ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ ಚಾಪ್ಟರ್ 1 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಜಗತ್ತಿನಾದ್ಯಂತೆ ಜನಮೆಚ್ಚುಗೆ ಗಳಿಸಿರುವ ಹಿನ್ನೆಲೆಯಲ್ಲಿ ಇದೀಗ ಕಾಂತಾರ ಪ್ರೀಕ್ವೆಲ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. 22 ರಂದು ಟ್ರೈಲರ್ ಬಿಡುಗಡೆ.
ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ (Rishab Shetty) ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1' ಟ್ರೇಲರ್ (Kantara Chapter 1) ನಾಡಿದ್ದು, ಅಂದರೆ 22 ಸೆಪ್ಟೆಂಬರ್ 2025ರಂದು ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಈ ಟ್ರೈಲರ್ ಲಾಂಚ್ ಸಾಕಷ್ಟು ವಿಶೇಷವಾಗಿ, ವಿಭಿನ್ನವಾಗಿ ಮೂಡಿಬರಲಿದೆ. ಕಾರಣ, ಸ್ವತಃ ಈ ಬಗ್ಗೆ ರಿಷಬ್ ಶೆಟ್ಟಿಯವರು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಅಧಿಕೃತ್ ಖಾತೆಯಿಂದ ಪೋಸ್ಟ್ ಮೂಲಕ ಖಾತ್ರಿ ಪಡಿಸಿದ್ದಾರೆ.
ಹೌದು, ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಪ್ರೀಕ್ವೆಲ್ 22 ಸೆಪ್ಟೆಂಬರ್ 2025 ರಂದು ನಡೆಯಲಿದೆ. ಹಿಂದಿ ಭಾಷೆಯ ಟ್ರೈಲರ್ ಬಿಡುಗಡೆಯನ್ನು ಬಾಲಿವುಡ್ ಹ್ಯಾಂಡ್‌ಸಮ್ ನಟ ಹೃತಿಕ್ ರೋಶನ್ ಮಾಡಲಿದ್ದಾರೆ. ಮಲಯಾಳಂ ಟ್ರೈಲರ್ ನಟ ಪ್ರಥ್ವಿರಾಜ್ ಸುಕುಮಾರ್ ಹಾಗೂ ತಮಿಳು ಟ್ರೈಲರ್ ನಟ ಶಿವಕಾರ್ತಿಕೇಯನ್ ಹಾಗೂ ತೆಲುಗು ವರ್ಷನ್ ಟ್ರೈಲರ್ ಅನ್ನು ನಟ ಡಾರ್ಲಿಂಗ್ ಪ್ರಭಾಸ್ ಮಾಡಲಿದ್ದಾರೆ. ಹಾಗಿದ್ದರೆ ಕನ್ನಡದ್ದು ಮಾಡೋದು ಯಾರು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಬಹುಶಃ ಅವರೇ, ಅಂದರೆ ಸ್ವತಃ ರಿಷಬ್ ಶೆಟ್ಟಿಯವರೇ ಎನ್ನಬಹುದು.
ಕನ್ನಡದ ಟ್ರೈಲರ್ ರಿಲೀಸ್ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಆದರೆ, ಅದನ್ನು ಗೆಸ್ ಮಾಡಬಹುದು. ಅದೇನೇ ಇರಲಿ, ಕಾಂತಾರ ಚಾಪ್ಟರ್-1 ಟ್ರೈಲರ್ ವಿಭಿನ್ನವಾಗಿ ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ಕನ್ನಡದ ಮಟ್ಟಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಕನ್ನಡದ ಸಿನಿಮಾ ಆಗಿರುವುದರಿಂದ ಅದು ಭಾರೀ ಸೌಂಡ್ ಮಾಡೋದು ಖಂಡಿತ. ಈ ಬಹುನಿರೀಕ್ಷಿತ ಸಿನಿಮಾ 02 ಅಕ್ಟೋಬರ್ 2025ರಂದು ಬಿಡುಗಡೆ ಆಗಲಿದೆ.
ಕನ್ನಡದ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ (Rishab Shetty) 'ಕಾಂತರ ಕ್ಯಾಪ್ಟರ್' 1 ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳು, ಅಂದರೆ ಸೆಪ್ಟೆಂಬರ್ 22ನೇ ತಾರೀಖಿನಂದು ಕಾಂತಾರ ಪ್ರೀಕ್ವೆಲ್ (Kantara Chapter 1) ಟ್ರೈಲರ್ ಬಿಡುಗಡೆ ಆಗಲಿದೆ. ಕಾಂತಾರ ಚಿತ್ರತಂಡವು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಧೀಖರಥ್ವಾಗಿ ಇದನ್ನು ಘೋಷಿಸಿಕೊಂಡಿದೆ.
22 ರಂದು ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್!
ಹೌದು, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸಿನಿಮಾ ಕಾಂತಾರ ಚಾಪ್ಟರ್ 1 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಜಗತ್ತಿನಾದ್ಯಂತೆ ಜನಮೆಚ್ಚುಗೆ ಗಳಿಸಿರುವ ಹಿನ್ನೆಲೆಯಲ್ಲಿ ಇದೀಗ ಕಾಂತಾರ ಪ್ರೀಕ್ವೆಲ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಅಕ್ಟೋಬರ್ 2 ರಂದು (2 October 2025) ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.
7 ಭಾಷೆಯಲ್ಲಿ ತೆರೆಗೆ ಬರಲಿರುವ ಕಾಂತರಾ ಚಾಪ್ಟರ್ 1
ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾ ಭಾರೀ ಬಜೆಟ್ ಹೊಂದಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ ಅವರು ಕೂಡ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯಿದೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ತಾರಾಗಣವೇ ಹೆಚ್ಚುಕಡಿಮೆ ಈ ಚಿತ್ರದಲ್ಲಿ ಕೂಡ ಇದೆ ಎನ್ನಲಾಗಿದೆ. ಆದರೆ, ತಾರಾಬಳಗ ಸೇರಿದಂತೆ ಹೆಚ್ಚಿನ ಯಾವುದೇ ಮಾಹಿತಿಯನ್ನು ರಿಷಬ್ ಶೆಟ್ಟಿ ಸಿನಿಮಾ ತಂಡ ಬಹಿರಂಗ ಪಡಿಸಿಲ್ಲ.
