ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹನಿಮೂನ್ ಫೋಟೋವೊಂದು ಹೊರಬಿದ್ದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮದುವೆ ಆದ್ಮೇಲೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಥೈಲ್ಯಾಂಡ್‌ಗೆ ಹನಿಮೂನ್‌ಗೆ ಹೋಗಿದ್ದರು. ಈ ವಿಚಾರವನ್ನು ಸೀಕ್ರೆಟ್ ಆಗಿ ಇಟ್ಟಿದ್ದರು. ಆದ್ರೆ, ಈಗ ಇವರ ಹನಿಮೂನ್ ಫೋಟೋ ಒಂದು ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ. ಈ ಜೋಡಿ ಥೈಲ್ಯಾಂಡ್‌ನ ಕೋಹ್ ಸಮುಯಿಯ ಖಾಸಗಿ ವಿಲ್ಲಾದಲ್ಲಿ ಉಳಿದುಕೊಂಡಿದ್ದು, ಇವರ ಸಿಂಪಲ್ ಹಾಗೂ ರೊಮ್ಯಾಂಟಿಕ್ ಲುಕ್ ಫ್ಯಾನ್ಸ್‌ಗೆ ಸಖತ್ ಇಷ್ಟವಾಗಿದೆ.

ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹನಿಮೂನ್ ಫೋಟೋವೊಂದು ಹೊರಬಿದ್ದಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಜೋಡಿ ಥೈಲ್ಯಾಂಡ್‌ನ ಸುಂದರ ತಾಣ ಕೋಹ್ ಸಮುಯಿಯಿಂದ ವಾಪಸ್ ಆಗಿದ್ದಾರೆ. ಅಲ್ಲಿ ಜನಜಂಗುಳಿಯಿಂದ ದೂರವಿದ್ದು, ಒಂದು ಖಾಸಗಿ ವಿಲ್ಲಾದಲ್ಲಿ ಇಬ್ಬರೂ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಅಂದಹಾಗೆ, ಈ ಜೋಡಿ ಯಾವುದೇ ಐಷಾರಾಮಿ ಹೋಟೆಲ್ ಬದಲಿಗೆ, ಖಾಸಗಿತನಕ್ಕೆ ಹೆಚ್ಚು ಒತ್ತು ನೀಡಿ ಸಿಂಪಲ್ ಆಗಿ ಕಾಲ ಕಳೆದಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರೂ ಕೂಲ್ ಮತ್ತು ರಿಲ್ಯಾಕ್ಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಈ ಸ್ಟೈಲ್ ತುಂಬಾ ಇಷ್ಟವಾಗಿದೆ.

ಖಾಸಗಿ ವಿಲ್ಲಾದಲ್ಲಿ ವಿಜಯ್-ರಶ್ಮಿಕಾ ನೆಮ್ಮದಿಯ ಹನಿಮೂನ್

ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ತಮ್ಮ ಹನಿಮೂನ್‌ಗಾಗಿ ಥೈಲ್ಯಾಂಡ್‌ನ ಕೋಹ್ ಸಮುಯಿಯಲ್ಲಿ ಒಂದು ಪ್ರೈವೇಟ್ Airbnb ವಿಲ್ಲಾವನ್ನು ಬುಕ್ ಮಾಡಿದ್ದರು. ಇದು ಅವರ ವೈಯಕ್ತಿಕ ಮತ್ತು ಸರಳ ಜೀವನಶೈಲಿಯನ್ನು ತೋರಿಸುತ್ತದೆ ಎನ್ನಲಾಗಿದೆ. ಈ ವಿಲ್ಲಾ ಸಮುದ್ರ ತೀರದಲ್ಲಿದ್ದು, ಅವರಿಗೆ ಸಂಪೂರ್ಣ ಖಾಸಗಿತನ ಮತ್ತು ನೆಮ್ಮದಿಯನ್ನು ನೀಡಿತ್ತು.

ವೈರಲ್ ಫೋಟೋದಲ್ಲಿ ಜೋಡಿಯ ಕ್ಯೂಟ್ ಮತ್ತು ಕ್ಯಾಶುಯಲ್ ಲುಕ್

ವೈರಲ್ ಆಗಿರೋ ಫೋಟೋದಲ್ಲಿ, ಈ ಜೋಡಿ ವಿಲ್ಲಾದ ಹೊರಗೆ ಆರಾಮವಾಗಿ ಕಾಲ ಕಳೆಯುತ್ತಿರುವುದು ಕಾಣಿಸುತ್ತಿದೆ. ರಶ್ಮಿಕಾ ಬಿಳಿ ಬಣ್ಣದ ಫ್ಲೋರಲ್ ಮಿಡಿ ಡ್ರೆಸ್ ಧರಿಸಿದ್ದರೆ, ವಿಜಯ್ ಬಿಳಿ ಟೀ-ಶರ್ಟ್ ಮತ್ತು ಡಾರ್ಕ್ ಟ್ರ್ಯಾಕ್ ಪ್ಯಾಂಟ್‌ನಲ್ಲಿದ್ದಾರೆ. ಇಬ್ಬರೂ ಚಪ್ಪಲಿ ಹಾಕದೆ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ವೆಕೇಷನ್ ಮೂಡ್‌ನಲ್ಲಿ ರಿಲ್ಯಾಕ್ಸ್ ಆಗಿರುವುದನ್ನು ತೋರಿಸುತ್ತದೆ.

View post on Instagram

ಉದಯಪುರದಲ್ಲಿ ನಡೆದಿತ್ತು ವಿಜಯ್-ರಶ್ಮಿಕಾ ಮದುವೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26, 2026 ರಂದು ಉದಯಪುರದ ITC ಮೆಮೆಂಟೋಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಕೇವಲ ಆಪ್ತರು ಮಾತ್ರ ಸಾಕ್ಷಿಯಾಗಿದ್ದರು. ಆಂಧ್ರ ಮತ್ತು ಕೊಡವ ಸಂಪ್ರದಾಯಗಳ ಪ್ರಕಾರ ಮದುವೆ ನಡೆದಿತ್ತು. ನಂತರ ಮಾರ್ಚ್ 4, 2026 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡ ನಡೆದಿತ್ತು. ವಿಜಯ್ ಮತ್ತು ರಶ್ಮಿಕಾ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. 2018ರಲ್ಲಿ 'ಗೀತ ಗೋವಿಂದಂ' ಸಿನಿಮಾ ಸೆಟ್‌ನಲ್ಲಿ ಇಬ್ಬರಿಗೂ ಮೊದಲ ಬಾರಿಗೆ ಪರಿಚಯವಾಗಿತ್ತು. 2019ರಲ್ಲಿ ಬಂದ 'ಡಿಯರ್ ಕಾಮ್ರೇಡ್' ಸಿನಿಮಾ ಸಮಯದಲ್ಲಿ ಇಬ್ಬರ ಪ್ರೀತಿ ಗಟ್ಟಿಯಾಗಿತ್ತು. ಅಕ್ಟೋಬರ್ 2025 ರಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಈ ಜೋಡಿ ಮುಂದೆ 'ರಣಬಲಿ' ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಸೆಪ್ಟೆಂಬರ್ 11, 2026 ರಂದು ತೆರೆಗೆ ಬರಲಿದೆ.