ಮೊದಲು ನೋಡಿದ್ದು ಜೋಸೆಫ್‌ ಥಾಮಸ್‌

ಸಂಚಾರಿ ವಿಜಯ್‌

ನಾನು ಮೊದಲು ನೋಡಿದ್ದೇ ಜೋಸೆಫ್‌ ಥಾಮಸ್‌ ವೆಬ್‌ ಸೀರಿಸ್‌. ಅದು ಬಿಟ್ಟು ಡಾರ್ಕ್ ಕ್ರೈಮ್‌ ಸೂಪರ್‌. ನಾನು ಇತ್ತೀಚೆಗೆ ನೋಡಿದ್ದು ಸೇಕ್ರೆಡ್‌ ಗೇಮ್ಸ್‌. ಒಬ್ಬ ನಟನಾಗಿ ನಾನು ಅದನ್ನು ತುಂಬಾ ಇಷ್ಟಪಟ್ಟೆ. ಕ್ರೈಂ ಥ್ರಿಲ್ಲರ್‌ ಕತೆ ಇರುವ ಸಿನಿಮಾದಲ್ಲಿ ಪ್ರೇಕ್ಷಕರನ್ನು ಒಂದೂವರೆ ಗಂಟೆಯಷ್ಟೇ ಹಿಡಿದಿಡಬಹುದು. ಒಂದೂವರೆ ಗಂಟೆಯ ಮೇಲೂ ಹಿಡಿದಿಡುವ ಪ್ರಯತ್ನ ಮಾಡಿದರೆ ಈ ಜನರೇಶನ್‌ಗೆ ಸಾಧ್ಯವಿಲ್ಲ. ಆದರೆ ಇಲ್ಲಿ ಆ ಒಂದೂವರೆ ಗಂಟೆಯನ್ನೇ ಡಿವೈಡ್‌ ಮಾಡಿಕೊಂಡು ಏಳು ಎಪಿಸೋಡ್‌ನಲ್ಲಿ ಬಹಳ ಅದ್ಭುತವಾಗಿ ತೋರಿಸಿದ್ದಾರೆ.

ವಿಚಿತ್ರ ಗೆಟಪ್‌ನಲ್ಲಿ ಸಂಚಾರಿ ವಿಜಯ್

ಪ್ರತಿ ಎಪಿಸೋಡ್‌ನಲ್ಲಿ ಒಂದು ಹಂತಕ್ಕೆ ತಂದು ಮುಂದಿನ ಹಂತಕ್ಕೆ ಕಂಟಿನ್ಯುಟಿ ನೀಡುವುದು ಬಹಳ ಚೆನ್ನಾಗಿದೆ. ಇದರಲ್ಲಿ ವಾಸ್ತವ ಸಂಗತಿಗಳನ್ನು ಬಿಚ್ಚಿಡುತ್ತಾ ಹೋದಂತೆ ಕ್ಯೂರಿಯಾಸಿಟಿ ಹೆಚ್ಚಿಸುತ್ತೆ. ಲೈಟಿಂಗ್ಸ್‌, ಡಿಸೈನ್‌, ಕತೆ ಎಲ್ಲವೂ ಚೆನ್ನಾಗಿದೆ. ಹಾಸ್ಯ ಪ್ರಧಾನ ಸಿನಿಮಾ, ನಾಟಕ, ಜೀವನಾಧಾರಿತ ಕತೆಗಳೂ ಇಷ್ಟಆಗುತ್ತೆ. ಥ್ರಿಲ್ಲರ್‌, ಬೋಲ್ಡ್‌, ಸ್ಟ್ರಾಂಗ್‌ ಆಗಿರುವ ಕಂಟೆಂಟ್‌ ಇಟ್ಟುಕೊಂಡು ವೆಬ್‌ ಸೀರೀಸ್‌ ಮಾಡುವಾಸೆ ಇದೆ. ಅದರ ನಿರೀಕ್ಷೆಯಲ್ಲಿ ನಾನೂ ಕಾಯ್ತಾ ಇದ್ದೀನಿ.

