ಬಿಡುಗಡೆಯಾದ 20 ದಿನಗಳಲ್ಲಿಯೇ 200 ಕೋಟಿ ರೂ. ಕಲೆಕ್ಷನ್ ಮಾಡಿದೆ ದಾಖಲೆ ಸೃಷ್ಟಿಸಿದೆ KGF. ಅಪ್ಪಟ ಕನ್ನಡಿಗ ಯಶ್ ಅದ್ಭುತ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನ ಚಿತ್ರವನ್ನು ಯಶಸ್ವಿಯಾಗಿದೆ.. ಇನ್ನು ಸಿಂಪಲ್ ಆದರೂ ಎಫೆಕ್ಟಿವ್ ಪಾತ್ರವೆಂದೆನಿಸಿಕೊಂಡಿರುವುದು ಯಶ್ ತಾಯಿ ಪಾತ್ರ ಮಾಡಿರುವ ಅರ್ಚನಾ ಜೋಶಿ. ಅಲ್ಲದೇ ಚಿತ್ರದಲ್ಲಿ ನಟಿಸಿರುವ ಪುಟ್ಟ ಪುಟ್ಟ ಬಾಲಕರು ಚಿತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲಿಯೂ ಸಿಂಗಲ್ ಡೈಲಾಗ್‌ನಿಂದಲೇ ಮನೆ ಮಾತಾದ ರಿತ್ವಿಕ್ ಗೌಡ ಅಭಿನಯ ಎಲ್ಲರ ಹೃದಯ ಗೆದ್ದಿದೆ.

200 ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌

ಪ್ರೊಮೋಗಳಲ್ಲಿ ನೋಡಿದರೆ ಒಬ್ಬ ಹುಡುಗ ‘ಅಲ್ಲ ವಿಲನ್’ ಎಂದು ಹೇಳುವಂತಿದೆ ಋತ್ವಿಕ್ ನಟನೆ. ಚಿಕ್ಕಂದಿನಿಂದಲೂ ನಟನೆ ಹಾಗು ವಿಲನ್ ಪಾತ್ರಗಳನ್ನೇ ಹೆಚ್ಚು ಇಷ್ಟಪಟ್ಟ ಬೆಳೆದ ಹುಡುಗನಿಗೆ KGFನ ಈ ಪಾತ್ರ ಒಳ್ಳೆ ಬ್ರೇಕ್ ಕೊಟ್ಟಿದೆ.

ಇಂಥ ಅದ್ಭುತ ಪ್ರತಿಭೆಯನ್ನು ಮಾಜಿ ಸಚಿವ, ಗಣಿ ದಣಿ ಜನಾರ್ದನ ರೆಡ್ಡಿ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ ಶಿವರಾಜ್‌ಕುಮಾರ್ ಸೇರಿ ವಿವಿಧ ನಟರ ಖಡಕ್ ಡೈಲಾಗ್ ಹೇಳಿ, ನಟಿಸಿ ತೋರಿಸಿರುವ ಈ ಬಾಲಕನ ವೀಡಿಯೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೆಜಿಎಫ್-2 ರಿಲೀಸ್‌ ಯಾವಾಗ? ನಿರ್ಮಾಪಕ ಹೇಳುವುದೇನು?

‘KGF ಚಿತ್ರದಲ್ಲಿ ಬಾಲನಟನಾಗಿ ದೇಶದೆಲ್ಲೆಡೆ ಪ್ರೇಕ್ಷಕರ ಗಮನ ಸೆಳೆದ ರಿತ್ವಿಕ್ ಜೊತೆ ಕಳೆದ ಕ್ಷಣಗಳು...’ಎಂಬ ಒಕ್ಕಣಿಕೆಯೊಂದಿಗೆ ರೆಡ್ಡಿ ವೀಡಿಯೋ ಅಪ್‌ಲೋಡ್ ಮಾಡಿಕೊಂಡಿದ್ದಾರೆ.