ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Sep 2018, 7:59 AM IST
Rashmika Mandanna Break Off Engangement With Rakshith Shetty Reports
Highlights

ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿರುವುದು ನಿಜ ಎಂದು ಕುಟುಂಬದ ಆಪ್ತ ಮೂಲಗಳಿಂದಲೇ ಮಾಹಿತಿ ಹರಿದಾಡಿದೆ.  

ಬೆಂಗಳೂರು : ಕಿರಿಕ್ ಪಾರ್ಟಿ ಸಿನಿಮಾದಿಂದ ರಿಯಲ್ ಲೈಫಲ್ಲೂ ಒಂದಾಗಿದ್ದ ರಶ್ಮಿಕಾ - ರಕ್ಷಿತ್ ಶೆಟ್ಟಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ಖಚಿತವಾಗಿದೆ.  ವೈಯಕ್ತಿಕ ವಿಚಾರವಾಗಿರುವುದರಿಂದ ದಯವಿಟ್ಟು ಈ ಬಗ್ಗೆ ಕೇಳಬೇಡಿ ಎಂದು ರಶ್ಮಿಕಾ ಕುಟುಂಬ ಹೇಳಿದೆ. 

ರಶ್ಮಿಕಾ ಸದ್ಯ ಟಾಲಿವುಡ್  ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ.  'ಚಲೋ'ನಿಂದ ಆರಂಭವಾದ ಟಾಲಿವುಡ್ ಜರ್ನಿ ಇದೀಗ 'ಗೀತ ಗೋವಿಂದಂ' ಸಿನಿಮಾದ ಮೂಲಕ ಯಶಸ್ವಿಯಾಗಿ ಮುಂದುವರಿಯುತ್ತಿದೆ.

ಬ್ರೇಕ್ ಸುಳ್ಳು ಎಂದ ರಶ್ಮಿಕಾ

ಇದೀಗ ಇಬ್ಬರ ನಡುವೆ  ಬ್ರೇಕಪ್ ನ್ಯೂಸ್ ನಿಜ ಎಂದು ಕುಟುಂಬದ ಆಪ್ತ ಮೂಲಗಳು ಹೇಳುತ್ತಿವೆ. ಇದು ತೀರಾ ಖಾಸಗಿ ವಿಚಾರವಾಗಿದ್ದು ನಮಗೆ ಪ್ರೈವೆಸಿ ಕೊಡಿ ಎಂದ ರಶ್ಮಿಕಾ ಕುಟುಂಬ ಮನವಿ ಮಾಡಿದೆ.  ಆದರೆ ರಕ್ಷಿತ್ ಶೆಟ್ಟಿ ಕುಟುಂಬ ಮಾತ್ರ ಈಗಲು ಈ ಸುದ್ದಿ ಸುಳ್ಳೆನ್ನುತ್ತಿದ್ದಾರೆ.

ರಶ್ಮಿಕಾ ಸದ್ಯ ತೆಲುಗಿನ ನಾಗಾರ್ಜುನ ನಾನಿ ಜೊತೆ ತೆಲುಗಿನ ದೇವದಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಜೊತೆಗೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.  ಕನ್ನಡದಲ್ಲಿ ದರ್ಶನ್ ಜೊತೆ 'ಯಜಮಾನ' ಸಿನಿಮಾದಲ್ಲಿಯೂ ಕೂಡ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರಂತೆ.

ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತುಕೆತನ್ನು ನಡೆಸಲಾಗಿದೆ. 

'ಗೀತಗೋವಿಂದಂ' ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರೊಂದಿಗೆ ಲಿಪ್‌ಲಾಕ್ ಸೀನ್‌ ನಡೆಸಿದ್ದು, ವಿಪರೀತ ಸುದ್ದಿಯಾಗಿದ್ದು, ಅವರೊಂದಿಗೆ ರಶ್ಮಿಕಾ ಗಪ್ ಚುಪ್ ನಡೆಯುತ್ತಿದೆ ಎಂಬ ಮಾತುಗಳೂ ಕೇಳುತ್ತಿವೆ.

'ಕಿರಿಕ ಪಾರ್ಟಿ' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರೊಂದಿಗೆ ಸೃಜನಶೀಲ ನಿರ್ದೇಶಕ, ನಟನೆಂದು ಕನ್ನಡ ಚಿತ್ರರಂಗದಲ್ಲಿ ಖ್ಯಾತರಾದ ರಕ್ಷಿತ್ ಶೆಟ್ಟಿಯೊಂದಿಗೆ ಜು.2, 2017ರಂದು ನಿಶ್ಚಿತಾರ್ಥವಾಗಿತ್ತು. ಇನ್ನೆರಡು ವರ್ಷಗಳ ನಂತರ ಮದುವೆ ಎಂದು ಓಡಾಡಿಕೊಂಡಿದ್ದ ಈ ಜೋಡಿ, ಗಾಸಿಪ್‌ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ಹೊರಬಂದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದೀಗ ಬ್ರೇಕ್ ಅಪ್ ಸುದ್ದಿಯನ್ನು ರಶ್ಮಿಕಾ ಕುಟುಂಬ ಸ್ಪಷ್ಟಪಡಿಸಿದೆ.

ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ

loader