'ನಾನು ತುಂಬಾ ಕಷ್ಟದ ಸಾಹಸ ದೃಶ್ಯವನ್ನು ಇದರಲ್ಲಿ ಕೊರಿಯಾಗ್ರಫಿ ಮಾಡಿದ್ದೇನೆ. ಇದರಲ್ಲಿ ತುಂಬಾನೇ ಕಷ್ಟದ ಹಲವಾರು ಸಾಹಸ ದೃಶ್ಯಗಳು ಇವೆ. ಆದರೆ ರಿಷಬ್ ಶೆಟ್ಟಿಯವರು ಯಾವುದಕ್ಕೂ ಅಳುಕದೇ ಇಲ್ಲವನ್ನೂ ಕಷ್ಟಪಟ್ಟು-ಇಷ್ಟಪಟ್ಟು ಮಾಡಿದ್ದಾರೆ. ಯಾವುದನ್ನೂ ಆಗಲ್ಲ ಅಂತ ಹೇಳ್ತಾ ಇರ್ಲಿಲ್ಲ: ಅರ್ಜುನ್ ರಾಜ್.
ಸಾಹಸ ದೃಶ್ಯಗಳ ಕೋರಿಯಾಗ್ರಫಿ ಮಾಡಿರುವ ಅರ್ಜುನ್ ರಾಜ್ ಮಾಸ್ಟರ್!
ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾದ ಟ್ರೈಲರ್ ಮಧ್ಯಾನ್ಹ ಬಿಡುಗಡೆಯಾಗಿ, ಇಂದು (22 September 2025) ಸುದ್ದಿಗೋಷ್ಠಿ ಇದೀಗ ನಡೆಯುತ್ತಿದೆ. ಕಾಂತಾರ ಟೀಮ್ ಹಾಗೂ ಜೂನಿಯರ್ ಎನ್‌ಟಿಆರ್ ಸೇರಿದಂತೆ ಹಲವರು ಈ ಕಾರ್ಯಕ್ರಮಲ್ಲದಲ್ಲಿ ಹಾಜರಿದ್ದಾರೆ. ಈ ಈವೆಂಟ್‌ನಲ್ಲಿ ಕಾಂತಾರ ಪ್ರೀಕ್ವೆಲ್‌ಗೆ ಸಾಹಸ ದೃಶ್ಯಗಳ ಕೋರಿಯಾಗ್ರಫಿ ಮಾಡಿರುವ ಅರ್ಜುನ್ ರಾಜ್ ಮಾಸ್ಟರ್ (Arjun Raj Master) ಕೂಡ ಅಲ್ಲಿ ಹಾಜರಿದ್ದಾರೆ. ಕಾಂತಾರ ಭಾಗ 1ರಲ್ಲಿ ತಾವು ಸೃಷ್ಟಿಸಿರುವ ಹಾಗೂ ರಿಷಬ್ ಶೆಟ್ಟಿ ಮಾಡಿರುವ ಸಾಹಸ ದೃಶ್ಯಗಳ ಬಗ್ಗೆ ಅವರು ಹೀಗೆ ಹೇಳಿದ್ದಾರೆ.
ಅರ್ಜುನ್ ಮಾಸ್ಟರ್ ಈ ಬಗ್ಗೆ 'ನಾನು ತುಂಬಾ ಕಷ್ಟದ ಸಾಹಸ ದೃಶ್ಯವನ್ನು ಇದರಲ್ಲಿ ಕೊರಿಯಾಗ್ರಫಿ ಮಾಡಿದ್ದೇನೆ. ಇದರಲ್ಲಿ ತುಂಬಾನೇ ಕಷ್ಟದ ಹಲವಾರು ಸಾಹಸ ದೃಶ್ಯಗಳು ಇವೆ. ಆದರೆ ರಿಷಬ್ ಶೆಟ್ಟಿಯವರು ಯಾವುದಕ್ಕೂ ಅಳುಕದೇ ಇಲ್ಲವನ್ನೂ ಕಷ್ಟಪಟ್ಟು-ಇಷ್ಟಪಟ್ಟು ಮಾಡಿದ್ದಾರೆ. ಯಾವುದನ್ನೂ ಆಗಲ್ಲ ಅಂತ ಹೇಳ್ತಾ ಇರ್ಲಿಲ್ಲ. ನನ್ನ ಜೀವ ಇರೋವರೆಗೆ ಟ್ರೈ ಮಾಡ್ತೇನೆ ಅಂತ ಹೇಳಿ ಸಾಹಸ ದೃಶ್ಯ ಮಾಡ್ತಿದ್ರು..' ಎಂದಿದ್ದಾರೆ.
