ಬೆಂಗಳೂರು (ಜ. 14): ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿದ ಚಿತ್ರ ಕೆಜಿಎಫ್ ಪಾಕಿಸ್ತಾನದಲ್ಲಿಯೂ ಅಬ್ಬರಿಸುತ್ತಿದೆ. ಅಲ್ಲಿನ ಪ್ರೇಕ್ಷಕರೂ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕನ್ನಡದ ಮಟ್ಟಿಗೆ ಇದು ದಾಖಲೆಯೇ ಸರಿ. 

ಕೆಜಿಎಫ್ ‘ವಿಲನ್’ ಭೇಟಿಯಾದ ಜನಾರ್ದನ್ ರೆಡ್ಡಿ!

ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಕೆಜಿಎಫ್. ಇದುವರೆಗೂ ಕನ್ನಡದ ಯಾವುದೇ ಸಿನಿಮ ಪಾಕ್ ನಲ್ಲಿ ತೆರೆ ಕಂಡಿಲ್ಲ. ಕೆಜಿಎಫ್ ಮೊದಲ ಬಾರಿಗೆ ತೆರೆ ಕಂಡಿದ್ದು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

200 ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌

ಸಿನಿಮಾ ಮೂಲಗಳ ಪ್ರಕಾರ ಪಾಕ್ ನಲ್ಲಿ 2.75 ರಿಂದ 3 ಕೋಟಿ ಕಲಕ್ಷನ್ ಆಗಿದೆ ಎನ್ನಲಾಗಿದೆ. 

ಬಾಲಿವುಡ್‌ನಲ್ಲಂತೂ ಅಸಾಧ್ಯ ಗೆಲುವು ಸಾಧಿಸಿದೆ. ಹಿಂದಿಯ ಲೆಕ್ಕಾಚಾರ ಪರಿಣತ ತರಣ್‌ ಆದರ್ಶ್ ಪ್ರಕಾರ, ‘ಕೆಜಿಎಫ್‌’ ಹಿಂದಿಯಲ್ಲಿ ಈಗಾಗಲೇ 37 ಕೋಟಿ ಗಳಿಸಿದೆ. 40 ಕೋಟಿ ಗಳಿಸುವುದು ನಿಶ್ಚಿತ.

ಕೆಜಿಎಫ್-2 ರಿಲೀಸ್‌ ಯಾವಾಗ? ನಿರ್ಮಾಪಕ ಹೇಳುವುದೇನು?

ಇನ್ನು ಯುಎಸ್‌ಎನಲ್ಲಿ ಬಿಡುಗಡೆಯಾಗಿರುವ ಚಿತ್ರ ಈಗಾಗಲೇ . 5.31 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ತೆಲುಗು ಭಾಷೆಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ದಾಖಲಾಗಿದೆ ಎನ್ನಲಾಗಿದೆ. ಇವೆಲ್ಲವೂ ಸೇರಿ ಐದು ಭಾಷೆಯಲ್ಲಿ ಬಿಡುಗಡೆಯಾದ ಚಿತ್ರದ ಗಳಿಕೆ 200 ಕೋಟಿ ರುಪಾಯಿ ತಲುಪಿದೆ.