ಈಗ ಶುರುವಾಗ್ತಿದೆ 'ಭೀಮ' ದರ್ಬಾರ್: ಗಣೇಶ ಹಬ್ಬಕ್ಕೆ ದುನಿಯಾ ವಿಜಯ್ ಬಾಯ್ಸ್ ಭರ್ಜರಿ ಸ್ಟೆಪ್!
ದುನಿಯಾದ ಇಮೇಜ್.. ಸಲಗದ ಸಕ್ಸಸ್.. ಅದುವೆ ಕನ್ನಡದ ಕರಿ ಚಿರತೆ ದುನಿಯಾ ವಿಜಯ್.. ಜೋಗಿ, ರಂಗ ಎಸ್ಎಸ್ಎಲ್ಸಿಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಸ್ಮಾಲ್ ಸ್ಮಾಲ್ ರೋಲ್ ಮಾಡ್ತಿದ್ದ ವಿಜಯ್ಗೆ ಸ್ಯಾಂಡಲ್ವುಡ್ನ ರಿಯಲ್ ದುನಿಯಾ ಗೊತ್ತಾಗಿದ್ದು ಸುಕ್ಕಾ ಸೂರಿಯ ದುನಿಯಾ ಸಿನಿಮಾದಲ್ಲಿ.
ದುನಿಯಾದ ಇಮೇಜ್.. ಸಲಗದ ಸಕ್ಸಸ್.. ಅದುವೆ ಕನ್ನಡದ ಕರಿ ಚಿರತೆ ದುನಿಯಾ ವಿಜಯ್.. ಜೋಗಿ, ರಂಗ ಎಸ್ಎಸ್ಎಲ್ಸಿಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಸ್ಮಾಲ್ ಸ್ಮಾಲ್ ರೋಲ್ ಮಾಡ್ತಿದ್ದ ವಿಜಯ್ಗೆ ಸ್ಯಾಂಡಲ್ವುಡ್ನ ರಿಯಲ್ ದುನಿಯಾ ಗೊತ್ತಾಗಿದ್ದು ಸುಕ್ಕಾ ಸೂರಿಯ ದುನಿಯಾ ಸಿನಿಮಾದಲ್ಲಿ. ಇದೆಲ್ಲಾ ಈಗ ಇತಿಹಾಸ ಬಿಡಿ. ವಿಜಯ್ ಚಿರತೆಯಂತೆ ಭೇಟೆಯಾಡೋ ಆ್ಯಕ್ಟರ್ ಮಾತ್ರ ಅಲ್ಲ, ವೇರಿ ಟ್ಯಾಲೆಂಟೆಡ್ ಡೈರೆಕ್ಟರ್, ರೈಟರ್ ಅಂತ ಗೊತ್ತಾಗಿದ್ದು ಸಲಗ ಸಿನಿಮಾದಲ್ಲಿ. ಸಂಕಷ್ಟಗಳ ಸಂಕೋಲೆಯಿಂದ ಹೊಸ ಬಂದು ಸಲಗ ಸಿನಿಮಾದಲ್ಲಿ ಡೆಬ್ಯು ಡೈರೆಕ್ಟರ್ ಆಗಿ ಸೂಪರ್ ಡೂಪರ್ ಬಿಗ್ ಹಿಟ್ ಸಲಗ ಕೊಟ್ಟ ವಿಜಯ್ ಈಗ ಆಡಿ ಬಾ ಮಗನೇ ಭೀಮನಾಗಿದ್ದಾರೆ.
ದುನಿಯಾದ ದೊಡ್ಡ ಇಮೇಜ್ ಜೊತೆ ಸಲಗದ ಬಹು ದೊಡ್ಡ ಸಕ್ಸಸ್ ನಲ್ಲಿರೋ ವಿಜಯ್ರ ಎರಡನೇ ಸ್ಟ್ರಗಲ್ ಭೀಮ ಸಿನಿಮಾ. ಇದೀಗ ಗಣೇಶ ಹಬ್ಬಕ್ಕೆ ಭೀಮನ ಬಾಯ್ಸ್ ಭರ್ಜರಿ ಸ್ಟೆಪ್ ಹಾಕೋಕೆ ಸಜ್ಜಾಗಿದ್ದಾರೆ. ಗೌರಿ ಗಣೇಶ ಹಬ್ಬಕ್ಕೆ ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್ ಆಗ್ತಿದೆ. ಸಲಗ ಸಿನಿಮಾದಲ್ಲಿ ಗಾಜ ಬಜಾನದ ಕಮಾಲ್ ಮಾಡಿದ್ದ ವಿಜಯ್ ಚರಣ್ರಾಜ್ ಕಾಂಬಿನೇಷನ್ ಭೀಮನಲ್ಲೂ ಜೊತೆಯಾಗಿದೆ. ಮಾಸ್ ಕಮರ್ಷಿಯಲ್ ಸಿನಿಮಾದ ಸೈಕ್ ಸಾಂಗ್ ಹೇಗಿರುತ್ತೆ ಅನ್ನೋ ಕುತೂಹಲ ಇದೆ. ಅದಕ್ಕೆ ಕಾರಣ ಸಲಗದಲ್ಲಿ ವಿಜಯ್ ಚರಣ್ ರಾಜ್ ಕೊಟ್ಟ ವೆರಾಯಿಟಿ ವೆರಾಯಿಟಿ ಸಾಂಗ್ಸ್.
ದುನಿಯಾ ವಿಜಯ್ ಭೀಮನಿಗೆ ಸಂಗೀತದ ಬಲ: ಹೇಗಿದೆ ಗೊತ್ತಾ 'ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್' ಸಾಂಗ್
ಭೀಮ ಸೆಟ್ಟೇರಿದಾನಿಂದ್ಲೂ ದೊಡ್ಡ ಹೈಪ್ ಕ್ರೇಜ್ ಸೃಷ್ಟಿಸಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಲೀಸ್ಟ್ನಲ್ಲಿ ಭೀಮನ ಹೆಜ್ಜೆ ಕೂಡ ಇದೆ. ಭೀಮನಲ್ಲಿ ಪ್ರಚಂಡ ಪ್ರತಿಭಾವಂತ ಕಲಾವಿಧರು, ಟೆಕ್ನೀಷಿಯನ್ಸ್ ದಂಡೇ ಇದೆ. ಹೀಗಾಗಿ ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಕೊಡೋದ್ರಲ್ಲಿ ನೋ ಡೌಟ್. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ನ ಕೊನೆಯ ಹಂತದಲ್ಲಿರೋ ಸೆಪ್ಟೆಂಬರ್ 18ಕ್ಕೆ ಭೀಮನ ಮೊದಲ ಸಾಂಗ್ ಹೊರ ಬರಲಿದೆ.