ಬೆಂಗಳೂರು (ಆ. 09): ಮಹಾಮಳೆ ಅವಾಂತರದ ನಡುವೆಯೂ ಸಿಹಿಸುದ್ದಿ! 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ 10 ಪ್ರಶಸ್ತಿಗಳು ಬಂದಿದೆ. ಯಾವುದೇ ಭಾಷೆಯ ಸಿನಿಮಾಗೆ ಇಷ್ಟೊಂದು ಪ್ರಶಸ್ತಿ ಸಿಕ್ಕಿಲ್ಲ.  ಸ್ಯಾಂಡಲ್ ವುಡ್ ಮಡಿಲಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯ ಗರಿ ಬಂದಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಶಸ್ತಿ ಪ್ರಕಟಪಡಿಸಿದ್ದಾರೆ.  

ಇದನ್ನೂ ಓದಿ | ವರಮಹಾಲಕ್ಷ್ಮೀ ಹಬ್ಬದಂದು ಶೃತಿ ಹರಿಹರನ್ ಮನೆಗೆ ‘ಮಹಾಲಕ್ಷ್ಮೀ’ ಆಗಮನ!

ಸ್ಯಾಂಡಲ್ ವುಡ್ ಗೆ ಸಿಕ್ಕ 10 ಪ್ರಶಸ್ತಿಗಳು 

‘ಒಂದಲ್ಲ ಎರಡಲ್ಲ’ ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ

ಬಾಲ ನಟ ಪ್ರಶಸ್ತಿ - ಒಂದಲ್ಲ ಎರಡಲ್ಲ ಸಿನಿಮಾ

ಅತ್ಯುತ್ತಮ ಮಕ್ಕಳ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ


ಅತ್ಯುತ್ತಮ ಪ್ರಾದೇಶಿಕ ಚಿತ್ರ - ನಾತಿಚರಾಮಿ ಸಿನಿಮಾ

ಅತ್ಯುತ್ತಮ ಹಿನ್ನೆಲೆ ಗಾಯಕಿ - ಬಿಂದುಮಾಲಿನಿ - ನಾತಿಚರಾಮಿ

ಅತ್ಯುತ್ತಮ ಸಂಕಲನ - ನಾಗೇಂದ್ರ - ನಾತಿಚರಾಮಿ ಸಿನಿಮಾ

ಅತ್ಯುತ್ತಮ ವಿಶುವಲ್ಸ್ ಎಫೆಕ್ಟ್ - ಕೆಜಿಎಫ್ ಸಿನಿಮಾ

ಅತ್ಯುತ್ತಮ ಸಾಹಸ - ಕೆಜಿಎಫ್ ಸಿನಿಮಾ

ನಾತಿಚರಾಮಿ ಚಿತ್ರದ ಪಾತ್ರಕ್ಕೆ ಶೃತಿ ಹರಿಹರನ್​​​ಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ

ಇನ್ನೂ ಒಂದು ಹೆಮ್ಮೆಯ ವಿಚಾರವೆಂದರೆ ಕನ್ನಡ ನಿರ್ದೇಶಕ ಲಿಂಗದೇವರು ರಾಷ್ಟ್ರೀಯ ಚಲನಚಿತ್ರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಕನ್ನಡ ಚಲನಚಿತ್ರರಂಗಕ್ಕೆ ಇದೇ ಮೊದಲ ಬಾರಿಗೆ 10 ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಚಾರವೆಂದು ಲಿಂಗದೇವರು ಸುವರ್ಣನ್ಯೂಸ್. ಕಾಮ್ ಗೆ ತಿಳಿಸಿದ್ದಾರೆ. 

"