ಹಿಂದಿ ಆವೃತ್ತಿ ಗಳಿಕೆ 37 ಕೋಟಿ, ಅಮೆರಿಕಾದಿಂದ 5 ಕೋಟಿ.

ಬಾಲಿವುಡ್‌ನಲ್ಲಂತೂ ಅಸಾಧ್ಯ ಗೆಲುವು ಸಾಧಿಸಿದೆ. ಹಿಂದಿಯ ಲೆಕ್ಕಾಚಾರ ಪರಿಣತ ತರಣ್‌ ಆದಶ್‌ರ್‍ ಪ್ರಕಾರ, ‘ಕೆಜಿಎಫ್‌’ ಹಿಂದಿಯಲ್ಲಿ ಈಗಾಗಲೇ 37 ಕೋಟಿ ಗಳಿಸಿದೆ. 40 ಕೋಟಿ ಗಳಿಸುವುದು ನಿಶ್ಚಿತ. ಇನ್ನು ಯುಎಸ್‌ಎನಲ್ಲಿ ಬಿಡುಗಡೆಯಾಗಿರುವ ಚಿತ್ರ ಈಗಾಗಲೇ . 5.31 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ತೆಲುಗು ಭಾಷೆಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ದಾಖಲಾಗಿದೆ ಎನ್ನಲಾಗಿದೆ. ಇವೆಲ್ಲವೂ ಸೇರಿ ಐದು ಭಾಷೆಯಲ್ಲಿ ಬಿಡುಗಡೆಯಾದ ಚಿತ್ರದ ಗಳಿಕೆ 200 ಕೋಟಿ ರುಪಾಯಿ ತಲುಪಿದೆ.

ಹಿಂದಿಯಲ್ಲಿ ಶಾರುಕ್‌ ಖಾನ್‌ ಅಭಿನಯದ ‘ಝೀರೋ’ ಮತ್ತು ರಣವೀರ್‌ ಸಿಂಗ್‌ ನಟನೆಯ ‘ಸಿಂಬಾ’ ಈ ಎರಡೂ ದೊಡ್ಡ ಸಿನಿಮಾಗಳ ಮಧ್ಯೆ ಅಷ್ಟುದೊಡ್ಡ ಗಳಿಕೆಯಾಗಿರುವುದು ನಿಜವಾಗಿಯೂ ದೊಡ್ಡ ಸಾಧನೆ ಎನ್ನುವುದು ಬಾಲಿವುಡ್‌ ಪಂಡಿತರ ಲೆಕ್ಕಾಚಾರ.

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ಅಭಿನಯದ, ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರ ಇತಿಹಾಸ ಸೃಷ್ಟಿಸಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.