ನಮ್ ಋಷಿ ನಿರ್ದೇಶನದ 'ರಾಮ್ ರಹೀಮ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 'ಪ್ರೇಮದ ಊರಲಿ' ಚಿತ್ರದ ಯಶಸ್ಸು ಈ ಹೊಸ ಸಿನಿಮಾಗೆ ಹೂಡಿಕೆದಾರರನ್ನು ತಂದುಕೊಟ್ಟಿದೆ. ಆ ಚಿತ್ರದ ಯಶಸ್ಸನ್ನು ನೋಡಿ ನಮ್ಮ ಚಿತ್ರಕ್ಕೂ ಹಣ ಹೂಡಲು ಹಲವರು ಮುಂದೆ ಬಂದಿದ್ದಾರೆ. ಒಂದು ಚಿತ್ರದ ಯಶಸ್ಸು ಮತ್ತೊಂದು ಚಿತ್ರಕ್ಕೆ ಭರವಸೆ ತುಂಬಿದೆ’ ಎಂದರು.
ಬೆಂಗಳೂರು: ನಮ್ ಋಷಿ ಕತೆ, ಚಿತ್ರಕಥೆ, ಸಾಹಿತ್ಯ, ಸಂಗೀತ ನೀಡುವ ಜೊತೆಗೆ ನಿರ್ದೇಶನವನ್ನೂ ಮಾಡಿರುವ ‘ರಾಮ್ ರಹೀಮ್’ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ಲಕ್ಷ್ಮೀನಾರಾಯಣ ಗೌಡ ಅತಿಥಿಯಾಗಿ ಹಾಜರಿದ್ದರು.
ನಮ್ ಋಷಿ, ‘ರಾಮ್ ಎಂದರೆ ಹಿಂದೂ, ರಹೀಮ್ ಎಂದರೆ ಮುಸ್ಲಿಂ ಎಂಬ ಭೇದವಿಲ್ಲ. ರಾಮ್ ರಹೀಮ್ ಎಂದರೆ ಮಾನವೀಯತೆಯ ಸಂದೇಶ. ಸ್ನೇಹಕ್ಕೆ ಜಾತಿ, ಧರ್ಮದ ಬೇಧವಿಲ್ಲ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಸಿನಿಮಾ ನಿರ್ಮಾಣದ ಹಾದಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಹೇಳಿದರು.
ನೂರಾರು ತಂತ್ರಜ್ಞರಿಗೆ ಕೆಲಸ
‘ಪ್ರೇಮದ ಊರಲಿ’ ಚಿತ್ರ ಗೆದ್ದಿದ್ದರಿಂದ ನನ್ನನ್ನೂ ಸೇರಿಸಿ ನೂರಾರು ತಂತ್ರಜ್ಞರಿಗೆ ಕೆಲಸ ಸಿಗುವಂತಾಗಿದೆ. ಆ ಚಿತ್ರದ ಯಶಸ್ಸನ್ನು ನೋಡಿ ನಮ್ಮ ಚಿತ್ರಕ್ಕೂ ಹಣ ಹೂಡಲು ಹಲವರು ಮುಂದೆ ಬಂದಿದ್ದಾರೆ. ಒಂದು ಚಿತ್ರದ ಯಶಸ್ಸು ಮತ್ತೊಂದು ಚಿತ್ರಕ್ಕೆ ಭರವಸೆ ತುಂಬಿದೆ’ ಎಂದರು.
ರಾಮ್ ಪಾತ್ರದಲ್ಲಿ ನಟಿಸಿರುವ ಕ್ಯಾದಿಗಾರ ಅರುಣ್ ಹಾಗೂ ರಹೀಮ್ ಪಾತ್ರದಲ್ಲಿ ಅಭಿನಯಿಸಿರುವ ಕಿರಣ್ ಅದ್ವಿತ್ ಸೇರಿದಂತೆ ಹಲವರು ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು.
ರು.1 ಕೋಟಿಗೆ ಪ್ರೇಮದ ಊರಲಿ ಆಡಿಯೋ ಹಕ್ಕು ಮಾರಾಟ
ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ಆಡಿಯೋ ಮಾರುಕಟ್ಟೆಯಲ್ಲೂ ಸದ್ದು ಮಾಡಿದೆ. ಈ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆಯ ಪಾಲಾಗಿದೆ. ವಿಶೇಷ ಎಂದರೆ ಒಂದು ಕೋಟಿ ರೂಪಾಯಿಗೆ ಆಡಿಯೋ ಮಾರಾಟ ಆಗಿರುವುದು.
ಇತ್ತೀಚಿನ ವರ್ಷಗಳಲ್ಲಿ ಹೊಸಬರ ಚಿತ್ರವೊಂದರ ಆಡಿಯೋ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ಇದೇ ಮೊದಲು. ಸುನಾದ್ ಗೌತಮ್ ಸಂಗೀತದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ.
















