- Home
- Entertainment
- TV Talk
- ವರ್ತೂರು ಸಂತೋಷ್ರಿಂದ ಹಣನೇ ತಗೊಂಡಿಲ್ಲ, ಹಿಂಗ್ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ
ವರ್ತೂರು ಸಂತೋಷ್ರಿಂದ ಹಣನೇ ತಗೊಂಡಿಲ್ಲ, ಹಿಂಗ್ ಕೇಳಿದ್ರೆ ಎಂತಾ ಹೇಳೋದು? Rakshita Shetty ಬೇಸರ
ಬಿಗ್ಬಾಸ್ 10ರ ಸ್ಪರ್ಧಿ ವರ್ತೂರು ಸಂತೋಷ್, ಬಿಗ್ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಕ್ಷಿತಾ, ತಾವಿನ್ನೂ ಹಣ ಪಡೆದಿಲ್ಲವೆಂದೂ, ವರ್ತೂರು ಅವರ ಮನೆಗೆ ಹೋಗಿ ಅಡುಗೆ ಮಾಡುವುದಾಗಿ ಹೇಳಿದ್ದಾರೆ.

ಬಿಗ್ಬಾಸ್ 12 ಹವಾ
ಬಿಗ್ಬಾಸ್ 12 (Bigg Boss 12) ಮುಗಿದರೂ ಕೆಲವು ಸ್ಪರ್ಧಿಗಳ ಹವಾ ಇನ್ನೂ ನಿಂತಿಲ್ಲ. ಅವರಲ್ಲಿ ಒಬ್ಬರು ರಕ್ಷಿತಾ ಶೆಟ್ಟಿ (Rakshita Shetty). ಈ ಬಾರಿಯ ಬಿಗ್ಬಾಸ್ನಲ್ಲಿ ಮೊದಲ ರನ್ನರ್ ಅಪ್ಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ, ಬಿಗ್ಬಾಸ್ 10ರ ಸ್ಪರ್ಧಿ ವರ್ತೂರು ಸಂತೋಷ್ ಘೋಷಣೆ ಮಾಡಿದ್ದರು. ಅದರಂತೆ ಅವರು ಈಗ ರಕ್ಷಿತಾ ಶೆಟ್ಟಿ ಅವರಿಗೆ ಹಣ ನೀಡಬೇಕಿದೆ.
ಕರೆ ಮಾಡಿದ್ದ ವರ್ತೂರು
ಅದರಂತೆಯೇ, ವರ್ತೂರು ಅವರು ರಕ್ಷಿತಾ ಶೆಟ್ಟಿ ಕೆಲ ದಿನಗಳ ಹಿಂದೆ ಅವರು ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ವರ್ತೂರು ಸಂತೋಷ್ ಬಗ್ಗೆ ಅರಿವಿಲ್ಲದ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಪರಿಚಯವನ್ನು ಫೋನ್ ಮೂಲಕ ಮಾಡಿಕೊಂಡಿರುವ ವರ್ತೂರು ಅವರು ಹಣ ನೀಡುವುದಾಗಿ ಹೇಳಿದ್ದಾರೆ.
ರಕ್ಷಿತಾ ಕನ್ಫ್ಯೂಸ್
ಇದೇ 12ರ ಬಳಿಕ ಬೆಂಗಳೂರಿಗೆ ಬಂದು, ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿರುವ ವರ್ತೂರು ಸಂತೋಷ್, ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಕೊನೆಯವರೆಗೂ ರಕ್ಷಿತಾ ಶೆಟ್ಟಿ ಕನ್ಫ್ಯೂಷನ್ನಲ್ಲಿಯೇ ಇದ್ದ ಹಾಗೆ ಕಾಣಿಸುತ್ತಿದೆ. ಏಕೆಂದರೆ, ಅವರಿಗೆ ಈ ಬಗ್ಗೆ ಗೊತ್ತೇ ಇಲ್ಲದ ಕಾರಣ, 2 ಲಕ್ಷ ಯಾಕೆ ಕೊಡುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಆದರೆ ಕೊನೆಗೆ ರಕ್ಷಿತಾ ಹಣ ಪಡೆದುಕೊಂಡರು ಎಂದು ಸುದ್ದಿಯಾಗಿತ್ತು.
