ಸ್ಯಾಂಡಲ್‌ವುಡ್‌ನ ಸೈಕ್ ಮಾಡೋಕೆ ಬಂದ ಭೀಮ: ಟ್ರೆಂಡ್ ಆಯ್ತು ಬ್ಯಾಡ್‌ಬಾಯ್ಸ್ ಸಾಂಗ್!
ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ ಸಿನಿಮಾದ ಸೈಕ್ ಹಾಡು ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಎಂದು ಶುರುವಾಗುವ ಗೀತೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಪದಗಳನ್ನು ಮಿಕ್ಸ್ ಮಾಡಿ ರಾಪ್ ಮಾಡಲಾಗಿದೆ.
ಸ್ಯಾಂಡಲ್‌ವುಡ್‌ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ ಸಿನಿಮಾದ ಸೈಕ್ ಹಾಡು ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಎಂದು ಶುರುವಾಗುವ ಗೀತೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಪದಗಳನ್ನು ಮಿಕ್ಸ್ ಮಾಡಿ ರಾಪ್ ಮಾಡಲಾಗಿದೆ. ಇದೊಂದು ವಿಜಯ್ ಅವರ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ.
ರಾಪರ್ ಗಳಾದ ರಾಹುಲ್ ಡಿಟ್ಟೋ, ನಾಗಾರ್ಜುನ್ ಶರ್ಮಾ ಮತ್ತು ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದು, ರಾಹುಲ್ ಮತ್ತು ಬಿಜ್ಜು ಈ ಗೀತೆಯನ್ನು ಹಾಡಿದ್ದಾರೆ. ಕ್ಯಾಚಿ ಎನಿಸುವಂತಹ ಅನೇಕ ಪದಗಳನ್ನು ಇಲ್ಲಿ ಬಳಸಲಾಗಿದೆ. ಕೆಲ ಬೈಗಳುಗಳನ್ನು ಕೂಡ ಈ ಹಾಡಿನಲ್ಲಿ ಕೇಳಬಹುದು. ಭೀಮ ಸೆಟ್ಟೇರಿದಾನಿಂದಲೂ ದೊಡ್ಡ ಹೈಪ್ ಕ್ರೇಜ್ ಸೃಷ್ಟಿಸಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಲೀಸ್ಟ್‌ನಲ್ಲಿ ಭೀಮನ ಹೆಜ್ಜೆ ಕೂಡ ಇದೆ. ಭೀಮನಲ್ಲಿ ಪ್ರಚಂಡ ಪ್ರತಿಭಾವಂತ ಕಲಾವಿಧರು, ಟೆಕ್ನೀಷಿಯನ್ಸ್ ದಂಡೇ ಇದೆ.
ಹೀಗಾಗಿ ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಕೊಡೋದ್ರಲ್ಲಿ ನೋ ಡೌಟ್. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ನ ಕೊನೆಯ ಹಂತದಲ್ಲಿದೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಜೊತೆಗೆ ವಿಜಯ್ ಸಲಗ ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ದುನಿಯಾ ವಿಜಯ್ ವಿಭಿನ್ನ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ.
ಈಗ ಶುರುವಾಗ್ತಿದೆ 'ಭೀಮ' ದರ್ಬಾರ್: ಗಣೇಶ ಹಬ್ಬಕ್ಕೆ ದುನಿಯಾ ವಿಜಯ್ ಬಾಯ್ಸ್ ಭರ್ಜರಿ ಸ್ಟೆಪ್!
ಅದಕ್ಕಾಗಿಯೇ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವ ಕಲಾವಿದರನ್ನೂ ಕೂಡ ಈ ಒಂದು ಚಿತ್ರಕ್ಕಾಗಿಯೇ ಆಯ್ಕೆ ಮಾಡಿಕೊಂಡು ಇಡೀ ಭೀಮನ ಒಂದು ರಿಯಲಿಸ್ಟಿಕ್ ಲೋಕವನ್ನ ಕಟ್ಟಿಕೊಟ್ಟಿದ್ದಾರೆ. ಇನ್ನು ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ.