ನಿಶ್ಚಿತಾರ್ಥದಲ್ಲಿ 1500 ಮಂದಿ ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ. ಹಲವು ಮಂದಿ ಸಿನಿಮಾ ದಿಗ್ಗಜರು, ಜನಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿ ಕುಟುಂಬಸ್ಥರು ಉಡುಪಿಯಿಂದ ಭಾನುವಾರವೇ ವೀರಾಜಪೇಟೆಗೆ ಆಗಮಿಸಲಿದ್ದಾರೆ.

ಮಡಿಕೇರಿ(ಜು.02): ಕನ್ನಡದ ಉದಯೋನ್ಮುಕ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚತಾರ್ಥ ಸಮಾರಂಭ ನಾಳೆ (ಜು.03) ಸಂಜೆ ವಿರಾಜಪೇಟೆಯಲ್ಲಿರುವ ಮಂದಣ್ಣ ಅವರ ಮಾಲೀಕತ್ವದ ಸೆರೆನಿಟಿ ಹಾಲ್'ನಲ್ಲಿ ನಡೆಯಲ್ಲಿದೆ. ನಿಶ್ಚಿತಾರ್ಥದಲ್ಲಿ 1500 ಮಂದಿ ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ. ಹಲವು ಮಂದಿ ಸಿನಿಮಾ ದಿಗ್ಗಜರು, ಜನಪ್ರತಿನಿಧಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿ ಕುಟುಂಬಸ್ಥರು ಉಡುಪಿಯಿಂದ ಭಾನುವಾರವೇ ವೀರಾಜಪೇಟೆಗೆ ಆಗಮಿಸಲಿದ್ದಾರೆ. ರಕ್ಷಿತ್ ಶೆಟ್ಟಿ ಕೆಲವು ದಿನಗಳಿಂದ ವಿರಾಜಪೇಟೆಯಲ್ಲಿಯೇ ತಂಗಿದ್ದು ನಿಶ್ಚಿತಾರ್ಥ ಕಾರ್ಯಕ್ರಮದ ಸಿದ್ಧತೆ ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ರಶ್ವಿಕಾ ಮಂದಣ್ಣ ದುಬೈನಲ್ಲಿ ಶೂಟಿಂಗ್'ನಲ್ಲಿದ್ದು, ಭಾನುವಾರ ರಾತ್ರಿ ವಿರಾಜಪೇಟೆಗೆ ಆಗಮಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred