ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಲ್ಲಾ ಸೆಲಬ್ರಿಟಿಗಳು ಈ ಚಾಲೆಂಜನ್ನು ಮಾಡುತ್ತಿದ್ದಾರೆ. 

ಬಾಟಲ್ ಕ್ಯಾಪ್ ಚಾಲೆಂಜ್‌ ಸ್ವೀಕರಿಸಿ ಅಚ್ಚರಿ ಮೂಡಿಸಿದ ಜೂನಿಯರ್ ದರ್ಶನ್!

ಸಲ್ಲು ಭಾಯ್ ಸ್ವಲ್ಪ ಡಿಫರೆಂಟ್. ಏನೇ ಮಾಡಿದ್ರೂ ಅದನ್ನು ಡಿಫರೆಂಟಾಗಿ ಮಾಡಿ ಗಮನ ಸೆಳೆಯುತ್ತಾರೆ. ಬಾಟಲ್ ಕ್ಯಾಪ್ ಚಾಲೆಂಜನ್ನು ಎಲ್ಲರೂ ಬಾಟಲಿ ಮುಚ್ಚಳವನ್ನು ಕಾಲಿನಿಂದ ಉದ್ದು ಬಿಳಿಸಿದರೆ ಭಜರಂಗಿ ಬಾಯ್ ಜಾನ್ ಮಾತ್ರ ಬಾಯಿಯಿಂದ ಊದಿ ಮುಚ್ಚಳವನ್ನು ಬೀಳಿಸಿ ನಂತರ ಪಾನಿ ಬಚಾವ್ ಎಂಬ ಸಂದೇಶವನ್ನು ನೀಡಿದ್ದಾರೆ. ನಂತರ ಬಾಟಲಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ಕುಡಿದು ನೀರನ್ನು ಉಳಿಸಿ ಎಂದು ಸಂದೇಶ ಕೊಟ್ಟಿದ್ದಾರೆ. 

#BottleCapChallenge;ಕೇಂದ್ರ ಕ್ರೀಡಾ ಮಂತ್ರಿ ಪ್ರಯತ್ನಕ್ಕೆ ಮೆಚ್ಚುಗೆ!

 

 
 
 
 
 
 
 
 
 
 
 
 
 

Don’t thakao paani bachao

A post shared by Salman Khan (@beingsalmankhan) on Jul 14, 2019 at 5:33am PDT

ಬಾಲಿವುಡ್ ನಲ್ಲಿ ಮೊದಲು ಅಕ್ಷಯ್ ಕುಮಾರ್ ಈ ಚಾಲೆಂಜನ್ನು ಸ್ವೀಕರಿಸಿದರು. ಸ್ಯಾಂಡಲ್ ವುಡ್ ನಲ್ಲಿ ಗಣೇಶ್, ರಚಿತಾ ರಾಮ್, ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಸೇರಿದಂತೆ ಸಾಕಷ್ಟು ಮಂದಿ ಮಾಡಿದ್ದಾರೆ.

ಏನಿದು #BottleCapChallenge ಚಾಲೆಂಜ್? 

ವಾಟರ್ ಬಾಟಲ್ ಮುಚ್ಚಳವನ್ನು ಸ್ವಲ್ಪ ಓಪನ್ ಮಾಡಿ ಇಟ್ಟಿರಬೇಕು. ಸ್ಪರ್ಧಿಗಳು ಆ ಮುಚ್ಚಳವನ್ನು ಕಾಲು ಬೆರಳಿನಿಂದ ಒದ್ದು ಬೀಳಿಸಬೇಕು. ಆದರೆ ಬಾಟಲ್ ಬೀಳಬಾರದು. ಬರೀ ಮುಚ್ಚಳ ಮಾತ್ರ ಬೀಳಬೇಕು. 

ಈ ವಾಟರ್ ಬಾಟಲ್ ಚಾಲೆಂಜನ್ನು ನಟ ಅಕ್ಷಯ್ ಕುಮಾರ್ ಸ್ವೀಕರಿಸಿದ್ದಾರೆ.ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ಅರ್ಜುನ್ ಸರ್ಜಾ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿ ಮುಚ್ಚಳವನ್ನು ಬೀಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.