Kannada  

(Search results - 3960)
 • Subramanya

  NRI22, Jul 2019, 4:24 PM IST

  ಕತಾರ್ ಐಸಿಬಿಎಫ್ ಸದಸ್ಯರಾಗಿ ಉಡುಪಿಯ ಸುಬ್ರಹ್ಮಣ್ಯ ಹೆಬ್ಬಾಗಿಲು

  ಕನ್ನಡಿಗರು ಎಲ್ಲಿಯೇ ನೆಲೆಸಿದ್ದರು ಸಂಘಟನೆ ಮತ್ತು ಜನರ ಹಿತ ಕಾಯುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅದಕ್ಕೊಂದು ಒಳ್ಳೆಯ ನಿದರ್ಶನ ಎಂದರೆ ಸುಬ್ರಹ್ಮಣ್ಯ ಹೆಬ್ಬಾಗಿಲು. 

 • Dakshina Kannada

  Karnataka Districts22, Jul 2019, 3:13 PM IST

  ಕಸದ ಕೊಂಪೆಯಾಗಿದ್ದ ಮಣಿಮುಂಡ ಈಗ ಕ್ಲೀನ್ ಹಳ್ಳಿ!

  ಕಸದ ಕೊಂಪೆಯಾಗಿದ್ದ ಮಣಿಮುಂಡ ಈಗ ಕ್ಲೀನ್ ಹಳ್ಳಿ!| ಗಡಿನಾಡು ಕಾಸರಗೋಡಿನ ಪುಟ್ಟ ಹಳ್ಳಿಯಲ್ಲಿ ಸ್ವಚ್ಛತಾ ಜಾಗೃತಿ, ‘ಬ್ರದರ್ಸ್ ಮಣಿಮುಂಡ’ ಸಂಘದ ಸದಸ್ಯರ ಯಶೋಗಾಥೆ

 • Ganesh
  Video Icon

  ENTERTAINMENT22, Jul 2019, 11:43 AM IST

  ‘ಗೀತಾ’ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಪ್ರಸಾರ ಹಕ್ಕು ಖರೀದಿಸಿದ ಅಮೇಜಾನ್ ಪ್ರೈಮ್

  ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಚಿತ್ರಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಅಮೇಜಾನ್ ಪ್ರೈಮ್ ಸಂಸ್ಥೆ 2.75 ಕೋಟಿ ಮೊತ್ತಕ್ಕೆ ಪ್ರಸಾರದ ಹಕ್ಕು ಖರೀದಿಸಿದೆ. ವಿಜಯ್ ನಾಗೇಂದ್ರ ಈ ಚಿತ್ರವನ್ನು ಡೈರಕ್ಟ್ ಮಾಡಿದ್ದಾರೆ. ಶಂಕರ್ ನಾಗ್ ಲುಕ್ ನಲ್ಲಿ ಗಣೇಶ್ ಕಾಣಿಸಿಕೊಂಡಿದ್ದು ಚಿತ್ರ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 

 • Raksha Bandana

  ENTERTAINMENT22, Jul 2019, 9:48 AM IST

  ಶುರುವಾಗಲಿದೆ ಅಣ್ಣ ತಂಗಿಯ ಬಾಂಧವ್ಯ ಸಾರುವ 'ರಕ್ಷಾ ಬಂಧನ'!

  ಅಣ್ಣತಂಗಿಯ ಕತೆಗಳು ಎವರ್‌ಗ್ರೀನ್‌. ಕನ್ನಡ ಸಿನಿಮಾಗಳಲ್ಲಂತೂ ಇದು ಸುಪ್ರಸಿದ್ಧ. 1958ರಲ್ಲಿ ಡಾ. ರಾಜ್‌ಕುಮಾರ್‌ ಅಭಿನಯಿಸಿರುವ ಅಣ್ಣತಂಗಿ ಸಿನಿಮಾವಾಗಲೀ 2005ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌- ರಾಧಿಕಾ ಜೋಡಿಯ ಅಣ್ಣತಂಗಿ ಸಿನಿಮಾವಾಗಲೀ, ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವಂಥ ಚಿತ್ರಗಳೇ. ಈ ನಡುವೆ ಇದೇ ಎಳೆಯನ್ನು ಸಾರುವ ಹತ್ತು ಹಲವು ಸಿನಿಮಾಗಳು ಬಂದು ಹೋಗಿವೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ರಂಜಿಸಿರುವಂಥವೇ.

