Asianet Suvarna News Asianet Suvarna News

ಜೈಸಲ್ಮೇರ್‌ನಲ್ಲಿ ಮಾನ್ವಿತಾ ಹರೀಶ್‌ !

‘ಟಗರು’ಖ್ಯಾತಿಯ ನಟಿ ಮಾನ್ವಿತಾ ಹರೀಶ್‌ ರಾಜಸ್ತಾನ್‌ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಯಾಕಂದ್ರೆ, ಅವರೀಗ ‘ರಾಜಸ್ಥಾನ್‌ ಡೈರೀಸ್‌’ ಚಿತ್ರದ ಚಿತ್ರೀಕರಣಕ್ಕೆ ಅಂತ ರಾಜಸ್ಥಾನ್‌ಗೆ ತೆರಳಿ ವಾರವೇ ಕಳೆದಿದೆ. ಕೋಟೆ ನಗರಿ ಜೈ ಸಲ್ಮೇರ್‌ನಲ್ಲಿ ‘ರಾಜಸ್ಥಾನ್‌ ಡೈರೀಸ್‌’ ಚಿತ್ರತಂಡ ಬೀಡು ಬಿಟ್ಟಿದ್ದು, ಎಪ್ರಿಲ್‌ 6 ರಿಂದ ಅಲ್ಲಿಯೇ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಮೂರು ದಿನಗಳ ಚಿತ್ರೀಕರಣ ಮುಗಿದಿದೆ. ಹೊಸ ಪ್ರತಿಭೆ ಸುಮುಖ ಈ ಚಿತ್ರದ ನಾಯಕ ನಟ. ಅವರಿಗೆ ಜೋಡಿಯಾಗಿ ಮಾನ್ವಿತಾ ಹರೀಶ್‌ ಕಾಣಿಸಿಕೊಳ್ಳುತ್ತಿದ್ದಾರೆ.

Actress Manvitha Harish starts shoting for Rajasthan Diaries in Jaisalmer
Author
Bengaluru, First Published Apr 11, 2019, 9:22 AM IST

ಕನ್ನಡದ ಜತೆಗೆ ಮರಾಠಿಯಲ್ಲೂ ನಿರ್ಮಾಣವಾಗುತ್ತಿರುವ ಈ ಚಿತ್ರವಿದು. ವಿಶೇಷ ಅಂದ್ರೆ, ಚಿತ್ರದ ಬಹುತೇಕ ಕತೆ ರಾಜಸ್ಥಾನ್‌ ಸುತ್ತ ಮುತ್ತ ನಡೆಯಲಿದೆಯಂತೆ. ಅದಕ್ಕಾಗಿಯೇ ಚಿತ್ರತಂಡ ಚಿತ್ರೀಕರಣಕ್ಕಾಗಿ ಅಲ್ಲಿಗೆ ತೆರಳಿದೆ. ಆದರೆ ಬಿಸಿಲು ಝಳಕ್ಕೆ ಚಿತ್ರತಂಡವನ್ನು ಕಂಗಲಾಗಿಸಿದೆಯಂತೆ. ‘ಇಲ್ಲಿ ಬಿಸಿಲು ಜಾಸ್ತಿಯೇ ಇದೆ. ಬಿಸಿಲು ಝಳಕ್ಕೆ ಹೊರಬರಲು ಸಾಧ್ಯವೇ ಆಗುತ್ತಿಲ್ಲ. ಆದರೂ ನಿಗಧಿತ ಅವಧಿಯಲ್ಲಿ ಚಿತ್ರೀಕರಣ ಮುಗಿಸಲೇಬೇಕಿದೆ. ಸುಡುವ ಬಿಸಿಲಿಗೂ ಕ್ಯಾರೆ ಎನ್ನದೇ ಚಿತ್ರೀಕರಣ ಮಾಡುತ್ತಿದ್ದೇವೆ. ಒಂಥರ ನನಗಿದು ಹೊಸ ಅನುಭವವೇ ಆಗಿದೆ. ಇಡೀ ತಂಡವೇ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಜೈ ಸಲ್ಮೇರದ ಕೋಟೆ ಕೊತ್ತಲುಗಳು, ಅರಮನೆಗಳಲ್ಲಿ ಸುತ್ತಾಡುವುದೇ ಒಂಥರ ಮಜಾ ಎನಿಸುತ್ತಿದೆ’ ಎನ್ನುತ್ತಾರೆ ಮಾನ್ವಿತಾ.

Actress Manvitha Harish starts shoting for Rajasthan Diaries in Jaisalmer

ಕನ್ನಡದವರೇ ಆದ ಮುಂಬೈ ನಿವಾಸಿ ನಂದಿತಾ ಯಾದವ್‌ ನಿರ್ದೇಶನದ ಚಿತ್ರವಿದು. ಹಿಂದಿ ಹಾಗೂ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ಕತೆಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು, ತಮ್ಮ ಪುತ್ರ ಸುಮುಖ ಅವರನ್ನು ಕನ್ನಡದ ಜತೆಗೆ ಮರಾಠಿಗೂ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಈ ಚಿತ್ರದ ಮತ್ತೊಂದು ವಿಶೇಷ.

ಮಾನ್ವಿತಾ ಹರೀಶ್ ಮುಂಬೈ ನಂಟಿನ ರಹಸ್ಯ ಬಯಲು

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios