ನನಗೆ ಸಾಮಾನ್ಯ ಜ್ಞಾನ ಹೋಗಿಬಿಟ್ಟಿದೆ.. ಸಿನಿಮಾದೊಳಗೆ ಸಂಪೂರ್ಣವಾಗಿ ಮುಳುಗಿದೀನಿ.. ಇನ್ನೊಂದು ಸಲ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ.. 'ಕಾಂತಾರ' ನಿಮ್ಮಿಂದ ನಿಮಗಾಗಿ.. ಮೊದಲ ಭಾಗ ಮಾಡಿದಾಗ ಅದು ಅಪ್ಪಟ ಕನ್ನಡದ ಸಿನಿಮಾ ಆಗಿತ್ತು. ಅದನ್ನು ದೇಶದ ಮಟ್ಟಕೆ ತೆಗೆದುಕೊಂದಿದ್ದು ಹೋಗಿದ್ದು ನಮ್ಮ ಜನರು..
ಕಾಂತಾರ ಚಾಪ್ಟರ್ 1' ಸಿನಿಮಾದ ಟ್ರೈಲರ್ ಬಿಡುಗಡೆಿ, ಸುದ್ದಿಗೋಷ್ಠಿ!
ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾದ ಟ್ರೈಲರ್ ಮಧ್ಯಾನ್ಹ ಬಿಡುಗಡೆಯಾಗಿ, ಇಂದು (22 September 2025) ಸುದ್ದಿಗೋಷ್ಠಿ ಇದೀಗ ನಡೆಯುತ್ತಿದೆ. ಕಾಂತಾರ ಟೀಮ್ ಹಾಗೂ ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವರು ಈ ಕಾರ್ಯಕ್ರಮಲ್ಲದಲ್ಲಿ ಹಾಜರಿದ್ದಾರೆ. ಈ ಬಗ್ಗೆ ಲೈವ್‌ನಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾತನ್ನಾಡಿದ್ದಾರೆ. ಅವರು ಹೇಳಿರುವ ಮಾತುಗಳು ಹೀಗಿವೆ:-
'ಏನು ಹೇಳೋದು ಗೊತ್ತಾಗ್ತಿಲ್ಲ.. ನನಗೆ ಟಚ್ ಹೋದಂಗೆ ಆಗಿದೆ.. ಹೊಸದಾಗಿ ಬೆಂಗಳೂರಿಗೆ ಬಂದ ಹಾಗೆ ಆಗ್ತಿದೆ.. ಇದು ಒಂಥರಾ ಪಂಚವಾರ್ಷಿಕ ಯೋಜನೆ ಎನ್ನಬಹುದು. ಪರೀಕ್ಷೆಯಂತೆ ಬರೆದ್ರೂ ಹೇಳಲಾಗದು.. ನನ್ನ ಪತ್ನಿ ಪ್ರಗತಿ ಹರಕೆ ಹೊರತಿದ್ಲು, ಕುಂದಾಪುರದಲ್ಲಿ ಪೋಸ್ಟ್ ಪ್ರೊಡಕ್ಷನ್ ಆಯ್ತು..' ಎಂದಿದ್ದಾರೆ.
ಜೊತೆಗೆ, ರಿಷಬ್ ಶೆಟ್ಟುಯವರು ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ನನ್ನಿಂದ 'ಕಾಂತಾರ' ಅಲ್ಲ.. ಎಲ್ಲರೂ ಪಿಲ್ಲರ್‌ಗಳು.. ಖಂಡಿತ ನನ್ನೊಬ್ಬನಿಂದ ಆಗಿಲ್ಲ ಇದು.. 5 ವರ್ಷದಿಂದ ಸಿನಿಮಾ ಮಾಡಿದ್ದೀನಿ, ಆದ್ರೆ ಹೊಂಬಾಳೆ ಸಂಸ್ಥೆ ಯಾವತ್ತೂ ಬಜೆಟ್ ಬಗ್ಗೆ ಲೆಕ್ಕ ಕೇಳಲಿಲ್ಲ.. 3 ತಿಂಗಳಿಂದ ನಿದ್ರೆ ಮಾಡಿಲ್ಲನಾನು..