 • Rashmika Mandanna

  ENTERTAINMENT22, Jul 2019, 9:28 AM IST

  ಕನ್ನಡ ಕಷ್ಟವೆಂದು ತಮಿಳಲ್ಲೇ ಹೇಳಿದ ಕೊಡಗಿನ ಬೆಡಗಿ ರಶ್ಮಿಕಾ!

  ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಸಂದರ್ಶನವೊಂದರಲ್ಲಿ ‘ಕನ್ನಡ ನನಗೆ ಬಲು ಕಷ್ಟ’ ಅಂತ ಹೇಳಿರುವುದು. ಕನ್ನಡದಿಂದಲೇ ನಟಿಯಾಗಿ ಹೋಗಿ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಈಗ ‘ಕನ್ನಡ ಕಷ್ಟ’ ಆಗುತ್ತಿರುವುದು ದುರಾದೃಷ್ಟ ಅಂತ ಸಿನಿಪ್ರೇಕ್ಷಕರು ಕೆಂಡಾಮಂಡಲವಾಗಿದ್ದಾರೆ. 

   

 • Karnataka Districts21, Jul 2019, 3:25 PM IST

  'ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ'..?

  ನಾನು ಬರ್ತೀನಂತ ಶಾಲೆ ಸ್ವಚ್ಛ ಮಾಡಿದ್ರಾ ಅಂತ ಲೋಕಾಯುಕ್ತ ಸಿ. ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶನಿವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ಅವರು, ವಿವಿಧ ಸರ್ಕಾರಿ ಇಲಾಖೆಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 • Karnataka Districts21, Jul 2019, 2:56 PM IST

  ಅತೃಪ್ತರು ವಾಪಾಸಾದ್ರೆ ಗೆಲವು, ಇಲ್ಲಾಂದ್ರೆ ಸೋಲು ಎಂದ್ರು ಕಾಂಗ್ರೆಸ್ ಶಾಸಕ

  ಅತೃಪ್ತರು ವಾಪಾಸು ಬಂದ್ರೆ ಗೆಲ್ಲುತ್ತೇವೆ. ಇಲ್ಲಾಂದ್ರೆ ಸೋಲುತ್ತೇವೆ ಎಂದು ಕೆಪಿಸಿಸಿ ಹಿರಿಯ ಮುಖಂಡ, ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ ಒಂದು ವೇಳೆ ಬಿಜೆಪಿ ಸರ್ಕಾರ ಬಂದ್ರೂ ಹೆಚ್ಚು ದಿನ ಉಳಿಯಲ್ಲ ಎಂದು ಹೇಳಿದ್ದಾರೆ.

 • Water

  Karnataka Districts21, Jul 2019, 1:46 PM IST

  ನಾಳೆಗಳಿಗಾಗಿ ನೀರಿಂಗಿಸುವ ಕಾರ್ಯ: 65ಕ್ಕೂ ಹೆಚ್ಚು ಇಂಗು ಗುಂಡಿ

  ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋವು ಮಳೆ ನೀರನ್ನು ಭೂಮಿಯೊಡಲಿಗೆ ಇಳಿಸುವ ಕಾರ್ಯ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೆಲವು ಪರಿಸರಾಸಕ್ತರು ವಾರದೊಳಗಾಗಿ 65ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ದಾನಿಗಳೂ ಈ ಕಾರ್ಯಕ್ಕೆ ನೆರವಾಗಿದ್ದಾರೆ.

 • dengue fever

  Karnataka Districts21, Jul 2019, 1:15 PM IST

  ಶಿವಮೊಗ್ಗದಲ್ಲಿ 59 ಡೆಂಘೀ, 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆ

  ಶಿವಮೊಗ್ಗದಲ್ಲಿ 54 ಡೆಂಘೀ ಹಾಗೂ 14 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದೆ. ನಗರಸಭೆ ವತಿಯಿಂದ ಕರಪತ್ರ ಮುದ್ರಿಸಿ ಮನೆಮನೆಗೆ ವಿತರಣೆ ಮಾಡಲಾಗುತ್ತಿದ್ದು, ಜೊತೆಗೆ ಫಾಗಿಂಗ್‌, ಮೆಲಾಥಿನ್‌ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಂಡು ಹೆಚ್ಚು ಜಾಗೃತೆ ವಹಿಸಬೇಕಾಗಿದೆ.