ಗೇಮ್‌ ಆಫ್‌ ಥ್ರೋನ್ಸ್‌, ನಾರ್ಕೋಸ್‌ ನಂಗಿಷ್ಟ

ರಿಷಬ್‌ ಶೆಟ್ಟಿ

ವೆಬ್‌ ಸೀರೀಸ್‌ ನಾನು ಅಷ್ಟಾಗಿ ನೋಡೋದಿಲ್ಲ. ಸಿನಿಮಾವನ್ನೇ ಹೆಚ್ಚು ನೋಡ್ತೀನಿ. ಸಿನಿಮಾಗಾದರೆ ಒಂದು ಜಾನರ್‌ ಹಾಗೂ ಸೆನ್ಸಾರ್‌ ಇರುತ್ತೆ. ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡ್ತಾರೆ. ಆದರೆ ವೆಬ್‌ ಸೀರೀಸ್‌ನಲ್ಲಿ ಇವ್ಯಾವೂ ಇರೋದಿಲ್ಲ. ಯಾವುದನ್ನು ಬೇಕಾದರೂ ಸಿನಿಮಾ ಮಾಡಬಹುದು. ಸೆನ್ಸಾರ್‌ ಇರದ ಕಾರಣ ಹೇಗೆ ಬೇಕಾದರೂ ಪಾತ್ರಗಳನ್ನು ತೋರಿಸಬಹುದು.

'ನಾನು ನಿರ್ದೇಶಕ ಮಾತ್ರ, ನಟನೆ ಮಾಡಲ್ಲ'!

ಹಾಗಾಗಿ ನಾನು ಆಯ್ದ ಸೀರೀಸ್‌ಗಳನ್ನು ನೋಡ್ತೀನಿ. ಇದೊಂದು ಅಪ್‌ಡೇಟೆಡ್‌ ಸೀರಿಯಲ್‌ ಎನ್ನುವುದು ನನ್ನ ಅಭಿಪ್ರಾಯ. ಈಗ ಬರುತ್ತಿರುವ ಬಹುತೇಕ ಸೀರೀಸ್‌ಗಳು ಥ್ರಿಲ್ಲರ್‌ಗಳೇ. ಇತ್ತೀಚೆಗೆ ನೋಡಿರೋದ್ರಲ್ಲಿ ಇಷ್ಟಆಗಿರೋದು ನಾರ್ಕೋಸ್‌ ಮತ್ತು ಗೇಮ್‌ ಆಫ್‌ ಥ್ರೋನ್ಸ್‌. ಈ ಗೇಮ್‌ ಆಫ್‌ ಥ್ರೋನ್ಸ್‌ನಲ್ಲಿನ ಕ್ಯಾರೆಕ್ಟರ್‌, ಡಿಸೈನ್‌ ಎಲ್ಲವನ್ನೂ ನೋಡಿದರೆ ಪಕ್ಕಾ ಇಂಡಿಯನ್‌ ಮೈಥಾಲಜಿಯನ್ನು ಬಳಸಿಕೊಂಡು ಮಾಡಿರುವ ಹಾಗಿದೆ ಎಂದು ನನಗೆ ಅನಿಸಿತು.

