ಬೆಂಗಳೂರು (ಜ. 04): ಯಶ್ ಅಭಿನಯದ ಕೆಜಿಎಫ್-2 ಕನ್ನಡ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿದೆ. ಭಾರೀ ಯಶಸ್ಸು ಸಾಧಿಸಿದೆ. ಬಾಕ್ಸಾಫೀಸ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಕೆಜಿಎಫ್ ನೋಡಿದವರೆಲ್ಲಾ ಕೆಜಿಎಫ್-2 ಯಾವಾಗ ಎಂದು ಕೇಳುತ್ತಿದ್ದಾರೆ. 

ಯಶ್- ರಾಧಿಕಾ ಮಗಳ ಹೆಸರು ಇದೇ ಅಂತೆ!

ಚಿತ್ರದ ಯಶಸ್ಸಿನಿಂದ ಪ್ರೇರೆಪಿತವಾದ ಚಿತ್ರತಂಡ ಕೆಜಿಎಫ್-2 ಮಾಡಲು ಸಿದ್ಧವಾಗಿದೆ. ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸೆಟ್ಟೇರಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ. 

ಕೋಟಿ ದಾಟಿತಾ ಕೆಜಿಎಫ್? ವಿಜಯ್ ಕಿರಗಂದೂರು ಹೇಳೋದೇನು?

ನಿರ್ದೇಶಕ ಪ್ರಶಾಂತ್ ನೀಲ್ ಗೆ ಬೇರೆ ಭಾಷೆಯಿಂದಲೂ ಆಫರ್ ಬರುತ್ತಿವೆ. ಅದಕ್ಕೂ ಮೊದಲು ಕೆಜಿಎಫ್ 2 ಮುಗಿಸಲು ನಿರ್ಧರಿಸಿದ್ದಾರೆ ಪ್ರಶಾಂತ್.