ಕಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹೇಳಿಕೊಂಡು ಇದ್ದ ರಾನು ಮೊಂಡಲ್ ಸೋಷಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿದ್ದೇ ತಡ ಅವರ ಸ್ಟಾರೇ ಬದಲಾಗಿ ಹೀಗಿದೆ. ಆಫರ್ ಗಳು ಹುಡುಕಿಕೊಂಡು ಬರಲು ಶುರುವಾಗಿವೆ. 

ರಾನು ಮಂದಾಲ್ ಗೆ 55 ಲಕ್ಷದ ಐಷಾರಾಮಿ ಮನೆ ಗಿಫ್ಟ್ ಕೊಟ್ರಾ ಸಲ್ಲುಭಾಯ್?

ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ‘ತೇರಿ ಮೇರಿ ಕಹಾನಿ’ ಎನ್ನುವ ಹಾಡನ್ನು ಹೇಳಲು ಅವಕಾಶ ಕೊಟ್ಟರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ರಾನುಗೆ ಇನ್ನೊಂದು ಅವಕಾಶ ಕೊಟ್ಟಿದ್ದಾರೆ ಹಿಮೇಶ್ ರೇಶಮಿಯಾ. 

ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂದಾಲ್; ಯಾರೀಕೆ?

ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾಗಾಗಿ ‘ಆಶಿಕಿ ಮೇ ತೇರಿ...’ ಎನ್ನುವ ಹಾಡೊಂದನ್ನು ಹಾಡಿದ್ದಾರೆ. ಇವರ ಜೊತೆ ಹಿಮೇಶ್ ಕೂಡಾ ಹಾಡಿದ್ದಾರೆ. ಹಾಡಿನ ತುಣುಕೊಂದನ್ನು ಅಪ್ಲೋಡ್ ಮಾಡಿ, ಪ್ರೀತಿಯಿಂದ ಸಪೋರ್ಟ್ ಮಾಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.