ನಿರ್ದೇಶಕ ಆರ್‌. ಚಂದ್ರು ಮತ್ತು ಉಪೇಂದ್ರ ಜೋಡಿಯಾಗಿ ಕನ್ನಡ ಸಿನಿ ಪ್ರೇಮಿಗಳಿಗೆ ವಿಭಿನ್ನ ಕತೆಯ ಅನಾವರಣ ಮಾಡಲು ಮುಂದಾಗಿದ್ದಾರೆ. ಚಿತ್ರದ ಟ್ರೈಲರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜತೆಗೆ ಟ್ರೈಲರ್‌ ನಲ್ಲಿ ಕಂಡುಬರುವ ಹಸಿ ಬಿಸಿ ದೃಶ್ಯದ ತುಣುಕು ಸದ್ದು ಮಾಡುತ್ತಿದೆ.

ರೆಬಲ್ ಸ್ಟಾರ್ ಅವರೊಂದಿಗೆ ಉಪೇಂದ್ರ ಸ್ನೇಹ ಹೇಗಿತ್ತು?

ಹಿಂದೆ ಬ್ರಹ್ಮ ಚಿತ್ರವನ್ನು ಉಪೇಂದ್ರ ಮತ್ತು ಚಂದ್ರು ಜೋಡಿ ಕನ್ನಡಕ್ಕೆ ನೀಡಿತ್ತು. ಇದೀಗ ಮತ್ತೆ ಒಂದಾಗಿದೆ. ಸಂಭಾಷಣೆ ಸಹ ಡಿಫರೆಂಟಾಗಿದೆ. ಉಪೇಂದ್ರ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಐ ಲವ್ ಯು ಚಿತ್ರಕ್ಕೆ ’ನಿನ್ನೇ ಪ್ರೀತಿಸ್ತೀನಿ’ ಎನ್ನುವ ಟ್ಯಾಗ್ ಲೈನ್ ಕೊಡಲಾಗಿದೆ.