 • Coral snake

  Karnataka Districts21, Jul 2019, 1:01 PM IST

  ಉರಗ ತಜ್ಞರ ಮನೆಗೇ ಬಂತು ವಿಷಕಾರಿ ಹಾವು

  ಜನರ ಮನೆಗೆ ಹಾವು ಬಂದಾಗ ಅದನ್ನು ಹಿಡಿದು ಕಾಡಿಗೆ ಬಿಡುವ ಉರಗ ತಜ್ಞರ ಮನೆಗೇ ವಿಷಕಾರಿ ಹಾವು ಬಂದಿದೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

 • Karnataka Districts21, Jul 2019, 12:26 PM IST

  ವಿಷ​ಯುಕ್ತ ಅಣ​ಬೆ ತಿಂದು ಒಂದೇ ಕುಟುಂಬದ 15 ಮಂದಿ ಅಸ್ವಸ್ಥ

  ಮಲೆನಾಡಿನಲ್ಲಿ ಮಳೆಗಾಲದಲ್ಲಿ ಅಣಬೆಗಳ ಖಾದ್ಯ ತಯಾರಿಸುವುದು ಸಾಮಾನ್ಯ. ಆದರೆ ಅಣಬೆಗಳನ್ನು ಆರಿಸುವಾಗ ಎಚ್ಚರದಿಂದಿರುವುದು ಅಗತ್ಯ. ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮ​ದಲ್ಲಿ ಶುಕ್ರ​ವಾರ ರಾತ್ರಿ ನಡೆದಿದೆ.

 • Karnataka Districts21, Jul 2019, 11:40 AM IST

  ಹಾಸನದಲ್ಲಿ ಸರ್ಕಾರಿ ರಕ್ತ ಪರೀಕ್ಷಾ ಕೇಂದ್ರ 8ರ ತನಕ ತೆರೆದಿರುವುದು ಕಡ್ಡಾಯ

  ಹಾಸನದ ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಸಂಜೆ 4 ಗಂಟೆವರೆಗೆ ಮಾತ್ರ ತೆರೆದಿರುತ್ತಿತ್ತು. ಇನ್ನು ಮುಂದೆ ಪಾಳಿಯ ಮೇಲೆ ಸಿಬ್ಬಂದಿ ಕೆಲಸ ಮಾಡಲಿದ್ದು, ರಾತ್ರಿ 8ರ ತನಕ ತೆರೆದಿರಲಿದೆ.

 • ആനക്കൂട്ടം രക്ഷയ്ക്ക് എത്തുന്നു

  Karnataka Districts21, Jul 2019, 11:07 AM IST

  ಸಕಲೇಶಪುರದಲ್ಲಿ ಕಾಡಾನೆಗಳ ಪುಂಡಾಟದಿಂದ ವ್ಯಾಪಕ ಬೆಳೆ ನಾಶ

  ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಕುದರಂಗಿ, ಸುಳ್ಳಕ್ಕಿ, ಇಬ್ಬಡಿ, ಸತ್ತಿಗಾಲ ಸೇರಿ ಹಲವೆಡೆ ಕಾಡಾನೆ ಹಿಂಡು ಬೀಡು ಬಿಟ್ಟಿದೆ. ಸತ್ತಿಗಾಲ್‌, ಜಾನೆಕೆರೆ ಸೇರಿ ಹಲವೆಡೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

 • drain

  Karnataka Districts21, Jul 2019, 10:41 AM IST

  ರಸ್ತೆಯಲ್ಲೇ ಹರಿಯುತ್ತೆ ಕೊಳಚೆ ನೀರು: ರೋಗ ಭೀತಿಯಲ್ಲಿ ಜನ

  ತಿಪಟೂರು ನಗರದ ತ್ರಿಮೂರ್ತಿ ಚಿತ್ರ ಮಂದಿರದ ಮುಂಭಾಗದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಜೊತೆಗೇ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

 • bio matric attendance in schools for teachers

  Karnataka Districts21, Jul 2019, 9:55 AM IST

  ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ

  2019-20ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಕರಡು ಅಂಗೀಕೃತ ಮತ್ತು ಕರಡು ತಿರಸ್ಕೃತ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಬಹುದೆಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ. ಮಂಗಳಗೌರಮ್ಮ ತಿಳಿಸಿದ್ದಾರೆ.