೇಷಕ್ಕೆ ಒಲವು ತೋರಿಸುತ್ತಿದೆ. ಇದು ಪ್ರಪಂಚಾದ್ಯಂತ ಹರಡುತ್ತಿದೆ. ಇವೆಲ್ಲದರ ನಡುವೆ ಮಾನವೀಯತೆ, ಪ್ರೀತಿ ಸಹಕಾರ ಉಳಿದಿದೆ ಎಂದು ಶಾರೂಖ್ ಗೌರವ ಸ್ವೀಕರಿಸಿದ ಬಳಿಕ ಹೇಳಿದ್ದಾರೆ.