ಅವಘಡಗಳ ಬಗ್ಗೆ ಕೇಳ್ತಿದ್ರಿ.. 4-5 ಸಲ ನಾನೇ ಹೋಗ್ಬಿಡ್ತಿದ್ದೆ.. ಅಂಥಹ ರಿಸ್ಕಿ ಶೂಟಿಂಗ್ ಮಾಡಿದ್ವಿ ಈ ಸಿನಿಮಾಕ್ಕಾಗಿ.. ಆದರೆ ದೈವವೇ ಮತ್ತೆ ಕರೆದುಕೊಂಡು ಬಂದಿದೆ.. ಕಾಂತಾರ ಬಗ್ಗೆ ಹೇಳೋಕೆ ನನ್ನ ಬಳಿ ಪದಗಳಿಲ್ಲ.. ಇದು ನಂಗೆ ಎಮೋಷನಲ್ ಜರ್ನಿ... ವಿಶ್ವಮನ್ನಣೆ ಸಿಕ್ಕಿರೋದು ಕನ್ನಡಿಗರಿಂದ.. ನಿಮ್ಮಿಂದಲೇ ಚಾಪ್ಟರ್ 1 ಆಗಿದೆ.. ಈ ಸಿನಿಮಾ ಬಗ್ಗೆ ಜನರೇ ಮಾತಾಡ್ಬೇಕು..
ಕಾಂತಾರ ನಿಮ್ಮಿಂದ ನಿಮಗಾಗಿ!
ನನಗೆ ಸಾಮಾನ್ಯ ಜ್ಞಾನ ಹೋಗಿಬಿಟ್ಟಿದೆ.. ಸಿನಿಮಾದೊಳಗೆ ಸಂಪೂರ್ಣವಾಗಿ ಮುಳುಗಿದೀನಿ.. ಇನ್ನೊಂದು ಸಲ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ.. 'ಕಾಂತಾರ' ನಿಮ್ಮಿಂದ ನಿಮಗಾಗಿ.. ಮೊದಲ ಭಾಗ ಮಾಡಿದಾಗ ಅದು ಅಪ್ಪಟ ಕನ್ನಡದ ಸಿನಿಮಾ ಆಗಿತ್ತು. ಅದನ್ನು ದೇಶದ ಮಟ್ಟಕೆ ತೆಗೆದುಕೊಂದಿದ್ದು ಹೋಗಿದ್ದು ನಮ್ಮ ಜನರು.. ಹೀಗಾಗಿ ಈಗ ಬರ್ತಿರೋ ಕಾಂತಾರದಲ್ಲಿ ದೇಶದ ಹಲವು ಸಿನಿಮಾ ಮಂದಿ ಕೆಲ್ಸ ಮಾಡಿದ್ದಾರೆ.
ನಾನು ಈಗ ಹಳೆಯ ರಿಷಬ್ ಶೆಟ್ಟಿ ಅಲ್ಲ!
ಇದರಲ್ಲಿ ನಮ್ಮ ಜನ ಕೂಡ ಕೆಲಸ ಮಾಡಿದ್ದಾರೆ. ನಾನು ಈಗ ಹಳೆಯ ರಿಷಬ್ ಶೆಟ್ಟಿ ಅಲ್ಲ, ನನಗೆ ವಾಯ್ಸ್ ಬರ್ತಾ ಇಲ್ಲಾ.. ನಾರ್ಮಲಿ ನಾನು ತುಂಬಾ ಸ್ಟ್ರಾಂಗ್ ಆಗಿ ಇರ್ತೇನೆ.. ನೀವೆಲ್ಲ ಹೆಮ್ಮೆ ಪಡೋ ಸಿನಿಮಾ ಆಗುತ್ತೆ ಅಂತ ನಂಬಿದ್ದೇನೆ.. ಏಳು ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ..' ಎಂದಿದ್ದಾರೆ ಮುಂದಿನ ತಿಂಗಳು 2ರಂದು (02 October 2025) ಬಿಡುಗಡೆ ಕಾಣಲಿರುವ ಕಾಂತಾರ ಚಾಪ್ಟರ್ 1 ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ.
