ನವದೆಹಲಿ(ಜು.12): ಸಾಮಾಜಿಕ ಜಾಲತಾದಲ್ಲಿ ಸದ್ಯ ಬಾಟಲ್ ಕ್ಯಾಪ್ ಚಾಲೆಂಜ್ ಸದ್ದು ಮಾಡುತ್ತಿದೆ. ಕ್ರೀಡಾಪಟುಗಳು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಬಾಟಲ್ ಕ್ಯಾಪ್ ಚಾಲೆಂಜ್ ಮೂಲಕ ತಮ್ಮ ಫಿಟ್ನೆಸ್ ಪ್ರದರ್ಶಿಸಿದ್ದರು. ಇದೀಗ ಕೇಂದ್ರ ಕ್ರೀಡಾ ಮಂತ್ರಿ ಕಿರಣ್ ರಿಜಿಜು ಬಾಟಲ್ ಕ್ಯಾಪ್ ಚಾಲೆಂಜ್ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇಷ್ಟೇ ಅಲ್ಲ ರಿಜಿಜು ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಧೋನಿ ನಿವೃತ್ತಿ ಮಾತು; ಗಾಯಕಿ ಲತಾ ಮಂಗೇಶ್ಕರ್ ಮನವಿ!

ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಡ್ರಗ್ಸ್‌ನಿಂದ ದೂರವಿರಿ, ಫಿಟ್ ಇಂಡಿಯಾ ಅಭಿಯಾನಕ್ಕೆ ಸಜ್ಜಾಗಿ ಎಂದು ಬರೆದುಕೊಂಡಿದ್ದಾರೆ. 

 

47 ವರ್ಷದ ಕೇಂದ್ರ ಕ್ರೀಡಾ ಮಂತ್ರಿ ರಿಜಿಜು ಇದೀಗ ಸೊಶಿಯಲ್ ಮಿಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಅಕ್ಷಯ್ ಕುಮಾರ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಸೆಲೆಬ್ರೆಟಿಗಳು, ಕ್ರೀಡಾಪಟುಗಳು ಬಾಟಲ್ ಕ್ಯಾಪ್ ಚಾಲೆಂಜ್ ಮೂಲಕ ಸುದ್ದಿಯಾಗಿದ್ದರು. ಇದೀಗ ರಿಜಿಜು ಕೂಡ ಈ ಚಾಲೆಂಜ್ ಸ್ವೀಕರಿಸಿ, ವಿಡಿಯೋ ಪೋಸ್ಟ್ ಮಾಡಿರುವುದು ಅಭಿಯಾನದ ವೇಗ ಹೆಚ್ಚಿಸಿದೆ.