ನಿಶ್ಚಿತಾರ್ಥ ಬ್ರೇಕ್ ಅಪ್ ಅಂದಿದ್ದಕ್ಕೆ ಸಿಟ್ಟಾದ ರಶ್ಮಿಕಾ ?
ಗೀತಾ ಗೋವಿಂದಂ ತೆಲುಗು ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ರಶ್ಮಿಕಾ ರನ್ನು ಎತ್ತಿಕೊಂಡಿರುವ ಭಾವಚಿತ್ರ ಎಲ್ಲಡೆ ಟ್ರೋಲ್ ಹಾಕಿದ್ದು ಕೆಲವು ಅಭಿಮಾನಿಗಳಂತೂ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಬೆಂಗಳೂರು[ಆ.02]: ರಶ್ಮಿಕಾ ಎಲ್ಲರಿಗೂ ಗೊತ್ತಿರುವಂತೆ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಸಿನಿಮಾ ಮಾಡಿದ್ರು. ಈ ಸಿನಿಮಾ ವೇಳೆಯಲ್ಲೆ ಇಬ್ಬರಿಗೂ ಲವ್ವಾಯ್ತು. ನಂತರ ನಿಶ್ಚಿತಾರ್ಥ ಆಯ್ತು. ನಿಶ್ಚಿತಾರ್ಥವಾಗಿ ಒಂದು ವರ್ಷವಾದರೂ ಮದುವೆ ಮಾತಿಲ್ಲ. ಇಬ್ಬರೂ ನಾವು ತುಂಬಾ ಲವ್ ಮಾಡ್ತಿದ್ದಿವಿ ಇನ್ನೂ ಲವ್ವಲ್ಲೆ ಇರ್ಬೇಕು ಅನ್ಕೊಂಡಿದ್ದೀವಿ ಅಂತ ಮದುವೆ ದಿನಾಂಕವನ್ನು ಮುಂದಕ್ಕೆ ಹಾಕಿದ್ರು.
ಆದರೆ ಕಿರಿಕ್ ಪಾರ್ಟಿ ಸಾನ್ವಿಗೆ ಈಗ ಹೊಸ ತಲೆ ನೋವು ಶುರುವಾಗಿದೆ. ಇತ್ತೀಚಿಗೆ ಟಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ಸ್ಮೈಲ್ ಸುಂದರಿ ರಶ್ಮಿಕಾ ಟ್ರೋಲಿಗರ ಕಮೆಂಟ್ ಗಳಿಂದ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.
ಗೀತಾ ಗೋವಿಂದಂ ತೆಲುಗು ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ರಷ್ಮಿಕಾರನ್ನು ಎತ್ತಿಕೊಂಡಿರುವ ಭಾವಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇದು ಟ್ರೋಲಿಗೆ ಆವೇಷಕ್ಕೆ ತುತ್ತಾಗಿ ಕೆಲವು ಅಭಿಮಾನಿಗಳಂತೂ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ನೀವು ಇಂತಹ ಪಾತ್ರಗಳನ್ನು ಮಾಡುವುದರಿಂದ ರಕ್ಷಿತ್ ಶೆಟ್ಟಿ ಮಾರ್ಯದೆ ಹೋಗ್ತಾ ಇದೆ. ರಶ್ಮಿಕಾ ನಿಮಗೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದೆ. ನೀವು ಈ ರೀತಿಯ ಸಿನಿಮಾ ಮಾಡಿ ರಕ್ಷಿತ್ ಹೆಸರನ್ನು ಹಾಳು ಮಾಡಬಾರದು. ರಕ್ಷಿತ್'ಗೆ ರಶ್ಮಿಕಾ ಕೈಕೊಡೋದು ಗ್ಯಾರೆಂಟಿ. ರಕ್ಷಿತ್ ಬೇಗ ಮದುವೆ ಆಗ್ಬಿಡಿ ಇಲ್ಲಾಂದ್ರೆ ಹಕ್ಕಿ ಹಾರಿ ಹೋಗುತ್ತೆ. ಹೀಗೆ ಅಸಭ್ಯ ಕಾಮೆಂಟ್'ಗಳನ್ನು ಹಾಕಿದ್ದಾರೆ.
ಕೆಂಡಮಂಡಲವಾದ ರಶ್ಮಿಕಾ
ಈ ಕಮೆಂಟ್ ಗಳಿಗೆ ಕೋಪದಿಂದ ಪ್ರತಿಕ್ರಿಯಿಸಿರುವ ರಶ್ಮಿಕಾ, ನಾನು ರಕ್ಷಿತ್ ರನ್ನು ಪ್ರೀತಿಸುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ನೀವು ಕಮೆಂಟ್ ಮಾಡುವುದು ಸರಿಯಲ್ಲ.ವಿಜಯ್ ನನ್ನ ಆತ್ಮೀಯ ಗೆಳೆಯ ಅಷ್ಟೇ. ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಮಾತನಾಡೋದಿಕ್ಕೆ ಯಾರಿಗೂ ಹಕ್ಕಿಲ್ಲ. ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ಅಷ್ಟೇ ಅಂತಾ ಕಿರಿಕ್ ಬೆಡಗಿ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.