South Indian Actresses: ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ ‘ಆಲ್ ಆಕ್ಸೆಸ್ ಪಾಸ್’ ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ.

ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ ‘ಆಲ್ ಆಕ್ಸೆಸ್ ಪಾಸ್’ ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ. ತವರು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವುದರ ಜೊತೆಗೆ, ಪಕ್ಕದ ಭಾಷೆಗಳಲ್ಲೂ ಗಟ್ಟಿ ನೆಲೆ ಕಂಡುಕೊಳ್ಳಲು ಪಕ್ಕಾ ಪ್ಲ್ಯಾನ್‌ನೊಂದಿಗೆ ಮುನ್ನಡೆಯುತ್ತಿದ್ದಾರೆ. ಸದ್ಯ ರುಕ್ಮಿಣಿ ವಸಂತ್, ಮಮಿತಾ ಬೈಜು ಹಾಗೂ ಕಯಾದು ಲೋಹರ್‌ ದಕ್ಷಿಣ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ಮೋಸ್ಟ್ ವಾಂಟೆಡ್ ನಾಯಕಿಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಮಲಯಾಳಂ ಚಿತ್ರರಂಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ!

ರುಕ್ಮಿಣಿ ವಸಂತ್ ಈಗಾಗಲೇ ಕನ್ನಡದಲ್ಲಿ ‘ಟಾಕ್ಸಿಕ್’, ತೆಲುಗಿನಲ್ಲಿ ‘ಡ್ರ್ಯಾಗನ್’ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಟ ನಿವಿನ್ ಪೌಲಿ ಅಭಿನಯದ 51ನೇ ಸಿನಿಮಾಗೆ ರುಕ್ಮಿಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕ ನಶೀದ್ ಮಹಮೂದ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ನಿವಿನ್ ಪೌಲಿ ಜೋಡಿಯಾಗಿ ರುಕ್ಮಿಣಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಮಲಯಾಳಂ ಚಿತ್ರರಂಗದ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರುಕ್ಮಿಣಿ, ‘ವೆರಿ ಸ್ಪೆಷಲ್ ಫಸ್ಟ್’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಮಮಿತಾ ಬೈಜು ಕೂಡ ಫುಲ್ ಬಿಜಿ!

ಮತ್ತೊಂದೆಡೆ, ಮಲಯಾಳಂನ ಜನಪ್ರಿಯ ನಟಿ ಮಮಿತಾ ಬೈಜು ತಮಿಳು ಚಿತ್ರರಂಗದಲ್ಲೂ ಸದ್ದು ಮಾಡುತ್ತಿದ್ದಾರೆ. ಸದ್ಯ ತಮಿಳಿನಲ್ಲಿ ‘ವಿಶ್ವನಾಥ್ & ಸನ್ಸ್’ ಚಿತ್ರದ ಮೂಲಕ ಟ್ರೆಂಡ್‌ನಲ್ಲಿದ್ದಾರೆ. ತಮ್ಮ ಮಾತೃಭಾಷೆಯಾದ ಮಲಯಾಳಂನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಮಿತಾ, ಇದೀಗ ತೆಲುಗು ಚಿತ್ರರಂಗದ ಡೆಬ್ಯೂಗಾಗಿ ಎದುರು ನೋಡುತ್ತಿದ್ದಾರೆ. ಹೀಗಾಗಿ ಮಲಯಾಳಂ, ತಮಿಳು ಬಳಿಕ ತೆಲುಗಿನಲ್ಲೂ ಮಮಿತಾ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಕಯಾದು ಲೋಹರ್‌ಗೆ ಎಲ್ಲೆಡೆ ಡಿಮ್ಯಾಂಡ್!

ಇನ್ನು ಕಯಾದು ಲೋಹರ್‌ ವಿಚಾರಕ್ಕೆ ಬಂದರೆ, ಕನ್ನಡ ಹೊರತುಪಡಿಸಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತೆಲುಗಿನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ಪ್ಯಾರಡೈಸ್’ ಸಿನಿಮಾದಲ್ಲಿ ನಟಿಸುತ್ತಿರುವ ಕಾಯದು, ತಮಿಳಿನಲ್ಲಿ ‘ಇಮ್ಮಾರ್ಟಲ್’ ಹಾಗೂ ‘ಸೂರ್ಯ 48’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಲಯಾಳಂನಲ್ಲಿ ‘ತಾರಂ’ ಹಾಗೂ ದುಲ್ಕರ್ ಸಲ್ಮಾನ್ ಜೊತೆಗಿನ ‘ಐ ಆ್ಯಮ್ ಗೇಮ್’ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಒಟ್ಟಿನಲ್ಲಿ, ರುಕ್ಮಿಣಿ ವಸಂತ್, ಮಮಿತಾ ಬೈಜು ಹಾಗೂ ಕಯಾದು ಲೋಹರ್‌-ಈ ಮೂವರು ನಾಯಕಿಯರ ದಕ್ಷಿಣ ಭಾರತದ ಚಿತ್ರರಂಗದ ಮೇಲಿನ ದಾಳಿಯ ವೇಗ ಸದ್ಯಕ್ಕಂತೂ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಈ ಬ್ಯೂಟೀಸ್, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಲ್ಲಿ ತಮ್ಮದೇ ಛಾಪು ಮೂಡಿಸುವ ಸಾಧ್ಯತೆ ಹೆಚ್ಚಿದೆ.