ಆದರೆ, ಅಂದಿನ ಸಮಯ ಬಹಳ ಭಿನ್ನವಾಗಿತ್ತು. ಆದರೆ, ಈಗ ಆಡಿಷನ್‌ ಅಂದ್ರೆ ಅದರ ಎಲ್ಲಾ ಮಾಹಿತಿಗಳೂ ನಮಗೆ ಗೊತ್ತಾಗುತ್ತದೆ ಎಂದು ಪ್ರಸಿದ್ಧ ಹಾಲಿವುಡ್‌ ನಟಿ ಆನ್‌ ಹಾಥ್‌ವೇ ಹೇಳಿದ್ದಾರೆ. 

ನವದೆಹಲಿ (ಏ.23): ಲವ್‌ & ಅದರ್‌ ಡ್ರಗ್ಸ್‌, ಇಂಟರ್‌ಸ್ಟೆಲ್ಲರ್‌, ದಿ ಇಂಟರ್ನ್‌ ಸಿನಿಮಾ ನೋಡಿದವರಿಗೆ ಹಾಲಿವುಡ್‌ ಸ್ಟಾರ್‌ ಆನ್‌ ಹಾಥ್‌ವೇ ಹೊಸಬರಲ್ಲ. ಹಾಲಿವುಡ್‌ ಸ್ಟಾರ್‌ ತಾವೇ ನಿರ್ಮಾಣ ಮಾಡಿರುವ ದ ಐಡಿಯಾ ಆಫ್‌ ಯು ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಇದರ ನಡುವೆ ಅವರು ವಿ ಮ್ಯಾಗಝೀನ್‌ಗೆ ನೀಡಿರುವ ಸಂದರ್ಶನವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಆರಂಭಿಕ ದಿನಗಳ ಆಡಿಷನ್‌ಅನ್ನು ನೆನಪಿಸಿಕೊಂಡಿದ್ದಾರೆ. ನನ್ನ ಹಾಗೂ ಹೀರೋ ನಡುವೆ ಕೆಮಿಸ್ಟ್ರಿ ಹೇಗೆ ಇರುತ್ತದೆ ಎಂದು ನೋಡುವ ಸಲುವಾಗಿ 10 ಮಂದಿ ಹುಡುಗರಿಗೆ ಕಿಸ್‌ ಮಾಡುವಂತೆ ಮಾಡಿದ್ದರು ಎಂದು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಅವರು ಗ್ರಾಸ್‌ ಎಂದು ಹೇಳುತ್ತಿದ್ದರು ಎಂದು ಹಾಥ್‌ವೇ ತಿಳಿಸಿದ್ದಾರೆ. 2000 ಇಸವಿಯ ಸಮಯದಲ್ಲಿ ನನಗೆ ಈ ಪರಿಸ್ಥಿತಿ ಎದುರಾಗಿತ್ತು. ಕೆಮಿಸ್ಟ್ರಿ ಚೆನ್ನಾಗಿದ್ಯಾ ಎಂದು ನೋಡುವ ಸಲುವಾಗಿ ಹೀಗೆಲ್ಲಾ ಮಾಡುತ್ತಿದ್ದರು. ಬಹುಶಃ ಇದು ಅತೀ ಕೆಟ್ಟ ಸಂಗತಿ ಎಂದಿದ್ದಾರೆ.

ಇಂದು 10 ಜನ ಹುಡುಗರು ಬರುತ್ತಿದ್ದಾರೆ. ನೀವೇ ಅದಕ್ಕೆ ಹೀರೋ. ಎಲ್ಲರಿಗೂ ಕಿಸ್‌ ಮಾಡುವಾಗ ನೀವು ಎಕ್ಸೈಟ್‌ ಆಗುತ್ತೀರಾ ಎಂದು ಕೇಳಲಾಗಿತ್ತು. ನನ್ನ ತಲೆಯಲ್ಲಿ ಆಗ ಏನೂ ಅನಿಸುತ್ತಿರಲಿಲ್ಲ. ನನಗೆನಾದರೂ ಸಮಸ್ಯೆ ಇದ್ಯಾ ಎನ್ನುವ ಯೋಚನೆ ಬರ್ತಿತ್ತು. ಯಾಕೆಂದರೆ, ಈ ವಿಚಾರ ಕೇಳಿ ನಾನು ಎಕ್ಸೈಟ್‌ ಅಂತೂ ಆಗುತ್ತಿರಲಿಲ್ಲ ಎಂದಿದ್ದಾರೆ. ಅಂದು ನಾನು ಬಹಳ ಚಿಕ್ಕವಳಾಗಿದ್ದೆ. ಇದೆಲ್ಲವೂ ನನಗೆ ಅರ್ಥವಾಗುತ್ತಿರಲಿಲ್ಲ. ಆಡಿಷನ್‌ನಲ್ಲಿ ಯಾರೂ ಕೂಡ ಹರ್ಟ್‌ ಮಾಡಿರಲಿಲ್ಲ. ಆದರೆ, ಅಂದಿನ ದಿನಗಳು ಡಿಫರೆಂಟ್‌ ಆಗಿದ್ದವು. ಈಗ ವಿಚಾರಗಳು ಬೇಗ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಆನ್ನೆ ಹ್ಯಾಥ್‌ವೇ, ಝೆಂಡಯಾ ಜೊತೆ ಪ್ರಿಯಾಂಕಾ ಚೋಪ್ರಾ; ರಾಣಿ ಎಂದ ಫ್ಯಾನ್ಸ್‌

ದಿ ಪ್ರಿನ್ಸೆಸ್ ಡೈರೀಸ್ ಸರಣಿ, ದಿ ಡೆವಿಲ್ ವೇರ್ಸ್ ಪ್ರಾಡಾ, ಲವ್ & ಅದರ್ ಡ್ರಗ್ಸ್, ದಿ ಹಸಲ್, ಒನ್ ಡೇ, ದಿ ಇಂಟರ್ನ್, ಓಷಿಯನ್ 8, ಲೆಸ್ ಮಿಸರೇಬಲ್ಸ್, ದಿ ಡಾರ್ಕ್ ನೈಟ್ ರೈಸಸ್, ಬ್ರೈಡ್ ವಾರ್ಸ್, ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಆನ್ ಹ್ಯಾಥ್‌ವೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ವ್ಯಾಲೆಂಟೈನ್ಸ್ ಡೇ, ಇಂಟರ್ ಸ್ಟೆಲ್ಲರ್ ಮತ್ತು ಡಾನ್ ಜಾನ್ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮೇ 2 ರಂದು ಬಿಡುಗಡೆಯಾಗಲಿರುವ ದಿ ಐಡಿಯಾ ಆಫ್ ಯು ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ವಿಚ್ಛೇದನ, ಜ್ಯೋತಿಷಿಯ ಶಾಕಿಂಗ್‌ ಹೇಳಿಕೆ!