ನಟ ದರ್ಶನ್ ಪುತ್ರ ಅಚ್ಚರಿ ಮೂಡಿಸುವಂತಹ ಚಾಲೆಂಜನ್ನು ಸ್ವೀಕರಿಸಿದ್ದು, ಈ ವಿಡಿಯೋವನ್ನು ತಾಯಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಓಪನ್ ಬಾಟಲ್ ಚಾಲೆಂಜ್ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಹಾಲಿವುಡ್ ನಿಂದ ಸ್ಯಾಂಡಲ್‌ವುಡ್ ವರೆಗೂ ಸ್ಟಾರ್‌ಗಳು ಇದನ್ನು ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಈ ಸ್ಟಾರ್‌ಗಳ ನಡುವ ರೈಸಿಂಗ್ ಸ್ಟಾರ್ ಆಗಿ ಜೂನಿಯರ್ ದರ್ಶನ್ ಚಾಲೆಂಜ್ ಸ್ವೀಕರಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್‌ಗೇ ಚಾಲೆಂಜಾ? ಹೌದು ಓಪನ್ ಬಾಟಲ್ ಚಾಲೆಂಜ್‌ನಲ್ಲಿ ಮಿಂಚಿದ ಜೂನಿಯರ್ ದರ್ಶನ್ ವಿನೀಶ್ ವಿಡಿಯೋವನ್ನು ತಾಯಿ ವಿಜಯಲಕ್ಷ್ಮಿ ಟ್ಟಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್‌ಗೆ ತಕ್ಕ ಪುತ್ರ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ವಿನೀಶ್ 'ಐರಾವತ' ಹಾಗೂ 'ಯಜಮಾನ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