ಕಾಂತರಾಕ್ಕೆ ಡಾನ್ಸ್ ಕೊರಿಯೋಗ್ರಫಿ ಮಾಡಿರೋದು ಭೂಷಣ್ ಮಾಸ್ಟರ್!
ಕಾಂತಾರ ಚಾಪ್ಟರ್ 1'ಕ್ಕೆ ಡಾನ್ಸ್ ಕೋರಿಯಾಗ್ರಫಿ ಮಾಡಿರೋದು ಭೂಷಣ್ ಮಾಸ್ಟರ್. ಅವರೂ ಕೂಡ ಮಾತನ್ನಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಾಂತಾರ-1 ಜೊತೆ ಇಂಡಿಯಾ ಪೋಸ್ಟ್ ಕುಡ ಕೈ ಜೋಡಿಸಿ, ಪೋಸ್ಟ್
ವಿಶೇಷ ಲಕೋಟೆ ಅನಾವರಣ ಮಾಡಿದೆ. ಈ ಮೂಲಕ ಇದೊಂದು ಇಡೀ ಭಾರತದ ಅಂದ್ರೆ, ಪ್ಯಾನ್ ಇಂಡಿಯಾ ಸಿನಿಮಾ ಎಂಬುದನ್ನು ಸಾಕ್ಷೀಕರಿಸಿದೆ ಎನ್ನಬಹುದು.
ರಿಷಬ್ ಪತ್ನಿ ಪ್ರಗತಿ ಶೆಟ್ಟಿ!
ಕಾಂತಾರ ಚಾಪ್ಟರ್ 1ಕ್ಕೆ ವಸ್ತ್ರ ವಿನ್ಯಾಸ ಮಾಡಿರೋದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ. ಅವರು ಕೂಡ ಇಂದಿನ ಗ್ರಾಂಡ್ ಈವೆಂಟ್‌ನಲ್ಲಿ ಹಾಜರಿದ್ದಾರೆ. ಅಲ್ಲಿ ಅವರು ನಟ ಹಾಗೂ ತಮ್ಮ ಪತಿ ರಿಷಬ್ ಎಫರ್ಟ್ ಬಗ್ಗೆ ಮಾತನಾಡತ್ತಾ ಎಮೋಷನಲ್ ಆಗಿದ್ದಾರೆ. 'ಅವರ ಕಠಿಣ ಪರಿಶ್ರಮ ಹಾಗೂ ಕೆಲಸ ಮಾಡುವ ರೀತಿ ಕಂಡು ನಾನು ಅಚ್ಚರಿ ಅನುಭವಿಸಿದ್ದೇನೆ' ಎಂದಿದ್ದಾರೆ.
ರಿಷಬ್ ಶೆಟ್ಟಿ ಫುಲ್ ಮಿಂಚಿಂಗ್!
ಇನ್ನು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಈ ಈವೆಂಟ್‌ನಲ್ಲಿ ಹೆಚ್ಚು ಹೇಳಲೇಬೇಕಿಲ್ಲ. ಅವರೇ ಈ 'ಕಾಂತಾರ ಚಾಪ್ಟರ್ -1' ರ ರೂವಾರಿ. ಅವರೇ ಇಡೀ ಸ್ಟೇಜ್‌ನ ಕೇಂದ್ರ ಬಿಂದು. ಜೊತೆಗೆ, ನಾಯಕಿ ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಚಿತ್ರತಂಡ ಹಾಗೂ ಮಾಧ್ಯಮದವರು ಅಲ್ಲಿ ಒಟ್ಟಾಗಿದ್ದಾರೆ. ಬಹಳಷ್ಟು ಸ್ಟಾರ್‌ಗಳೂ ಈ ಕಾರ್ಯಕ್ರಮಕ್ಕೆ ಬಂದಿದ್ದು ಆ ಪಟ್ಟಿ ತುಂಬಾ ದೊಡ್ಡದಿದೆ. ಇಂದು ಕಾಂತಾರ ಭಾಗ-1ರ ಟ್ರೈಲರ್ ಬಿಡುಗಡೆ ಆಗಿದ್ದು, ಈ ಚಿತ್ರವು 02 ಅಕ್ಟೋಬರ್ 2025ರಂದು ಇಡೀ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.
