- ರುದ್ರಪ್ರಯಾಗ ನನ್ನ ಮುಂದಿನ ನಿರ್ದೇಶನದ ಚಿತ್ರ. ಕತೆ ಸಿದ್ಧವಾಗಿದೆ. ಅಕ್ಟೋಬರ್‌ ಅಥವಾ ನವೆಂಬರ್‌ ಹೊತ್ತಿಗೆ ಶೂಟಿಂಗ್‌ಗೆ ಹೊರಡುತ್ತೇನೆ.

- ಈ ಚಿತ್ರದಲ್ಲಿ ನಾನು ನಿರ್ದೇಶಕ ಮಾತ್ರ. ನಟನೆ ಮಾಡಲ್ಲ. ಬೇರೆ ಬೇರೆ ಸಾಕಷ್ಟುಮಂದಿ ಕಲಾವಿದರು ನಟಿಸುತ್ತಿದ್ದಾರೆ. ಎಲ್ಲರಿಗೂ ಕತೆ ಹೇಳಿ ಅವರು ಒಪ್ಪಿದ ಮೇಲೆಯೇ ಚಿತ್ರದ ತಾರಾಗಣ ಹೇಳುತ್ತೇನೆ.

- ಸಂಗಮ ಎನ್ನುವ ಅರ್ಥ ಬರುವ ಈ ಚಿತ್ರದ ಕತೆ ಬೆಳಗಾವಿ ಹಿನ್ನೆಲೆಯಲ್ಲಿ ಸಾಗುತ್ತದೆ. ರುದ್ರಪ್ರಯಾಗ ಮತ್ತು ಬೆಳಗಾವಿಗೆ ಹೇಗೆ ನಂಟು ಎಂಬುದನ್ನು ನೀವು ಸಿನಿಮಾ ನೋಡಿ ಹೇಳಬೇಕು.

- ಯಾರೋ ಒಬ್ಬರು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಲ್ಲ. ಕಂಟೆಂಟ್‌ ಆಧರಿಸಿ ಸೆಟ್ಟೇರಲಿರುವ ಸಿನಿಮಾ. ಜಯಣ್ಣ ಕಂಬೈನ್ಸ್‌ನಲ್ಲಿ ನಮ್ಮ ಎಲ್ಲಾ ಸಿನಿಮಾಗಳು ಬಿಡುಗಡೆ ಆಗಿವೆ. ಎಲ್ಲವೂ ಗೆದ್ದಿವೆ. ಹೀಗಾಗಿ ಅವರೇ ನನ್ನ ಚಿತ್ರಕ್ಕೆ ನಿರ್ಮಾಪಕರಾಗಬೇಕು ಎಂಬುದು ನನ್ನ ಆಸೆ.

- ಸದ್ಯಕ್ಕೆ ಒಂದು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ಆ ಬಗ್ಗೆ ಈಗಲೇ ವಿವರಣೆ ಹೇಳಲಾರೆ. ಇನ್ನೂ ‘ನಾಥೂರಾಮ್‌’ ಚಿತ್ರಕತೆ ಅಂತಿಮಗೊಂಡಿಲ್ಲ. ಟೆಸ್ಟ್‌ ಶೂಟ್‌ ಮಾತ್ರ ಮಾಡಲಾಗಿದೆ. ಅದು ಯಾವಾಗ ಸ್ಕಿ್ರಪ್ಟ್‌ ಪೂರ್ತಿ ಆಗುತ್ತದೋ ನೋಡಬೇಕು.

ರಿಷಬ್ ಶೆಟ್ರ ಮುಂದಿನ ಸಿನಿಮಾ ಟೈಟಲ್ಲೇ ಡಿಫರೆಂಟ್! ಏನಿದು ‘ರುದ್ರಪ್ರಯಾಗ’?

- ಬೆಲ್‌ ಬಾಟಂ ಚಿತ್ರಕ್ಕೆ 125 ದಿನಗಳ ಸಂಭ್ರಮ. ಮುಂದಿನ ವರ್ಷ ಬೆಲ್‌ ಬಾಟಂ-2 ಸಿನಿಮಾ ಸೆಟ್ಟೇರಬಹುದು. ಇದರ ಜತೆಗೆ ಸಮಥ್‌ರ್‍ ಕಡಕೋಳ ನಿರ್ದೇಶನದ ‘ಆ್ಯಂಟಗನಿ ಶೆಟ್ಟಿ’ ಇದೆ. ಕಥಾಸಂಗಮ ತೆರೆಗೆ ಬರಬೇಕಿದೆ. ಕರಣ್‌ ಅನಂತ್‌ ನಿರ್ದೇಶನದ ಸಿನಿಮಾ ಶುರುವಾಗಬೇಕಿದೆ.

- ಸದ್ಯಕ್ಕೆ ನಾನು ಬೇರೆಯವರ ನಿರ್ದೇಶನದ ಚಿತ್ರದಲ್ಲಿ ನಟನೆ ಹಾಗೂ ರುದ್ರಪ್ರಯಾಗ ಸಿನಿಮಾ ತಯಾರಿಗಳಲ್ಲಿ ಬ್ಯುಸಿ ಆಗಿದ್ದೇನೆ.