Asianet Suvarna News Asianet Suvarna News

'ಭೀಮ' ಪೋಷಕರನ್ನು ಎಚ್ಚರಿಸುವ ಸಿನಿಮಾ: ಕತೆ ಮಾಡುವಾಗ ನನ್ನ ಮಗ, ಮಗಳು ನೆನಪಾದರೆಂದ ದುನಿಯಾ ವಿಜಯ್‌!

ನಾನು ಯಾರಿಗೂ ಸಂದೇಶ ಕೊಡುತ್ತಿಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೆರೆ ಮೇಲೆ ಇಟ್ಟಿದ್ದೇನೆ. ಸ್ವೀಕರಿಸಬೇಕಿರುವುದು ಜನ. ಸಿನಿಮಾ ಬಿಡುಗಡೆ ನಂತರ ನಾನು ಸಂಗ್ರಹಿಸಿರುವ ದಾಖಲೆ, ನೈಜ ಘಟನೆಗಳನ್ನು ತೆರೆದಿಡುತ್ತೇನೆ ಎಂದು ದುನಿಯಾ ವಿಜಯ್‌ ಹೇಳಿದರು.

sandalwood actor director duniya vijay talks about bheema movie gvd
Author
First Published Sep 20, 2023, 6:43 AM IST

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರದ ಬ್ಯಾಡ್‌ಬಾಯ್ಸ್‌ ಹಾಡು ಗಣೇಶನ ಹಬ್ಬದ ದಿನ ಬಿಡುಗಡೆ ಆಗಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಈ ಹಾಡು, ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿದ್ದು, 1.5 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ರಾಹುಲ್ ಡಿಟ್ಟೋ, ಎಂ ಸಿ ಬಿಜು ಹಾಗೂ ನಾಗಾರ್ಜುನ ಶರ್ಮಾ ಈ ಮೂವರು ಸೇರಿ ಬರೆದಿರುವ ಈ ಹಾಡಿಗೆ ರಾಹುಲ್ ಡಿಟ್ಟೋ ಹಾಗೂ ಎಂ ಸಿ ಬಿಜು ಧ್ವನಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಯ್‌, ‘ತುಂಬಾ ನೈಜತೆಯಿಂದ ಕೂಡಿದ, ವಾಸ್ತವಕ್ಕೆ ಹತ್ತಿರದ ಘಟನೆ, ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. 

ಪೋಷಕರನ್ನು ಎಚ್ಚರಿಸುವ ಸಿನಿಮಾ ಇದು. ಯುವ ಸಮುದಾಯ ಎಂಥ ಅಪಾಯಕ್ಕೆ ಸಿಕ್ಕಿದ್ದಾರೆ, ಅವರ ಯೋಚನೆ- ಮನಸ್ಥಿತಿ ಇತ್ಯಾದಿಗಳನ್ನು ಒಳಗೊಂಡ ಚಿತ್ರ. ನಾನು ಈ ಚಿತ್ರಕ್ಕಾಗಿ ಕತೆ ಮಾಡುವಾಗ ನನ್ನ ಮಗ, ಮಗಳು ನೆನಪಾದರು. ಇಲ್ಲಿ ನಾನು ಯಾರಿಗೂ ಸಂದೇಶ ಕೊಡುತ್ತಿಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೆರೆ ಮೇಲೆ ಇಟ್ಟಿದ್ದೇನೆ. ಸ್ವೀಕರಿಸಬೇಕಿರುವುದು ಜನ. ಸಿನಿಮಾ ಬಿಡುಗಡೆ ನಂತರ ನಾನು ಸಂಗ್ರಹಿಸಿರುವ ದಾಖಲೆ, ನೈಜ ಘಟನೆಗಳನ್ನು ತೆರೆದಿಡುತ್ತೇನೆ. ಬೆಂಗಳೂರಿನ ಕೇರಳವರೆಗೂ ಈ ಕತೆಗಾಗಿ ಪ್ರಯಾಣ ಮಾಡಿದ್ದೇನೆ’ ಎಂದು ಹೇಳಿದರು. 

ಸ್ಯಾಂಡಲ್‌ವುಡ್‌ನ ಸೈಕ್ ಮಾಡೋಕೆ ಬಂದ ಭೀಮ: ಟ್ರೆಂಡ್ ಆಯ್ತು ಬ್ಯಾಡ್‌ಬಾಯ್ಸ್ ಸಾಂಗ್‌!

ಈ ವರ್ಷದ ನಿರೀಕ್ಷಿತ ಸಿನಿಮಾ ಲೀಸ್ಟ್‌ನಲ್ಲಿ ಭೀಮನ ಹೆಜ್ಜೆ ಕೂಡ ಇದೆ. ಭೀಮನಲ್ಲಿ ಪ್ರಚಂಡ ಪ್ರತಿಭಾವಂತ ಕಲಾವಿಧರು, ಟೆಕ್ನೀಷಿಯನ್ಸ್ ದಂಡೇ ಇದೆ. ಹೀಗಾಗಿ ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಕೊಡೋದ್ರಲ್ಲಿ ನೋ ಡೌಟ್. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ ನ ಕೊನೆಯ ಹಂತದಲ್ಲಿದೆ.  ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಜೊತೆಗೆ ವಿಜಯ್ ಸಲಗ ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ದುನಿಯಾ ವಿಜಯ್ ವಿಭಿನ್ನ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ. 

ಈಗ ಶುರುವಾಗ್ತಿದೆ 'ಭೀಮ' ದರ್ಬಾರ್: ಗಣೇಶ ಹಬ್ಬಕ್ಕೆ ದುನಿಯಾ ವಿಜಯ್ ಬಾಯ್ಸ್ ಭರ್ಜರಿ ಸ್ಟೆಪ್!

ಅದಕ್ಕಾಗಿಯೇ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನವ ಕಲಾವಿದರನ್ನೂ ಕೂಡ ಈ ಒಂದು ಚಿತ್ರಕ್ಕಾಗಿಯೇ ಆಯ್ಕೆ ಮಾಡಿಕೊಂಡು ಇಡೀ ಭೀಮನ ಒಂದು ರಿಯಲಿಸ್ಟಿಕ್ ಲೋಕವನ್ನ ಕಟ್ಟಿಕೊಟ್ಟಿದ್ದಾರೆ. ಇನ್ನು ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ,ಅ ಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಬಳಗ ಇದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ 'ಭೀಮ'ನಿಗಿದೆ.

Follow Us:
Download App:
  • android
  • ios