ರಕ್ಷಿತಾ ಶೆಟ್ಟಿ ಸ್ಪಷ್ಟನೆ
ಇದೀಗ ರಕ್ಷಿತಾ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಇನ್ನೂ ದುಡ್ಡು ಪಡೆದುಕೊಂಡಿಲ್ಲ. ಏಕೆಂದ್ರೆ ನಾನಿನ್ನೂ ಅವರ ಮನೆಗೆ ಹೋಗಲಿಲ್ಲ.ಅವರು ಕಾಲ್ ಮಾಡಿ ಪ್ರೀತಿಯಿಂದ ಕರೆದಿದ್ದಾರೆ. ಖಂಡಿತವಾಗಿಯೂ ದುಡ್ಡು ಪಡೆದುಕೊಳ್ಳುತ್ತೇನೆ. ಆದರೆ ಈಗಲೇ ಸುದ್ದಿ ಆಗಿರುವ ಹಾಗೆ ನಾನಿನ್ನೂ ಪಡೆದುಕೊಂಡಿಲ್ಲ ಎಂದಿದ್ದಾರೆ. ಎಲ್ಲರೂ ಫೋನ್ ಮಾಡಿ ದುಡ್ಡು ಏನು ಮಾಡಿದೆ ಎಂತ ಕೇಳ್ತಾರೆ. ಎಂತ ಮಾಡೋದು, ಹಣನೇ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಅಡುಗೆ ಮಾಡಿ ದುಡ್ಡು
ಮನೆಗೆ ಬಂದಾಗ, ಮೀನು ತರಿಸಿ ಇಡುತ್ತೇನೆ. ಫ್ರೈ ಮಾಡಿಕೊಡಬೇಕು ಎಂದು ವರ್ತೂರು ಹೇಳಿದ್ದರು. ಆ ಬಗ್ಗೆ ಹೇಳಿರೋ ರಕ್ಷಿತಾ ಶೆಟ್ಟಿ (Bigg Boss Raskhita Shetty) ವರ್ತೂರು ಸಂತೋಷ್ ಅವರ ಮನೆಗೆ ಹೋಗಿ ಅಡುಗೆ ಮಾಡ್ತೇನೆ. ಆಮೇಲೆ ಹಣ ಪಡೆಯುತ್ತೇನೆ ಎಂದಿದ್ದಾರೆ.
ವರ್ತೂರು ಸಂತೋಷ್ ಕಂಡೀಷನ್
ಅಷ್ಟಕ್ಕೂ ವರ್ತೂರು ಸಂತೋಷ್ ಅವರು ಮೊದಲು ಬಿಗ್ಬಾಸ್ 12ರ 2ನೇ ರನ್ನರ್ ಅಪ್ಗೆ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಷರತ್ತು ವಿಧಿಸಿದ್ದ ಅವರು, ಬಿಗ್ಬಾಸ್ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿಯೇ 2ನೇ ರನ್ನರ್ ಅಪ್ಗೆ ಹಣವನ್ನು ನೀಡುತ್ತೇನೆ. ನನ್ನ ಜೊತೆ ನನ್ನ ಹಳ್ಳಿಕಾರ್ ಹಸುವನ್ನೂ ಕರೆಸಬೇಕು ಎಂದಿದ್ದರು. ಆದರೆ ಅದಕ್ಕೆ ಅನುಮತಿ ಸಿಕ್ಕದಿದ್ದ ಹಿನ್ನೆಲೆಯಲ್ಲಿ, ಕೊನೆಗೆ ಮೊದಲ ರನ್ನರ್ ಅಪ್ಗೆ 2 ಲಕ್ಷ ಕೊಡುವುದಾಗಿ ಘೋಷಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