ಲಾಸ್ಟ್‌ ಸೀರಿಸ್‌ದು ಅದ್ಭುತ ಮೇಕಿಂಗ್‌

ವಸಿಷ್ಠ ಸಿಂಹ

ವೆಬ್‌ ಸೀರೀಸ್‌ ಮನೋರಂಜನೆಯ ಹೊಸ ಆಯಾಮ. ಸರಳವಾಗಿ ಮೊಬೈಲ್‌ನಲ್ಲೇ ಸಿಗುವ ಕಾರಣ ಬಹು ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಮುಟ್ಟಬಹುದು. ಯಾವ ಒಂದು ಕಂಟೆಂಟ್‌ ಅನ್ನು ತುಂಬಾ ಕಡಿಮೆ ಸಮಯಕ್ಕೆ ಹೇಳಲಾಗುವುದಿಲ್ಲವೊ, ಆ ಕಂಟೆಂಟ್‌ಗೆ ಬೇಕಿರುವ ಕಾಲಾವಕಾಶದೊಂದಿಗೆ ಎಪಿಸೋಡ್‌ ಮೂಲಕ ಹೇಳುವ ಒಳ್ಳೆಯ ಕಲೆ ವೆಬ್‌ ಸೀರೀಸ್‌. ರಾಮಾಯಣ, ಮಹಾಭಾರತಗಳನ್ನು ಒಂದು ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಮಾಡುವುದು ಕಷ್ಟ.

ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!

ಅದರಲ್ಲಿನ ಪ್ರತೀ ಪಾತ್ರ ಹಾಗೂ ಸನ್ನಿವೇಶಗಳೂ ಬಹಳ ಮುಖ್ಯವಾಗುತ್ತೆ. ಹಾಗಾಗಿ ಇಂಥ ನಿಯತಕಾಲಿಕ, ನೈಜ ಘಟನೆ, ಪುರಾಣ ಕತೆಗಳಂತ ದೊಡ್ಡ ದೊಡ್ಡ ವಿಷಯಗಳನ್ನು ವೆಬ್‌ಸೀರೀಸ್‌ನಲ್ಲಿ ಮಾಡುವುದಕ್ಕೆ ಹಾಗೂ ನೋಡುವುದಕ್ಕೆ ನನಗೆ ಇಷ್ಟ.

ಲಾಸ್ಟ್‌, ಗೇಮ್‌ ಆಫ್‌ ಥ್ರೋನ್ಸ್‌ ನಾನು ಇತ್ತೀಚೆಗೆ ನೋಡಿದ್ದು. ಮೇಕಿಂಗ್‌, ಕಂಟೆಂಟ್‌, ಡಿಸೈನ್‌ ಚೆನ್ನಾಗಿದೆ. ಫ್ರೀ ಟೈಂನಲ್ಲಿ ನೋಡುವುದರಿಂದ ಒಂದಷ್ಟುವಿಚಾರಗಳು, ಕಲಿಕೆಯೂ ಸಿಗುತ್ತೆ. ಈ ರೀತಿಯಲ್ಲೇ ಮೈಥಾಲಜಿಕಲ್‌ನಂತಹ ಕಂಟೆಂಟ್‌ ಸಿಕ್ಕರೆ ವೆಬ್‌ ಸೀರೀಸ್‌ ಮಾಡುವ ಆಸೆ ಇದೆ. ಉದಾಹರಣೆಗೆ ಮಹಾಭಾರತದಲ್ಲಿ ಪ್ರತೀ ಪಾತ್ರವನ್ನು ಒಂದು ಹತ್ತು ವರ್ಷ ಮಾಡಬಹುದು. ನಮ್ಮ ನೆಲದ ಕತೆಯಾದ್ದರಿಂದ ಗೇಮ್‌ ಆಫ್‌ ಥ್ರೋನ್ಸ್‌ನಂತೆ ತಿಂಗಳಿಗೊಂದು ಎಪಿಸೋಡ್‌ನಂತೆ ಉತ್ತಮವಾಗಿ ಮಾಡಿದರೆ ಬಹಳ ಅದ್ಭುತವಾಗಿ ಮೂಡಿಬರುತ್ತೆ.

ಸೇಕ್ರೆಡ್‌ ಗೇಮ್ಸ್‌ ಚೆನ್ನಾಗಿದೆ, ರಕ್ತರಾತ್ರಿ ವೆಬ್‌ ಸೀರಿಸ್‌ ಮಾಡಬಹುದು

ದುನಿಯಾ ಸೂರಿ

ನೀವು ಬೆಳೆಯುತ್ತಿದ್ದ ಜೋಳವನ್ನು ಇನ್ನು ಮುಂದೆ ನಾವು ಬಂದು ಬೆಳೆಯುತ್ತೀವಿ ಎಂದು ಮಲ್ಟಿನ್ಯಾಷನಲ್‌ ಕಂಪನಿಗಳು ಬಂದು ಹೇಳುವುದೇ ಈ ವೆಬ್‌ ಸೀರೀಸ್‌. ಮಲ್ಟಿನ್ಯಾಷನಲ್‌ ಕಂಪನಿ ಬಂದು ಟ್ಯಾಲೆಂಟ್‌ ಇರೋರಿಗೆ ಕೆಲಸ ಕೊಡುತ್ತವೆ, ನಮ್ಮವರೂ ಕೆಲಸ ಮಾಡ್ತೀವಿ ಅಂತ ಹೋಗ್ತಾರೆ ಅಷ್ಟೆ. ದುಡ್ಡು ಮಾಡಬೇಕೆಂದರೆ ಅವರ ಬಳಿ ಹೋಗಬಹುದು. ಕೆಲಸ ಮಾಡ್ತೀಯಾ ಎಂದು ಯಾರಾದರು ಬಂದು ಕೇಳಿದರೆ ಹುಂ ಎಂದು ಗಾರ್ಮೆಂಟ್ಸ್‌ ರೀತಿಯಲ್ಲಿ ಕೆಲಸ ಮಾಡಬೇಕು. ಇಲ್ಲಪ್ಪ ನನ್ನದೇ ಡಿಸೈನ್‌ ಇರಲಿ, ನನ್ನದೇ ಬ್ರ್ಯಾಂಡ್‌ ತಯಾರಿಸುವುದಾದರೆ ಟೈಲರಿಂಗ್‌ ಶಾಪ್‌ ಸಾಕು. ಸೀರೀಸ್‌ ವಿಚಾರದಲ್ಲಿ ಸ್ವಂತಿಕೆ ಅನ್ನೋದು ಇರೋದಿಲ್ಲ ಎನ್ನುವುದು ನನ್ನ ಅನಿಸಿಕೆ.

ಒಂಟಿ ಸಲಗವಾದರೂ ಪರೋಪಕಾರಿಯಾಗಿರು: ದುನಿಯಾ ವಿಜಿಗೆ ಸಿದ್ದು ಕಿವಿಮಾತು!

ಇದು ಬಂದು 10-15 ವರ್ಷಗಳೇ ಆಗಿದೆ. ಆದರೆ ನಮ್ಮವರು ಈಗ ನೋಡ್ತಿದ್ದಾರೆ ಅಷ್ಟೆ. ಇದೊಂದು ದೊಡ್ಡಮಟ್ಟದ ಬ್ಯುಸಿನೆಸ್‌, ಮಲ್ಟಿನ್ಯಾಷನಲ್‌ ಕಂಪನಿಯೇ ಎಲ್ಲವನ್ನೂ ನೋಡಿಕೊಳ್ಳುವುದರಿಂದ ಎಂಡಿಂಗ್‌ ಬಗ್ಗೆ ಕೇಳುವ ಹಾಗಿಲ್ಲ, ಸೆನ್ಸಾರ್‌ ಇಲ್ಲದ ಕಾರಣ ಹೇಗೆ ಬೇಕಾದ್ರೂ ತೋರಿಸಬಹುದು. ಇಲ್ಲೆಲ್ಲಾ ದೊಡ್ಡ ಮಟ್ಟದ ಕತೆಗಾರರು ಕೂತು ಟ್ರ್ಯಾಕ್‌ ಬರೆಯುತ್ತಾರೆ. ಮುಂದೆ ವೆಬ್‌ ಸೀರೀಸೇ ಯುಗ ಎನ್ನುತ್ತಿದ್ದಾರೆ. ಆದರೆ ಇವುಗಳ ಮುಂದೆ ಸಿನಿಮಾ ಕೊನೆವರೆಗೂ ಇರುತ್ತೆ ಅನ್ನೋದು ನನ್ನ ಅಭಿಪ್ರಾಯ. ಪ್ರೊಡಕ್ಷನ್‌ ಜಾಸ್ತಿ ಆದಷ್ಟುಒಳ್ಳೊಳ್ಳೆ ಪ್ರಾಜೆಕ್ಟ್ಗಳು ಹುಟ್ಟುತ್ತೆ. ಅತಿವೃಷ್ಟಿಜಾಸ್ತಿಯಾದಾಗಲೇ ಸಣ್ಣದರ ಮೇಲೂ ಅಭಿವೃದ್ಧಿಪಡಿಸಬೇಕು ಎಂಬುದು ಗೊತ್ತಾಗುತ್ತೆ. ಇಂಗ್ಲಿಷ್‌ ಫಿಲಂ ರೇಂಜ್‌ನಲ್ಲಿ ನಾವೂ ಸಿನಿಮಾ ಮಾಡ್ತೀವಿ ಅಥವಾ ಅದನ್ನೇ ಕಾಪಿ ಮಾಡ್ತೀವಿ ಎಂದರೆ ಅಲ್ಲಿ ಎಡವಿ ಬೀಳುವುದು ಖಚಿತ. ನನಗೆ ಇಷ್ಟವಾದ ವೆಬ್‌ ಸೀರೀಸ್‌ ಅಂದ್ರೆ ಅನುರಾಗ್‌ ಕಶ್ಯಪ್‌ ಅವರದು ಸೇಕ್ರೆಡ್‌ ಗೇಮ್ಸ್‌. ಗೇಮ್‌ ಆಫ್‌ ಥ್ರೋನ್ಸ್‌, ನಾರ್ಕೋಸ್‌ ಕೂಡ ಚೆನ್ನಾಗಿದೆ. ಸಿನಿಮಾ ಆಗಲಿ ಮತ್ತೊಂದಾಗಲಿ ಯಾವಾಗ ನಮ್ಮ ನೆಲದ ಸಂಸ್ಕೃತಿ, ಕತೆಗಳು ಹೀಗೆ ಅದಕ್ಕೆ ಸಂಬಂಧಿಸಿದ್ದು ಏನೇ ಮಾಡಿದರೂ ಬಂಗಾರದಂತೆ ಕಾಣುತ್ತೆ. ಕನ್ನಡದಲ್ಲಿ ಸೀರೀಸ್‌ ಬಂದರೆ ತೇಜಸ್ವಿ ಅವರ ಒಳ್ಳೊಳ್ಳೆ ಕೃತಿಗಳನ್ನು ಇಟ್ಟುಕೊಂಡೋ ಅಥವಾ ತರಾಸು ಅವರ ಕಾದಂಬರಿಗಳು, ಯಯಾತಿ, ಇಲ್ಲ ರಕ್ತರಾತ್ರಿಯ ಮೇಲೋ ದೊಡ್ಡ ಮಟ್ಟದಲ್ಲಿ ಮಾಡಿದರೆ ಹಿಟ್‌ ಆಗುವುದರಲ್ಲಿ ಸಂದೇಹ ಇಲ್ಲ. ಇದಕ್ಕೆಲ್ಲಾ ಕೆಲಸ ಮಾಡುವವರ ಆಸಕ್ತಿ ಮುಖ್ಯ, ಬಂಡವಾಳ ಹಾಕುವವರಿಗೆ ತಾಕತ್ತು ಬೇಕು.

ನಾ ಮೆಚ್ಚಿದ್ದು ಫ್ರೆಂಡ್ಸ್‌, ಗ್ರೇಸ್‌ ಅನಾಟಮಿ

ಮಾನ್ವಿತಾ ಹರೀಶ್‌

ವೆಬ್‌ ಸೀರೀಸ್‌ ಎನ್ನುವುದು ಫä್ಯಚರ್‌ ಅಷ್ಟೆ. ಡಿಜಿಟಲೀಕರಣದತ್ತ ಎಲ್ಲರೂ ಸಾಗುತ್ತಿರುವುದರಿಂದ ಈ ಪ್ರಯತ್ನ ನಡಿಯುತ್ತಿದೆ. ಇದರ ಜೊತೆಗೆ ಕೆಲಸದ ಒತ್ತಡ, ಟ್ರಾಫಿಕ್‌, ಜೀವನದ ಜಂಜಾಟಗಳಿಂದ ಜನ ಚಿತ್ರಮಂದಿರಕ್ಕೆ ಬರುವುದೇ ಕಡಿಮೆ ಆಗಿದೆ. ಜೊತೆಗೆ ಇದು ಇಂಟರ್ನೆಟ್‌ನ ಜಮಾನ ಆಗಿರುವುದರಿಂದ ಬೇಕಾಗಿರುವುದೆಲ್ಲವೂ ಅಂಗೈನಲ್ಲೇ ಸಿಗುತ್ತಿವೆ. ರಾಷ್ಟ್ರೀಯ ಪ್ರಶಸ್ತಿ ಪಡೆದ ನಾತಿಚರಾಮಿಯನ್ನೂ ಸಹ ನೆಟ್‌ಫ್ಲಿಕ್ಸ್‌ ಅಲ್ಲಿ ನೋಡಿದೆ.

ಜೈಸಲ್ಮೇರ್‌ನಲ್ಲಿ ಮಾನ್ವಿತಾ ಹರೀಶ್‌ !

ಹೀಗಿರುವಾಗ ಒಳ್ಳೊಳ್ಳೆ ಕಂಟೆಂಟ್‌ ಇರುವ, ಜನರನ್ನು ಸುಲಭವಾಗಿ ತಲುಪಬಹುದಾದ ಪ್ಲಾಟ್‌ಫಾಮ್‌ರ್‍ ಈಗಿರೋದು ಎಂದರೆ ಇಂಟರ್ನೆಟ್‌. ನಾನು ಹೆಚ್ಚಾಗಿ ಇಂಗ್ಲಿಷ್‌, ಹಿಂದಿ ವೆಬ್‌ ಸೀರೀಸ್‌ ನೋಡ್ತೀನಿ. ಅದರಲ್ಲಿ ನಾರ್ಕೋಸ್‌, ಗೇಮ್‌ ಆಫ್‌ ಥ್ರೋನ್ಸ್‌, ಗ್ರೇಸ್‌ ಅನಾಟಮಿ, ಫ್ರೆಂಡ್ಸ್‌ ಬಹಳ ಇಷ್ಟವಾಗುತ್ತದೆ. ಕನ್ನಡದಲ್ಲಿ ಎಲ್ಲಾ ರೀತಿಯ ಜಾನರ್‌ನಲ್ಲಿ ಬರಬೇಕೆಂದು ನಾನೂ ಇಷ್ಟಪಡ್ತೀನಿ. ನಮ್ಮಲ್ಲಿಯೂ ಒಂದೇ ರೀತಿಯ ಸಿನಿಮಾ, ಹಾಡುಗಳು ಇತ್ತೀಚೆಗೆ ಹೆಚ್ಚಾಗ್ತಿದೆ. ಇಂಟರೆಸ್ಟಿಂಗ್‌ ಆದ, ಥ್ರಿಲ್‌, ಸ್ಟ್ರಾಂಗ್‌ ಕಂಟೆಂಟ್‌ ಇರುವ ಕುತೂಹಲ ಮೂಡಿಸುವ ಸೀರೀಸ್‌ ಆದರೂ ನಮ್ಮಲ್ಲಿ ಬರಲಿ. ಎಲ್ಲಿಯೂ ಹೇಳದಿರದ ಕಂಟೆಂಟ್‌ ಇರಬೇಕು. ಅದಕ್ಕೆ ನಮ್ಮ ಎಷ್ಟೋ ಸಾಹಿತಿಗಳ ಬರಹಗಳ ಮೇಲೆಯೇ ನಮ್ಮಲ್ಲಿ ಸೀರೀಸ್‌ ತರಬಹುದು. ಪ್ಯಾಟ್ರನ್‌ ಬ್ರೇಕ್‌ ಆದರೆ ಮಾತ್ರ ಇದು ಸಾಧ್ಯವಾಗುತ್ತೆ.